ಶನಿವಾರ, ಮಾರ್ಚ್ 17, 2018

Mavinakai chitranna recipe in Kannada | ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ

Mavinakai chitranna recipe in Kannada

Mavinakai chitranna recipe in Kannada | ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ

ಮಾವಿನಕಾಯಿ ಚಿತ್ರಾನ್ನ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1/2 ಕಪ್ ಅಕ್ಕಿ (ಸೋನಾ ಮಸೂರಿ)
  2. 1/4 ಕಪ್ ತೆಂಗಿನ ತುರಿ
  3. 1/2 ಕಪ್ ಮಾವಿನಕಾಯಿ ತುರಿ 
  4. 1 - 2 ಹಸಿರು ಮೆಣಸಿನಕಾಯಿ
  5. 1/2 ಟೀಸ್ಪೂನ್ ಸಾಸಿವೆ
  6. 1/4 ಟೀಸ್ಪೂನ್ ಮೆಂತೆ
  7. 2 ಟೇಬಲ್ ಸ್ಪೂನ್ ಶೇಂಗಾ / ಕಡಲೆಕಾಯಿ
  8. 1 ಟೀಸ್ಪೂನ್ ಉದ್ದಿನ ಬೇಳೆ
  9. 1 ಟೀಸ್ಪೂನ್ ಕಡ್ಲೆಬೇಳೆ
  10. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  11. 5 - 6 ಕರಿಬೇವಿನ ಎಲೆ
  12. 2 ಟೀ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  13. 1/4 ಟೀಸ್ಪೂನ್ ಅರಿಶಿನ ಪುಡಿ
  14. ದೊಡ್ಡ ಚಿಟಿಕೆ ಇಂಗು
  15. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ:

  1. ಒಂದು ಕುಕ್ಕರ್ ನಲ್ಲಿ ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ. 
  2. ಅನ್ನ ಬೇಯುವ ಸಮಯದಲ್ಲಿ ಚಿತ್ರಾನ್ನಕ್ಕೆ ಒಗ್ಗರಣೆ ಮಾಡಿಕೊಳ್ಳೋಣ. ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ.
  3. ಕಡಲೆಕಾಯಿ ಸ್ವಲ್ಪ ಕಾದು ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ, ಮೆಂತೆ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ.
  4. ಸಾಸಿವೆ ಸಿಡಿದ ಕೂಡಲೇ ಅರಿಶಿನ ಮತ್ತು ಇಂಗು ಸೇರಿಸಿ
  5. ಹಸಿರು ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ. 
  6. ಆಮೇಲೆ ತುರಿದ ಮಾವಿನಕಾಯಿ ಹಾಕಿ ಹುರಿಯಿರಿ. 
  7. ನಂತರ ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಸಿ. ಹಸಿಮೆಣಸಿನಕಾಯಿ, ತೆಂಗಿನತುರಿ ಮತ್ತು ಮಾವಿನಕಾಯಿ ತುರಿಯನ್ನು ಅರ್ಧ ಚಮಚ ಸಾಸಿವೆಯೊಂದಿಗೆ ಪುಡಿಮಾಡಿಯೂ ಸೇರಿಸಬಹುದು. ನಂತರ ಸ್ಟೋವ್ ಆಫ್ ಮಾಡಿ.
  8. ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಕಲಸಿ.
  9. ನಂತರ ಬೇಯಿಸಿದ ಅನ್ನ ಸೇರಿಸಿ. 
  10. ಚಪ್ಪಟೆಯಾದ ಸಟ್ಟುಗ ಬಳಸಿ ಚಿತ್ರಾನ್ನವನ್ನು ಕಲಸಿ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.

To see step by step pictures click here ( ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಮಾರ್ಚ್ 16, 2018

Halu holige or obbattu recipe in Kannada | ಹಾಲು ಹೋಳಿಗೆ ಅಥವಾ ಹಾಲೊಬ್ಬಟ್ಟು ಮಾಡುವ ವಿಧಾನ

Halu holige or obbattu recipe in Kannada

Halu holige or obbattu recipe in Kannada | ಹಾಲು ಹೋಳಿಗೆ ಅಥವಾ ಹಾಲೊಬ್ಬಟ್ಟು  ಮಾಡುವ ವಿಧಾನ 

ಹಾಲು ಅಥವಾ ಪಾಯಸಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 2 ಚಮಚ ಗಸಗಸೆ
  2. 1/4 ಕಪ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  3. 1/4 ಕಪ್ ತೆಂಗಿನ ತುರಿ 
  4. 4 - 5 ಗೋಡಂಬಿ
  5. 4 - 5 ಬಾದಾಮಿ
  6. ಒಂದು ಚಿಟಿಕೆ ಕೇಸರಿ (ಬೇಕಾದಲ್ಲಿ)
  7. 1 ಕಪ್ ಹಾಲು 
  8. 1/2 ಕಪ್ ನೀರು (ಅರೆಯಲು ಬಳಸಿದೆ) 
  9. ಒಂದು ಏಲಕ್ಕಿ

ಪೂರಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಮೈದಾ ಹಿಟ್ಟು 
  2. 1 ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆ
  3. ಉಪ್ಪು ರುಚಿಗೆ ತಕ್ಕಷ್ಟು
  4. ಕರಿಯಲು ಎಣ್ಣೆ

 ಹಾಲು ಅಥವಾ ಪಾಯಸ ಮಾಡುವ ವಿಧಾನ:

  1. ಗೋಡಂಬಿ ಮತ್ತು ಬಾದಾಮಿಯನ್ನು ಒಂದು ಘಂಟೆ ಕಾಲ ನೆನೆಸಿ. ಬಾದಾಮಿ ಸಿಪ್ಪೆ ತೆಗೆಯಿರಿ. 
  2. ಒಂದು ಬಾಣಲೆಯಲ್ಲಿ ಗಸಗಸೆಯನ್ನು ಹುರಿಯಿರಿ. 
  3. ಬಿಸಿ ಆರಿದ ನಂತರ ಮಿಕ್ಸಿ ಜಾರಿಗೆ ಹಾಕಿ. 
  4. ಏಲಕ್ಕಿ, ನೆನೆಸಿದ ಗೋಡಂಬಿ, ಬಾದಾಮಿ ಮತ್ತು ತೆಂಗಿನ ತುರಿ ಸೇರಿಸಿ. 
  5. ಅಗತ್ಯವಿದ್ದಷ್ಟು ನೀರು ಹಾಕಿ ನುಣ್ಣನೆ ಅರೆದುಕೊಳ್ಳಿ. 
  6. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. 
  7. ಹಾಲು, ಸಕ್ಕರೆ ಮತ್ತು ಉಳಿದ ನೀರು ಸೇರಿಸಿ. 
  8. ಬೇಕಾದಲ್ಲಿ ಕೇಸರಿ ಸೇರಿಸಿ. 
  9. ಆಗಾಗ್ಯೆ ಮಗುಚುತ್ತಾ ಕುದಿಸಿ. 
  10. ಪಾಯಸ ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ, ಪಕ್ಕಕ್ಕಿಡಿ. 

ಪೂರಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ. 
  2. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಟ್ಟಿಯಾಗಿ ಕಲಸಿ. 
  3. ಈಗ ನೆಲ್ಲಿಕಾಯಿ ಗಾತ್ರದ ಉಂಡೆ ತೆಗೆದು ಕೊಂಡು ಲಟ್ಟಿಸಿ, ಸಾಧ್ಯವಾದಷ್ಟು ತೆಳ್ಳಗೆ ಲಟ್ಟಿಸಿ. ಇಲ್ಲವಾದಲ್ಲಿ ಪೂರಿ ಉಬ್ಬುವುದು. ನಮಗೆ ಪೂರಿ ಉಬ್ಬಬಾರದು. 
  4. ಬಿಸಿಯಾದ ಎಣ್ಣೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಗರಿ ಗರಿಯಾಗುವವರೆಗೆ ಕಾಯಿಸಿ. 
  5. ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ ತೆಗೆಯಿರಿ.
  6. ಬಿಸಿ ಆರಿದ ಮೇಲೆ, ಪೂರಿಗಳನ್ನು ಪ್ಲೇಟ್ ನಲ್ಲಿ ಜೋಡಿಸಿ, ಮೇಲಿನಿಂದ ಹಾಲು ಅಥವಾ ಪಾಯಸವನ್ನು ಸುರಿಯಿರಿ. 
  7. ಐದರಿಂದ ಹತ್ತು ನಿಮಿಷದ ನಂತ್ರ ಸವಿದು ಆನಂದಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಮಾರ್ಚ್ 14, 2018

Coffee recipe without coffee-filter in Kannada | ಕಾಫಿ ಫಿಲ್ಟರ್ ಉಪಯೋಗಿಸದೆ ಕಾಫಿ ಮಾಡುವ ವಿಧಾನ

Coffee recipe without coffee-filter in Kannada

Coffee recipe without coffee-filter in Kannada | ಕಾಫಿ ಫಿಲ್ಟರ್ ಉಪಯೋಗಿಸದೆ ಕಾಫಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಟೇಬಲ್ ಚಮಚ ಕಾಫಿ ಪುಡಿ
  2. 1/2 ಕಪ್ ನೀರು
  3. 1.25 ಕಪ್ ಕುದಿಸಿದ  ಗಟ್ಟಿ ಹಾಲು
  4. 3 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಕಾಫಿ ಫಿಲ್ಟರ್ ಉಪಯೋಗಿಸದೆ ಕಾಫಿ ಮಾಡುವ ವಿಧಾನ:

  1. ಅರ್ಧ ಕಪ್ ನೀರನ್ನು ಕುದಿಸಿ.
  2. ಒಂದು ಲೋಟ ಅಥವಾ ಪಾತ್ರೆಯಲ್ಲಿ ಕಾಫಿ ಪುಡಿಯನ್ನು ತೆಗೆದುಕೊಂಡು, ಬಿಸಿ ಕುದಿಯುವ ನೀರನ್ನು ಸುರಿಯಿರಿ. 
  3. ಒಂದು ಚಮಚದಲ್ಲಿ ಮಗುಚಿ, ಮುಚ್ಚಳ ಮುಚ್ಚಿ. 
  4. ೫ ನಿಮಿಷದ ನಂತರ ಪುನಃ ಮಗುಚಿ, ಮುಚ್ಚಳ ಮುಚ್ಚಿ. ಐದು ನಿಮಿಷ ಬಿಡಿ. 
  5. ನಂತರ ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ತೆಗೆದುಕೊಳ್ಳಿ. 
  6. ಅದಕ್ಕೆ ಜಾಗ್ರತೆಯಿಂದ ನಿಧಾನವಾಗಿ, ತಿಳಿಯಾದ ಕಾಫಿ ಡಿಕಾಕ್ಷನ್ ಬಗ್ಗಿಸಿ. ಗಮನಿಸಿ, ತಿಳಿಯಾದ ಡಿಕಾಕ್ಷನ್ ಮಾತ್ರ ಬಗ್ಗಿಸಬೇಕು.  ಕೆಳಗೆ ನಿಂತ ಕಾಫಿ ಪುಡಿಯನ್ನು ಕಲಕಬೇಡಿ. 
  7. ನಂತ್ರ ಬಿಸಿಬಿಸಿಯಾದ ಕುದಿಸಿದ ಹಾಲು ಸೇರಿಸಿ. 
  8. ಎರಡು ಮೂರು ಸಲ ಎತ್ತಿ ಸುರಿದು, ಸಕ್ಕರೆ ಕರಗಿಸಿ. ಸವಿದು ಆನಂದಿಸಿ. 

    Related Posts Plugin for WordPress, Blogger...