Oats khichdi recipe in Kannada | ಓಟ್ಸ್ ಕಿಚಡಿ ಮಾಡುವ ವಿಧಾನ
ಓಟ್ಸ್ ಕಿಚಡಿ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1/2 ಕಪ್ ಓಟ್ಸ್ (ಅಕ್ಕಿ ಅಥವಾ ಗೋದಿ ನುಚ್ಚು ಬಳಸಬಹುದು)
- 1/4 ಕಪ್ ಹೆಸರುಬೇಳೆ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಶುಂಠಿ
- ಸ್ವಲ್ಪ ಕರಿಬೇವು
- 1 ಹಸಿಮೆಣಸಿನಕಾಯಿ
- 1/2 ಈರುಳ್ಳಿ
- ಜಜ್ಜಿದ ಕಾಳುಮೆಣಸು ನಿಮ್ಮ ಖಾರಕ್ಕೆ ತಕ್ಕಂತೆ
- ದೊಡ್ಡ ಚಿಟಿಕೆ ಅರಿಶಿನ ಪುಡಿ
- ದೊಡ್ಡ ಚಿಟಿಕೆ ಇಂಗು
- 1/2 ಟೊಮೇಟೊ
- 1/2 ಕಪ್ ತರಕಾರಿ (ಬೀನ್ಸ್, ಕ್ಯಾರಟ್, ಬಟಾಣಿ, ಕೋಸು ಇತ್ಯಾದಿ)
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
- 1 ಟೇಬಲ್ ಸ್ಪೂನ್ ತುಪ್ಪ
ಓಟ್ಸ್ ಕಿಚಡಿ ಮಾಡುವ ವಿಧಾನ:
- ಹೆಸರುಬೇಳೆಯನ್ನು 15 ನಿಮಿಷ ನೆನೆಸಿ. ಆ ಸಮಯದಲ್ಲಿ ತರಕಾರಿಗಳನ್ನು ಕತ್ತರಿಸಿಟ್ಟುಕೊಳ್ಳಿ.
- ಒಂದು ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ.
- ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ.
- ಶುಂಠಿ, ಕರಿಬೇವು, ಸೀಳಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ.
- ನಂತರ ಜಜ್ಜಿದ ಕಾಳುಮೆಣಸು, ಅರಿಶಿನ ಮತ್ತು ಇಂದು ಸೇರಿಸಿ ಮಗುಚಿ.
- ಟೊಮೇಟೊ ಮತ್ತು ಮಿಶ್ರ ತರಕಾರಿಗಳನ್ನು ಸೇರಿಸಿ ಹುರಿಯಿರಿ.
- ನೆನೆಸಿದ ಹೆಸರುಬೇಳೆ ಹಾಕಿ ಹುರಿಯಿರಿ.
- ಓಟ್ಸ್ (ಅಕ್ಕಿ ಅಥವಾ ಗೋಧಿ ನುಚ್ಚು) ಸೇರಿಸಿ.
- ಸುಮಾರು ಎರಡು ಕಪ್ ನೀರು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಒಂದು ಕುದಿ ಬಂದ ಮೇಲೆ ಮಗುಚಿ, ಮುಚ್ಚಳ ಮುಚ್ಚಿ 2 - 3 ವಿಷಲ್ ಮಾಡಿ.
- ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ. ಬೆಳಿಗ್ಗಿನ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಬಹಳ ಚೆನ್ನಾಗಿರುತ್ತದೆ.
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ