Kempu khara dose recipe in Kannada | ಕೆಂಪು ಖಾರ ದೋಸೆ ಮಾಡುವ ವಿಧಾನ
ಕೆಂಪು ಖಾರ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1 ಕಪ್ ಅಕ್ಕಿಹಿಟ್ಟು
- 1 ಕಟ್ಟು ಮೆಂತೆ ಸೊಪ್ಪು
- 1/2 ಕಪ್ ತೆಳು ಅವಲಕ್ಕಿ (ಬೇಕಾದಲ್ಲಿ)
- 1 ದೊಡ್ಡ ಚಮಚ ಸಾರಿನ ಪುಡಿ (ರಸಂ ಪೌಡರ್)
- 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
- 1 ನೆಲ್ಲಿಕಾಯಿ ಗಾತ್ರದ ಬೆಲ್ಲ
- 1 ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- ಉಪ್ಪು ರುಚಿಗೆ ತಕ್ಕಂತೆ
- ಎಣ್ಣೆ ದೋಸೆ ಮಾಡಲು
ಕೆಂಪು ಖಾರ ದೋಸೆ ಮಾಡುವ ವಿಧಾನ:
- ಮೆಂತೆ ಸೊಪ್ಪನ್ನು ಆರಿಸಿ, ತೊಳೆದು ಸಣ್ಣಗೆ ಕತ್ತರಿಸಿಕೊಳ್ಳಿ.
- ಒಂದು ಪಾತ್ರೆಯಲ್ಲಿ ಅವಲಕ್ಕಿಯನ್ನು ತೊಳೆದು, ಚೆನ್ನಾಗಿ ಹಿಸುಕಿ ತೆಳ್ಳಗಿನ ಪೇಸ್ಟ್ ಮಾಡಿಕೊಳ್ಳಿ.
- ಅಕ್ಕಿ ಹಿಟ್ಟು, ರಸಂ ಪೌಡರ್ ಮತ್ತು ಅಚ್ಚಖಾರದ ಪುಡಿ ಸೇರಿಸಿ.
- ಉಪ್ಪು ಹುಳಿ ಮತ್ತು ಬೆಲ್ಲ ಹಾಕಿ.
- ಅವಲಕ್ಕಿ ಪೇಸ್ಟ್ ಅನ್ನು ಸೇರಿಸಿ.
- ಸುಮಾರು ಒಂದು ಕಪ್ ನೀರು ಸೇರಿಸಿ, ಹಿಟ್ಟು ತಯಾರಿಸಿಕೊಳ್ಳಿ.
- ಕತ್ತರಿಸಿದ ಮೆಂತೆ ಸೊಪ್ಪು ಹಾಕಿ ಕಲಸಿ, ದೋಸೆ ಹಿಟ್ಟು ತಯಾರಿಸಿಕೊಳ್ಳಿ.
- ದೋಸೆ ಕಾವಲಿ ಬಿಸಿ ಮಾಡಿ, ದೋಸೆ ಮಾಡಿ.
- ಮೇಲಿನಿಂದ ಎಣ್ಣೆ ಹಾಕಿ, ಇನ್ನೊಂದು ಬದಿಯೂ ಖಾಯಿಸಿ.
- ಬೆಣ್ಣೆ ಅಥವಾ ಚಟ್ನಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ