ಬುಧವಾರ, ಮಾರ್ಚ್ 7, 2018

Ona drakshi gojju recipe in Kannada | ಒಣದ್ರಾಕ್ಷಿ ಗೊಜ್ಜು ಮಾಡುವ ವಿಧಾನ

Ona drakshi gojju recipe in Kannada

Ona drakshi gojju recipe in Kannada | ಒಣದ್ರಾಕ್ಷಿ ಗೊಜ್ಜು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಒಣದ್ರಾಕ್ಷಿ
  2. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  3. ದೊಡ್ಡ ನಿಂಬೆಹಣ್ಣಿನ ಗಾತ್ರದ ಬೆಲ್ಲ 
  4. 2 ಟೀಸ್ಪೂನ್ ಅಡುಗೆ ಎಣ್ಣೆ
  5. ಉಪ್ಪು ರುಚಿಗೆ ತಕ್ಕಷ್ಟು.

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಕೊತ್ತಂಬರಿ ಬೀಜ
  2. 1 ಟೀಸ್ಪೂನ್ ಉದ್ದಿನ ಬೇಳೆ
  3. 1 ಟೀಸ್ಪೂನ್ ಕಡ್ಲೆ ಬೇಳೆ
  4. 3 - 6 ಒಣ ಮೆಣಸಿನಕಾಯಿ
  5. 1 ಕಪ್ ತೆಂಗಿನ ತುರಿ
  6. 1/4 ಟೀಸ್ಪೂನ್ ಮೆಂತ್ಯ
  7. 3 ಟೀಸ್ಪೂನ್ ಎಳ್ಳು
  8. 5 - 6 ಕರಿಬೇವಿನ ಎಲೆ
  9. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 ಒಣಮೆಣಸಿನಕಾಯಿ
  3. 4 - 5 ಕರಿಬೇವಿನ ಎಲೆ
  4. 1 ಚಿಟಿಕೆ ಅರಿಶಿನ ಪುಡಿ
  5. 1 ಚಿಟಿಕೆ ಇಂಗು
  6. 4 ಟೀಸ್ಪೂನ್ ಅಡುಗೆ ಎಣ್ಣೆ

ಒಣದ್ರಾಕ್ಷಿ ಗೊಜ್ಜು ಮಾಡುವ ವಿಧಾನ:

  1. ಒಂದು ಬಾಣಲೆಯನ್ನು ಬಿಸಿ ಮಾಡಿ. 1 ಚಮಚ ಎಣ್ಣೆ ಹಾಕಿ. ಉದ್ದಿನ ಬೇಳೆ, ಕಡ್ಲೆಬೇಳೆ, ಕೊತ್ತಂಬರಿ ಬೀಜ, ಮೆಂತೆ, ಒಣಮೆಣಸು ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ. 
  2. ಉದ್ದಿನಬೇಳೆ ಕಂದುಬಣ್ಣಕ್ಕೆ ತಿರುಗಿದ ಮೇಲೆ ಎಳ್ಳನ್ನು ಹಾಕಿ ಹುರಿಯಿರಿ. 
  3. ನಂತರ ಕರಿಬೇವನ್ನು ಹಾಕಿ ಹುರಿಯಿರಿ. 
  4. ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಪದಾರ್ಥಗಳನ್ನು ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆದು ಪಕ್ಕಕ್ಕಿಡಿ. 
  5. ನಂತರ ಅದೇ ಬಾಣಲೆಗೆ 2 ಟೇಬಲ್ ಚಮಚ ಎಣ್ಣೆ ಹಾಕಿ, ಒಣಮೆಣಸು, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  6. ಇಂಗು ಮತ್ತು ಅರಿಶಿನ ಪುಡಿ ಸೇರಿಸಿ. 
  7. ನಂತರ ಒಣದ್ರಾಕ್ಷಿ ಹಾಕಿ, ಉಬ್ಬುವವರೆಗೆ ಹುರಿಯಿರಿ. 
  8. ಅದಕ್ಕೆ ಉಪ್ಪು, ಹುಣಿಸೆಹಣ್ಣಿನ ರಸ, ಬೆಲ್ಲ ಮತ್ತು ಅರ್ಧ ಲೋಟ ನೀರು ಹಾಕಿ. ಒಂದೈದು ನಿಮಿಷ ಬೇಯಿಸಿ. 
  9. ಬೇಯಿಸಿದ ದ್ರಾಕ್ಷಿಗೆ ಅರೆದ ಮಸಾಲೆ ಸೇರಿಸಿ. ಬೇಕಾದಲ್ಲಿ ಉಪ್ಪು, ಹುಳಿ ಮತ್ತು ಬೆಲ್ಲ ಹೊಂದಿಸಿ. ಬೇಕಾದಷ್ಟು ನೀರು ಸೇರಿಸಿ, ಒಂದು ಕುದಿ ಕುದಿಸಿ. 
  10. ನಂತರ ಅನ್ನ ಅಥವಾ ಚಪಾತಿ ಜೊತೆ ಬಡಿಸಿ.

ಸೋಮವಾರ, ಮಾರ್ಚ್ 5, 2018

Boodu kumbalakai thirulina sasive in kannada | ಬೂದು ಕುಂಬಳಕಾಯಿ ತಿರುಳಿನ ಸಾಸಿವೆ ಮಾಡುವ ವಿಧಾನ

Boodu kumbalakai thirulina sasive in kannada

Boodu kumbalakai thirulina sasive in kannada | ಬೂದು ಕುಂಬಳಕಾಯಿ ತಿರುಳಿನ ಸಾಸಿವೆ ಮಾಡುವ ವಿಧಾನ

ಬೂದು ಕುಂಬಳಕಾಯಿ ತಿರುಳಿನ ಸಾಸಿವೆ ವಿಡಿಯೋ


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 kg ಕುಂಬಳಕಾಯಿ ಯಿಂದ ತೆಗೆದ ತಿರುಳು
  2. 1/4 ಟೀಸ್ಪೂನ್ ಸಾಸಿವೆ
  3. 1/4 ಕಪ್ ತೆಂಗಿನತುರಿ
  4. 1/2 ಕಪ್ ಮೊಸರು
  5. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 2 ಟೀಸ್ಪೂನ್ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ

ಬೂದು ಕುಂಬಳಕಾಯಿ ತಿರುಳಿನ ಸಾಸಿವೆ ಮಾಡುವ ವಿಧಾನ:

  1. ಬೂದು ಕುಂಬಳಕಾಯಿ ಯನ್ನು ಕತ್ತರಿಸಿ, ತಿರುಳನ್ನು ತೆಗೆಯಿರಿ.
  2. ಬೀಜ ಬೇರ್ಪಡಿಸಿ, ತಿರುಳನ್ನು ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಬೇಯಿಸಿ. 
  3. ಬಿಸಿ ಆರಿದ ಮೇಲೆ ಬೇಯಿಸಿದ ತಿರುಳು ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ.  
  4. ಅಗತ್ಯವಿದ್ಧಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  5. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಅಗತ್ಯವಿದ್ದಷ್ಟು ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ. 
  6. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಮಾರ್ಚ್ 2, 2018

Rave payasa recipe in Kannada | ರವೇ ಪಾಯಸ ಮಾಡುವ ವಿಧಾನ

Rave payasa recipe in Kannada

Rave payasa recipe in Kannada | ರವೇ ಪಾಯಸ ಮಾಡುವ ವಿಧಾನ 

Rave payasa video

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 4 ಟೇಬಲ್ ಚಮಚ ಉಪ್ಪಿಟ್ಟು ರವೇ
  2. 2 - 2.5 ಕಪ್ ಹಾಲು
  3. 1 ಕಪ್ ನೀರು
  4. 6 ಟೇಬಲ್ ಚಮಚ ಸಕ್ಕರೆ
  5. 2 ಟೀಸ್ಪೂನ್ ತುಪ್ಪ
  6. 5-6 ಗೋಡಂಬಿ
  7. 8-10 ಒಣದ್ರಾಕ್ಷಿ
  8. ಒಂದು ಚಿಟಿಕೆ ಏಲಕ್ಕಿ ಪುಡಿ

ರವೇ ಪಾಯಸ ಮಾಡುವ ವಿಧಾನ:

  1. ಹಾಲನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಿ. 
  2. ಅದೇ ಸಮಯದಲ್ಲಿ ಇನ್ನೊಂದು ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು ತೆಗೆದಿಡಿ. 
  3. ನಂತರ ಅದೇ ಬಾಣಲೆಗೆ ರವೇಯನ್ನು ಹಾಕಿ ಸುವಾಸನೆ ಬರುವವರೆಗೆ ಹುರಿಯಿರಿ. 
  4. ನೀರನ್ನು ಸೇರಿಸಿ ಮಗುಚಿ. 
  5. ಕುದಿಯಲು ಪ್ರಾರಂಭವಾದ ಕೂಡಲೇ ಉರಿ ಕಡಿಮೆ ಮಾಡಿ, ಒಂದು ನಿಮಿಷ ಬೇಯಿಸಿ. 
  6. ನಂತರ ಹಾಲನ್ನು ಸೇರಿಸಿ. 
  7. ಸಕ್ಕರೆಯನ್ನೂ ಸೇರಿಸಿ. 
  8. ಏಲಕ್ಕಿ ಪುಡಿ ಮತ್ತು ಕೇಸರಿ (ಬೇಕಾದಲ್ಲಿ) ಸೇರಿಸಿ ಕುದಿಸಿ. 
  9. ನೆನಪಿಡಿ ಪಾಯಸ ತಣ್ಣಗಾದ ನಂತರ ಸ್ವಲ್ಪ ಗಟ್ಟಿಯಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು, ಬೇಕಾದಲ್ಲಿ ಹಾಲು ಅಥವಾ ನೀರು ಸೇರಿಸಬಹುದು. ಸಕ್ಕರೆ ಕರಗಿದ ಮೇಲೆ ಸ್ಟವ್ ಸ್ಟೋವ್ ಆಫ್ ಮಾಡಿ.
  10. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...