Chigali recipe in Kannada | ಚಿಗಳಿ ಮಾಡುವ ವಿಧಾನ
ಚಿಗಳಿ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1/4 ಕಪ್ ಹುಣಿಸೇಹಣ್ಣು
- 1 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಉಪ್ಪು (ಅಥವಾ ರುಚಿಗೆ ತಕ್ಕಷ್ಟು)
- 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
- 1 ಟೇಬಲ್ ಚಮಚ ಬೆಲ್ಲ
- 1/2 ಟೀಸ್ಪೂನ್ ಎಣ್ಣೆ (ಬೇಕಾದಲ್ಲಿ)
ಚಿಗಳಿ ಮಾಡುವ ವಿಧಾನ:
- ಉಪ್ಪು ಮತ್ತು ಜೀರಿಗೆಯನ್ನು ಚೆನ್ನಾಗಿ ಗುದ್ದಿ ಪುಡಿಮಾಡಿಕೊಳ್ಳಿ. ಜೀರಿಗೆ ಬದಲು ಜೀರಿಗೆ ಪುಡಿಯನ್ನು ಬಳಸಬಹುದು.
- ಬೆಲ್ಲ, ಅಚ್ಚಖಾರದ ಪುಡಿ ಮತ್ತು ಹುಣಿಸೆಹಣ್ಣಿನ ಚೂರುಗಳನ್ನು ಹಾಕಿ ಚೆನ್ನಾಗಿ ಜಜ್ಜಿ.
- ಬೇಕಾದಲ್ಲಿ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬಹುದು.
- ಚೆನ್ನಾಗಿ ಜಜ್ಜಿ ಮುದ್ದೆ ಆದ ನಂತರ, ಎಣ್ಣೆ ಹಾಕಿ ಸ್ವಲ್ಪ ಹೊತ್ತು ಗುದ್ದಿ.
- ಉಂಡೆಗಳನ್ನು ಮಾಡಿ ಕಡ್ಡಿಯನ್ನು ಚುಚ್ಚಿ.
- ಅಥವಾ ಸಣ್ಣ ಉಂಡೆ ಮಾಡಿ ಸಕ್ಕರೆ ಪುಡಿಯಲ್ಲಿ ಹೊರಳಾಡಿಸಿ, ಎತ್ತಿಡಿ.
- ಮಿಠಾಯಿಯಂತೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ