ಗುರುವಾರ, ಜನವರಿ 17, 2019

Hurigadale chutney pudi recipe in Kannada | ಹುರಿಗಡಲೆ ಚಟ್ನಿ ಪುಡಿ ಮಾಡುವ ವಿಧಾನ

Hurigadale chutney pudi recipe in Kannada

Hurigadale chutney pudi recipe in Kannada | ಹುರಿಗಡಲೆ ಚಟ್ನಿ ಪುಡಿ ಮಾಡುವ ವಿಧಾನ 

ಹುರಿಗಡಲೆ ಚಟ್ನಿ ಪುಡಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಹುರಿಗಡಲೆ
  2. 1/2 ಕಪ್ ಒಣ ಕೊಬ್ಬರಿ ತುರಿದಿದ್ದು
  3. 1/2 ಟೀಸ್ಪೂನ್ ಕೊತ್ತಂಬರಿ ಬೀಜ
  4. ಒಂದು ಎಸಳು ಕರಿಬೇವು
  5. 1/2 ಟೀಸ್ಪೂನ್  ಬೆಲ್ಲ
  6. ಸಣ್ಣ ಗೋಲಿ ಹಣ್ಣಿನ ಗಾತ್ರದ ಹುಣಿಸೇಹಣ್ಣು
  7. 1.5 - 2 ಟೀಸ್ಪೂನ್ ಅಚ್ಚಖಾರದ ಪುಡಿ
  8. 1/4 ಟೀಸ್ಪೂನ್ ಇಂಗು ಅಥವಾ 3 - 4 ಎಸಳು ಬೆಳ್ಳುಳ್ಳಿ
  9. ಉಪ್ಪು ರುಚಿಗೆ ತಕ್ಕಷ್ಟು
  10. 1 ಟೀಸ್ಪೂನ್ ಅಡುಗೆ ಎಣ್ಣೆ

ಹುರಿಗಡಲೆ ಚಟ್ನಿ ಪುಡಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಕೊತ್ತಂಬರಿ ಬೀಜ ಮತ್ತು ಕರಿಬೇವು ಹಾಕಿ. ಕರಿಬೇವು ಗರಿಗರಿಯಾಗುವವರೆಗೆ ಹುರಿಯಿರಿ. 
  2. ಆಮೇಲೆ ಕೊಬ್ಬರಿತುರಿ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. 
  3. ನಂತ್ರ ಅದಕ್ಕೆ ಹುರಿಗಡಲೆ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.
  4. ಉಪ್ಪು, ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ. 
  5. ನಿಮ್ಮ ಖಾರಕ್ಕೆ ತಕ್ಕಂತೆ ಅಚ್ಚ ಖಾರದ ಪುಡಿ ಸೇರಿಸಿ. 
  6. ಇಂಗು ಅಥವಾ ಬೆಳ್ಳುಳ್ಳಿ ಸೇರಿಸಿ. 
  7. ಒಂದು ಸುತ್ತು ಮಗುಚಿ, ಸ್ಟವ್ ಆಫ್ ಮಾಡಿ. 
  8. ಬಿಸಿ ಆರಿದ ಮೇಲೆ ನುಣ್ಣನೆ ಪುಡಿಮಾಡಿಕೊಳ್ಳಿ.
  9. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ದೋಸೆ, ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ. 


ಶುಕ್ರವಾರ, ಜನವರಿ 11, 2019

Avarekalu bath recipe in Kannada | ಅವರೇಕಾಳು ಬಾತ್ ಮಾಡುವ ವಿಧಾನ

Avarekalu bath recipe in Kannada

Avarekalu bath recipe in Kannada | ಅವರೇಕಾಳು ಬಾತ್ ಮಾಡುವ ವಿಧಾನ 

ಅವರೇಕಾಳು ಬಾತ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 1 ಕಪ್ ಅವರೇಕಾಳು
  3. 1 ಬದನೇಕಾಯಿ
  4. 3 ಟೇಬಲ್ ಚಮಚ ಅಡುಗೆ ಎಣ್ಣೆ 
  5. 1/2 ಚಮಚ ಸಾಸಿವೆ 
  6. 1 ಟೀಸ್ಪೂನ್ ಉದ್ದಿನ ಬೇಳೆ 
  7. 1 ಟೀಸ್ಪೂನ್ ಕಡಲೆಬೇಳೆ 
  8. 4 - 5 ಕರಿಬೇವಿನ ಎಲೆ 
  9. 2 ಟೇಬಲ್ ಚಮಚ ನೆಲಗಡಲೆ
  10. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  11. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  12. 1/4 ಟೀಸ್ಪೂನ್ ಅರಶಿನ ಪುಡಿ
  13. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:

  1. 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
  2. 2 ಟೀಸ್ಪೂನ್ ಉದ್ದಿನ ಬೇಳೆ
  3. 2 ಟೀಸ್ಪೂನ್ ಕಡಲೆಬೇಳೆ 
  4. 3 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಬೆರಳುದ್ದ ಚಕ್ಕೆ
  6. 4 - 5 ಲವಂಗ
  7. 7 - 8 ಕಾಳುಮೆಣಸು
  8. 1/4 ಕಪ್ ತೆಂಗಿನ ತುರಿ

ಅವರೇಕಾಳು ಬಾತ್ ಮಾಡುವ ವಿಧಾನ:

  1. ಮೊದಲಿಗೆ ಅವರೇಕಾಳು ಬಿಡಿಸಿಟ್ಟುಕೊಳ್ಳಿ. ಹಾಗೆ ಬದನೆಕಾಯಿಯನ್ನು ತೆಳುವಾಗಿ ಕತ್ತರಿಸಿ, ನೀರಿನಲ್ಲಿ ಹಾಕಿಡಿ. 
  2. ಆಮೇಲೆ ಒಂದು ಕುಕ್ಕರ್ ನಲ್ಲಿ ಅಕ್ಕಿಯನ್ನು ತೊಳೆದು, ಅವರೇಕಾಳು ಸೇರಿಸಿ, ಒಂದು ಚಮಚ ಉಪ್ಪು ಮತ್ತು ಸ್ವಲ್ಪ ಉಪ್ಪು ಸೇರಿಸಿ. 
  3. ಅಗತ್ಯವಿದ್ದಷ್ಟು ನೀರು (ಎರಡೂವರೆಯಿಂದ ಮೂರು ಕಪ್) ಸೇರಿಸಿ ಎರಡು ವಿಷಲ್ ಮಾಡಿ ಬೇಯಿಸಿಟ್ಟು ಕೊಳ್ಳಿ. 
  4. ನಂತರ "ಮಸಾಲೆ ಪುಡಿ" ಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿದು ಪುಡಿಮಾಡಿಟ್ಟುಕೊಳ್ಳಬೇಕು. 
  5. ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕೊತ್ತಂಬರಿ ಬೀಜ ಹುರಿಯಿರಿ. 
  6. ಚಕ್ಕೆ, ಲವಂಗ, ಕಾಳುಮೆಣಸು ಮತ್ತು ಗಸಗಸೆ ಸೇರಿಸಿ ಹುರಿಯಿರಿ. 
  7. ಕೊನೆಯಲ್ಲಿ ಕೊಬ್ಬರಿ ತುರಿ ಸೇರಿಸಿ ಹುರಿದು, ಸ್ಟವ್ ಆಫ್ ಮಾಡಿ.
  8. ಬಿಸಿ ಆರಿದ ಮೇಲೆ, ಪುಡಿ ಮಾಡಿಟ್ಟುಕೊಳ್ಳಿ.  
  9. ಆಮೇಲೆ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ. 
  10. ನೆಲಗಡಲೆ ಹಾಕಿ ಹುರಿಯಿರಿ. 
  11. ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  12. ಕರಿಬೇವು, ಕತ್ತರಿಸಿದ ಬದನೇಕಾಯಿ ಮತ್ತು ಅರಿಶಿನ ಪುಡಿ ಸೇರಿಸಿ, ಕೈಯಾಡಿಸಿ. 
  13. ನಂತರ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಸೇರಿಸಿ. 
  14. ಮುಚ್ಚಳ ಮುಚ್ಚಿ ಬದನೇಕಾಯಿ ಮೆತ್ತಗಾಗುವವರೆಗೆ ಬೇಯಿಸಿ. 
  15. ಕೊನೆಯಲ್ಲಿ ಮಸಾಲೆ ಪುಡಿ ಹಾಕಿ. ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ. 
  16. ಬೇಯಿಸಿಟ್ಟ ಅನ್ನ ಮತ್ತು ಅವರೇಕಾಳು ಹಾಕಿ ಕಲಸಿ. ಬಿಸಿ ಬಿಸಿಯಾಗಿ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಜನವರಿ 9, 2019

Ellu unde recipe in Kannada | ಎಳ್ಳು ಉಂಡೆ ಮಾಡುವ ವಿಧಾನ

Ellu unde recipe in Kannada

Ellu unde recipe in Kannada | ಎಳ್ಳು ಉಂಡೆ ಮಾಡುವ ವಿಧಾನ 

ಎಳ್ಳು ಉಂಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಎಳ್ಳು
  2. 1/4 ಕಪ್ ಕೊಬ್ಬರಿ
  3. 1/2 ಕಪ್ ಬೆಲ್ಲ (ನಾನು ಸ್ವಲ್ಪ ಕಡಿಮೆ ಬಳಸಿದ್ದೇನೆ)
  4. ಒಂದು ಏಲಕ್ಕಿ

ಎಳ್ಳು ಉಂಡೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಳ್ಳನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಉಬ್ಬುವವರೆಗೆ ಅಥವಾ ಚಟಪಟ ಸಿಡಿಯುವವರೆಗೆ ಹುರಿಯಿರಿ. 
  2. ನಂತರ ತುರಿದ ಕೊಬ್ಬರಿ ಮತ್ತು ಏಲಕ್ಕಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಸ್ಟವ್ ಆಫ್ ಮಾಡಿ. 
  3. ಬಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿ.
  4. ನಂತರ ಪುಡಿ ಮಾಡಿದ ಬೆಲ್ಲ ಹಾಕಿ ಪುನಃ ಪುಡಿ ಮಾಡಿ.
  5. ಒಂದು ಬಟ್ಟಲಿಗೆ ಪುಡಿ ಮಾಡಿದ ಎಳ್ಳು-ಕೊಬ್ಬರಿ-ಬೆಲ್ಲದ ಮಿಶ್ರಣ ಹಾಕಿ ಕಲಸಿ. 
  6. ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಒತ್ತಿ ಉಂಡೆ ಮಾಡಿ. ಸವಿದು ಆನಂದಿಸಿ.


Related Posts Plugin for WordPress, Blogger...