ಭಾನುವಾರ, ಸೆಪ್ಟೆಂಬರ್ 10, 2017

chana masala recipe in Kannada | ಚನಾ ಮಸಾಲಾ ಮಾಡುವ ವಿಧಾನ

Chana masala recipe in Kannada

Chana masala recipe in Kannada | ಚನಾ ಮಸಾಲಾ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕಾಬುಲ್ ಕಡ್ಲೆ
  2.  1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  3. 2 ಟೊಮೇಟೊ ಸಣ್ಣಗೆ ಹೆಚ್ಚಿದ್ದು
  4.  1/2 ಟೀಸ್ಪೂನ್ ಜೀರಿಗೆ
  5. 1 ಪುಲಾವ್ ಅಥವಾ ದಾಲ್ಚಿನ್ನಿ ಎಲೆ
  6. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ (ಅಥವಾ ಸಣ್ಣಗೆ ಹೆಚ್ಚಿದ್ದು)
  7.  1/2 ಟೀಸ್ಪೂನ್ ಅಚ್ಚಖಾರದ ಪುಡಿ
  8.  1/4 ಟೀಸ್ಪೂನ್ ಗರಂ ಮಸಾಲಾ
  9.  1 ಟೀಸ್ಪೂನ್ ಕೊತ್ತಂಬರಿ ಅಥವಾ ಧನಿಯಾ ಪುಡಿ 
  10. 1/4 ಟೀಸ್ಪೂನ್ ಜೀರಿಗೆ ಪುಡಿ 
  11. 1/4 ಟೀಸ್ಪೂನ್ ಅರಿಶಿನ ಪುಡಿ 
  12. 1/4 ಟೀಸ್ಪೂನ್ ಮಾವಿನಕಾಯಿ ಪುಡಿ 
  13. 1 ಟೇಬಲ್ ಚಮಚ ಕಸೂರಿ ಮೇಥಿ ಅಥವಾ ಒಣಗಿದ ಮೆಂತೆ ಸೊಪ್ಪು  (ಬೇಕಾದಲ್ಲಿ) 
  14. 1 ಟೇಬಲ್ ಚಮಚ ಅಡುಗೆ ಎಣ್ಣೆ 
  15. 1 ಟೇಬಲ್ ಚಮಚ ಬೆಣ್ಣೆ
  16. ಉಪ್ಪು ರುಚಿಗೆ ತಕ್ಕಷ್ಟು

ಚನಾ ಮಸಾಲಾ ಮಾಡುವ ವಿಧಾನ:

  1. ಕಾಬುಲ್ ಕಡ್ಲೆಯನ್ನು 5 - 6 ಘಂಟೆಗಳ ಕಾಲ ನೆನೆಸಿ.
  2. ಒಂದು ಕುಕ್ಕರ್ ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಜೀರಿಗೆ ಮತ್ತು ದಾಲ್ಚಿನ್ನಿ ಎಲೆ ಹಾಕಿ. 
  3. ಜೀರಿಗೆ ಸಿಡಿದ ಮೇಲೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ.
  4.  ನಂತರ ಸಣ್ಣಗೆ ಕತ್ತರಿಸಿದ ಟೊಮೇಟೊ ಸೇರಿಸಿ ಹುರಿಯಿರಿ.
  5. ನಂತರ ಅದಕ್ಕೆ ಅಚ್ಚಖಾರದ ಪುಡಿ, ಗರಂ ಮಸಾಲಾ, ಕೊತ್ತಂಬರಿ ಅಥವಾ ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಮಾವಿನಕಾಯಿ ಪುಡಿ ಹಾಕಿ ಮಗುಚಿ. 
  6. ಆಮೇಲೆ ಉಪ್ಪು ಮತ್ತು ಅರಿಶಿನ ಹಾಕಿ ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  7. ಅದಕ್ಕೆ ನೆನೆಸಿದ ಕಡ್ಲೆಯನ್ನು ಹಾಕಿ.
  8. 2 ಕಪ್ ನೀರು ಮತ್ತು ಕಸೂರಿ ಮೇಥಿ ಹಾಕಿ. 
  9. ಮುಚ್ಚಳ ಮುಚ್ಚಿ ಕಡ್ಲೆ ಮೆತ್ತಗಾಗುವವರೆಗೆ ಬೇಯಿಸಿ. ನಾನು 2 - 2 - 2 ರಂತೆ ಮೂರು ಬಾರಿ ವಿಷಲ್ ಮಾಡಿದೆ. 
  10. ಕುಕ್ಕರ್ ನ ಒತ್ತಡ ಕಡಿಮೆ ಆದಮೇಲೆ ಸಟ್ಟುಗದ ಹಿಂಭಾಗ ಉಪಯೋಗಿಸಿ ಸ್ವಲ್ಪ ಕಡ್ಲೆಯನ್ನು ಮಸೆಯಿರಿ ಅಥವಾ ಮ್ಯಾಶ್ ಮಾಡಿ .
  11. ಸ್ವಲ್ಪ ಹೊತ್ತು ಕುದಿಸಿ ಸ್ಟವ್ ಆಫ್ ಮಾಡಿ. ಕೊನೆಯಲ್ಲಿ ಬೆಣ್ಣೆ ಹಾಕಿ ಮಗುಚಿ. ಚಪಾತಿ ಅಥವಾ ಪೂರಿಯೊಂದಿಗೆ ಬಡಿಸಿ.

ಗುರುವಾರ, ಸೆಪ್ಟೆಂಬರ್ 7, 2017

Menasina saaru recipe in Kannada | ಮೆಣಸಿನ ಸಾರು ಮಾಡುವ ವಿಧಾನ

Menasina saaru recipe in Kannada

Menasina saaru recipe in Kannada | ಮೆಣಸಿನ ಸಾರು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/4 ಕಪ್ ತೊಗರಿಬೇಳೆ
  2. 2 ಮಧ್ಯಮ ಗಾತ್ರದ ಟೊಮೇಟೊ
  3. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  4. 1.5 ಚಮಚ ಕೊತ್ತಂಬರಿ ಅಥವಾ ಧನಿಯಾ ಪುಡಿ
  5. 1/2 ಟೀಸ್ಪೂನ್ ಜೀರಿಗೆ ಪುಡಿ
  6. 1 ಟೀಸ್ಪೂನ್ ಕರಿಮೆಣಸಿನ ಪುಡಿ
  7. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. ಇಂಗು ಒಂದು ಚಿಟಿಕೆ 
  3. 4 ಎಸಳು ಬೆಳ್ಳುಳ್ಳಿ ಜಜ್ಜಿದ್ದು
  4. 5 - 6 ಕರಿಬೇವಿನ ಎಲೆ
  5. 2 ಟೀಸ್ಪೂನ್ ಅಡುಗೆ ಎಣ್ಣೆ

ಮೆಣಸಿನ ಸಾರು ಮಾಡುವ ವಿಧಾನ:

  1. ತೊಗರಿಬೇಳೆಯನ್ನು ತೊಳೆದು, ಚಿಟಿಕೆ ಅರಿಶಿನ ಮತ್ತು ಎರಡು ಹನಿ ಎಣ್ಣೆ ಹಾಕಿ ಬೇಯಿಸಿ. 
  2. ನಂತರ ಅದಕ್ಕೆ ಎರಡು ಭಾಗ ಮಾಡಿದ ಟೊಮೇಟೊ ಹಾಕಿ ಬೇಯಿಸಿ. 
  3. ಟೊಮೇಟೊ ಸಿಪ್ಪೆ ತೆಗೆದು, ಬೇಳೆ ಮತ್ತು ಟೊಮ್ಯಾಟೊವನ್ನು ಚೆನ್ನಾಗಿ ಹಿಸುಕಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ. ಸ್ಟವ್ ಮೇಲೆ ಕುದಿಯಲು ಇಡೀ. 
  5. ಉಪ್ಪು ಮತ್ತು ಹುಣಿಸೆರಸ ಸೇರಿಸಿ.  
  6. ಕೊನೆಯಲ್ಲಿ ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಕರಿಮೆಣಸಿನ ಪುಡಿ ಸೇರಿಸಿ. 
  7. ಚೆನ್ನಾಗಿ ಮಗುಚಿ, ಒಂದು ಕುದಿ ಕುದಿಸಿ. 
  8. ಒಗ್ಗರಣೆ ಸೌಟು ಬಳಸಿಕೊಂಡು 2 ಚಮಚಎಣ್ಣೆ, 1/2 ಚಮಚ ಸಾಸಿವೆ, ಇಂಗು, ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  9. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ.  ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಸೆಪ್ಟೆಂಬರ್ 6, 2017

Heerekai bonda or bajji recipe in Kannada | ಹೀರೆಕಾಯಿ ಬೋಂಡಾ ಮಾಡುವ ವಿಧಾನ

Heerekai bonda or bajji recipe in Kannada

Heerekai bonda or bajji recipe in Kannada | ಹೀರೆಕಾಯಿ ಬೋಂಡಾ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಕಡ್ಲೆಹಿಟ್ಟು
  2. 1/4 ಕಪ್ ಅಕ್ಕಿಹಿಟ್ಟು
  3. 1 ಹೀರೆಕಾಯಿ
  4. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  5. ಒಂದು ಸಣ್ಣ ಚಿಟಿಕೆ ಅಡುಗೆ ಸೋಡಾ
  6. ಒಂದು ದೊಡ್ಡ ಚಿಟಿಕೆ ಇಂಗು
  7. ಎಣ್ಣೆ ಬಜ್ಜಿ ಕಾಯಿಸಲು
  8. ಉಪ್ಪು ರುಚಿಗೆ ತಕ್ಕಷ್ಟು.

ಹೀರೆಕಾಯಿ ಬೋಂಡಾ ಮಾಡುವ ವಿಧಾನ:

  1. ಹೀರೇಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು, ತೆಳುವಾದ ಗಾಲಿಗಳಾಗಿ ಕತ್ತರಿಸಿಕೊಳ್ಳಿ. 
  2. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಇಂಗು, ಸೋಡಾ ಮತ್ತು ಉಪ್ಪನ್ನು ತೆಗೆದುಕೊಳ್ಳಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. 
  5. ಕತ್ತರಿಸಿದ ಹೀರೆಕಾಯಿಯನ್ನು ಸಿದ್ಧ ಪಡಿಸಿದ ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಕಾಯಿಸಿ. 
  6. ಬಿಸಿ ಬಿಸಿ ಬಜ್ಜಿ ಅಥವಾ ಬೋಂಡಾವನ್ನು ಸವಿಯಿರಿ.
Related Posts Plugin for WordPress, Blogger...