Dideer akki paddu recipe in Kannada |ಅಕ್ಕಿಯಿಂದ ದಿಢೀರ್ ಪಡ್ಡು ಮಾಡುವ ವಿಧಾನ
ದಿಢೀರ್ ಪಡ್ಡು ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1 ಕಪ್ ಇಡ್ಲಿರವೇ
- 1/4 ಕಪ್ ಮೊಸರು
- 1/4 ಕಪ್ ಅವಲಕ್ಕಿ (ಗಟ್ಟಿ ಅಥವಾ ಮೀಡಿಯಂ)
- 1/4 ಕಪ್ ಅಕ್ಕಿಹಿಟ್ಟು
- ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
- 1 ಈರುಳ್ಳಿ
- 4 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ತೆಂಗಿನತುರಿ
- 1 ಹಸಿಮೆಣಸಿನಕಾಯಿ
- 1/2 ಚಮಚ ಶುಂಠಿ
- ಉಪ್ಪು ರುಚಿಗೆ ತಕ್ಕಷ್ಟು
- 1/4 ಟೀಸ್ಪೂನ್ ಎನೊ ಅಥವಾ ಸೋಡಾ (ಬೇಕಾದಲ್ಲಿ)
ದಿಢೀರ್ ಪಡ್ಡು ಮಾಡುವ ವಿಧಾನ:
- ಇಡ್ಲಿರವೆಯನ್ನು ತೊಳೆದು ನೀರು ಬಗ್ಗಿಸಿ.
- ಕುದಿ ಕುದಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ.
- ಅವಲಕ್ಕಿಯನ್ನು ಮಾಮೂಲಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ.
- ನೆನೆಸಿದ ನಂತರ ಹೆಚ್ಚಿನ ನೀರು ಬಗ್ಗಿಸಿ ತೆಗೆಯಿರಿ.
- ನೆನೆಸಿದ ಇಡ್ಲಿರವೆಯನ್ನು ಮಿಕ್ಸಿ ಜಾರಿಗೆ ಹಾಕಿ ಅರೆಯಿರಿ.
- ರುಬ್ಬಿದ ನಂತರ ನೆನೆಸಿದ ಅವಲಕ್ಕಿ, ಅಕ್ಕಿಹಿಟ್ಟು ಮತ್ತು ಮೊಸರು ಸೇರಿಸಿ.
- ಸ್ವಲ್ಪ ಹೊತ್ತು ರುಬ್ಬಿ ಒಂದು ಪಾತ್ರೆಗೆ ಹಾಕಿ.
- ಅರೆಯಲು ಬೇರೆ ನೀರು ಸೇರಿಸುವುದು ಬೇಡ. ಹಿಟ್ಟು ತುಂಬ ಬಿಸಿಯಾಗದಂತೆ ನೋಡಿಕೊಳ್ಳಿ.
- ನಂತರ ಹಿಟ್ಟಿಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕಾಯಿತುರಿ, ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ಬೇಕಾದಲ್ಲಿ ಏನೋ ಅಥವಾ ಸೋಡಾ ಸೇರಿಸಿ ಕಲಸಿ.
- ಪಡ್ಡು ಕಾವಲಿಯನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
- ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ.
- 5 - 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ.
- ತಿರುಗಿಸಿ ಹಾಕಿ, ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ