ಗುರುವಾರ, ಮಾರ್ಚ್ 22, 2018

Belada hannina panaka in Kannada | ಬೇಲದ ಹಣ್ಣಿನ ಪಾನಕ ಮಾಡುವ ವಿಧಾನ

Belada hannina panaka

Belada hannina panaka in Kannada | ಬೇಲದ ಹಣ್ಣಿನ ಪಾನಕ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 4 ಕಪ್ ನೀರು
  2. ಒಂದು ಬೇಲದ ಹಣ್ಣು
  3. 4 ಟೇಬಲ್ ಚಮಚ ಪುಡಿ ಮಾಡಿದ ಬೆಲ್ಲ
  4. 1/4 ಟೀಸ್ಪೂನ್ ಕಾಳು ಮೆಣಸು ಪುಡಿಮಾಡಿದ್ದು
  5. 1/4 ಟೀಸ್ಪೂನ್ ಕಾಳು ಏಲಕ್ಕಿ ಪುಡಿ

ಬೇಲದ ಹಣ್ಣಿನ ಪಾನಕ ಮಾಡುವ ವಿಧಾನ:

  1. ಬೇಲದ ಹಣ್ಣು ತೆಗೆದುಕೊಂಡು ತೆಂಗಿನಕಾಯಿ ಒಡೆಯುವ ಹಾಗೆ ಒಡೆಯಿರಿ. 
  2. ಒಳಗಿನ ತಿರುಳು ತೆಗೆದುಕೊಂಡು, ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಹಿಸುಕಿ. 
  3. ನಂತ್ರ ಜರಡಿಯ ಮೂಲಕ ಸೋಸಿ. ಒಂದು ಚಮಚ ಬಳಸಿದಲ್ಲಿ ಸೋಸುವುದು ಸುಲಭವಾಗುವುದು. 
  4. ನಂತ್ರ ಪುಡಿಮಾಡಿದ ಬೆಲ್ಲ, ಪುಡಿಮಾಡಿದ ಕಾಳು ಮೆಣಸು ಮತ್ತು ಏಲಕ್ಕಿ ಪುಡಿ ಹಾಕಿ ಬೆರೆಸಿ. ಕುಡಿಯಲು ಕೊಡಿ.

ಬುಧವಾರ, ಮಾರ್ಚ್ 21, 2018

Halasina beejada palya recipe in Kannada | ಹಲಸಿನ ಬೀಜದ ಪಲ್ಯ ಮಾಡುವ ವಿಧಾನ

Halasina beejada palya recipe in Kannada

Halasina beejada palya recipe in Kannada | ಹಲಸಿನ ಬೀಜದ ಪಲ್ಯ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಸಣ್ಣ ಬಟ್ಟಲು ಹಲಸಿನ ಬೀಜ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  5. 1 ದೊಡ್ಡ ಚಿಟಿಕೆ ಇಂಗು
  6. 1 - 2 ಹಸಿ ಮೆಣಸಿನಕಾಯಿ
  7. 4 - 5 ಕರಿಬೇವಿನ ಎಲೆ
  8. 1/2 ಟೀಸ್ಪೂನ್ ಹೆಚ್ಚಿದ ಶುಂಠಿ
  9. 1 ದೊಡ್ಡ ಈರುಳ್ಳಿ
  10. 4 ಟೀಸ್ಪೂನ್ ಅಡುಗೆ ಎಣ್ಣೆ
  11. ಉಪ್ಪು ರುಚಿಗೆ ತಕ್ಕಷ್ಟು
  12. 2 ಟೇಬಲ್ ಚಮಚ ತೆಂಗಿನತುರಿ
  13. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು

ಹಲಸಿನ ಬೀಜದ ಪಲ್ಯ ಮಾಡುವ ವಿಧಾನ:

  1. ಹಲಸಿನಬೀಜವನ್ನು ಹಗುರವಾಗಿ ಜಜ್ಜಿ, ಸಿಪ್ಪೆ ತೆಗೆಯಿರಿ. ಬೀಜ ಒಣಗಿದಲ್ಲಿ ಸಿಪ್ಪೆ ತೆಗೆಯುವುದು ಸುಲಭ. 
  2. ಆಮೇಲೆ ತೊಳೆದು, ಕತ್ತರಿಸಿಕೊಳ್ಳಿ. 
  3. ಅಗತ್ಯವಿದ್ದಷ್ಟು ನೀರು, ಸ್ವಲ್ಪ ಉಪ್ಪು ಮತ್ತು ಚಿಟಿಕೆ ಅರಿಶಿನ ಸೇರಿಸಿ ಬೇಯಿಸಿ.
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ ಹಾಕಿ. ಬೇಕಾದಲ್ಲಿ ಒಣಮೆಣಸು ಮತ್ತು ಉದ್ದಿನಬೇಳೆ ಹಾಕಬಹುದು. 
  5. ಸಾಸಿವೆ ಸಿಡಿದ ಕೂಡಲೇ ಅರಶಿನ ಮತ್ತು ಇಂಗು ಸೇರಿಸಿ. 
  6. ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  7. ನಂತ್ರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ. 
  8. ಅದಕ್ಕೆ ಬೇಯಿಸಿದ ಹಲಸಿನಬೀಜ ಹಾಕಿ. ಹೆಚ್ಚಿನ ನೀರನ್ನು ಬಸಿದು ತೆಗೆಯಬಹುದು. ನಾನು ಸ್ವಲ್ಪ ನೀರು ಹಾಕಿದ ಕರಣ ಬಸಿಯಲಿಲ್ಲ. 
  9. ಪುಡಿ ಉಪ್ಪು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ. ಚೆನ್ನಾಗಿ ಮಗುಚಿ. 
  10. ಕೊನೆಯಲ್ಲಿ ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಒಮ್ಮೆ ಮಗುಚಿ. ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ. ಉಪ್ಪು ಕಡಿಮೆ ಹಾಕಿದಲ್ಲಿ ಹಾಗೇ ತಿನ್ನಬಹುದು. 

ಮಂಗಳವಾರ, ಮಾರ್ಚ್ 20, 2018

Benne murukku recipe in Kannada | ಬೆಣ್ಣೆ ಮುರುಕ್ಕು ಮಾಡುವ ವಿಧಾನ

Benne murukku recipe in Kannada

Benne murukku recipe in Kannada | ಬೆಣ್ಣೆ ಮುರುಕ್ಕು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1/4 ಕಪ್ ಹುರಿಗಡಲೆ
  3. 1/4 ಕಪ್ ಕಡ್ಲೆಹಿಟ್ಟು
  4. 1 ಟೀ ಸ್ಪೂನ್ ಜೀರಿಗೆ 
  5. ದೊಡ್ಡ ಚಿಟಿಕೆ ಇಂಗು
  6. ದೊಡ್ಡ ಚಿಟಿಕೆ ಅರಿಶಿನ
  7. ಒಂದು ಲಿಂಬೆಹಣ್ಣಿನ ಗಾತ್ರದ ಬೆಣ್ಣೆ 
  8. ಉಪ್ಪು ರುಚಿಗೆ ತಕ್ಕಷ್ಟು 
  9. ಎಣ್ಣೆ ಕಾಯಿಸಲು

ಬೆಣ್ಣೆ ಮುರುಕ್ಕು ಮಾಡುವ ವಿಧಾನ:

  1. ಹುರಿಗಡಲೆಯನ್ನು ಮಿಕ್ಸಿಜಾರಿನಲ್ಲಿ ಹಾಕಿ ನುಣ್ಣನೆ ಪುಡಿಮಾಡಿ ಕೊಳ್ಳಿ. 
  2. ಒಂದು ಅಗಲವಾದ ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ. 
  3. ಅದಕ್ಕೆ ಹುರಿಗಡಲೆ ಹಿಟ್ಟು ಸೇರಿಸಿ. 
  4. ನಂತ್ರ ಕಡ್ಲೆಹಿಟ್ಟು ಸೇರಿಸಿ ಕಲಸಿ. 
  5. ಆಮೇಲೆ ಜೀರಿಗೆ, ಇಂಗು, ಅರಿಶಿನ ಮತ್ತು ಉಪ್ಪು ಹಾಕಿ. ಚೆನ್ನಾಗಿ ಕಲಸಿ. ಬೇಕಾದಲ್ಲಿ ಅಚ್ಚಖಾರದ ಪುಡಿ ಸೇರಿಸಬಹುದು. 
  6. ಬೆಣ್ಣೆ ಸೇರಿಸಿ, ಚೆನ್ನಾಗಿ ತಿಕ್ಕಿ ಕಲಸಿ. 
  7. ಸ್ವಲ್ಪ ನೀರನ್ನು ಸೇರಿಸಿ, ಗಟ್ಟಿ ಆದರೆ ಮೃದುವಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಚಕ್ಕುಲಿ ಒತ್ತಲು ಆಗುವಷ್ಟು ಮೆತ್ತಗಿದ್ದರೆ ಸಾಕು. 
  8. ಎಣ್ಣೆ ಬಿಸಿ ಮಾಡಿ. 
  9. ಚಕ್ಕುಲಿ ಅಚ್ಚನ್ನು ಉಪಯೋಗಿಸಿ ಮುರುಕ್ಕನ್ನು ನೇರವಾಗಿ ಬಿಸಿ ಎಣ್ಣೆಗೆ ಒತ್ತಿ.  ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.
Related Posts Plugin for WordPress, Blogger...