Beetroot chutney recipe in Kannada | ಬೀಟ್ರೂಟ್ ಚಟ್ನಿ ಮಾಡುವ ವಿಧಾನ
ಬೀಟ್ರೂಟ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಬೀಟ್ರೂಟ್
- 2 - 3 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಕಡ್ಲೆಬೇಳೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1/4 ಕಪ್ ತೆಂಗಿನ ತುರಿ
- ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು
- 1 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1 ಒಣಮೆಣಸಿನಕಾಯಿ
- 4 ಕರಿಬೇವಿನ ಎಲೆ
- ಚಿಟಿಕೆ ಇಂಗು
- 1 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಬೀಟ್ರೂಟ್ ಚಟ್ನಿ ಮಾಡುವ ವಿಧಾನ:
- ಒಂದು ಬಾಣಲೆಗೆ ಎಣ್ಣೆ, ಒಣ ಮೆಣಸಿನಕಾಯಿ ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ.
- ಬೇಳೆಗಳು ಹೊಂಬಣ್ಣ ಬರುವವರೆಗೆ ಹುರಿದು ತೆಗೆದಿಡಿ. ಹುರಿಯುವಾಗ ಈರುಳ್ಳಿ - ಬೆಳ್ಳುಳ್ಳಿ ಬೇಕಾದಲ್ಲಿ ಹಾಕಬಹುದು. ನಾನು ಹಾಕಲಿಲ್ಲ.
- ನಂತರ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿದ ಬೀಟ್ರೂಟ್ ಹಾಕಿ ಹುರಿಯಿರಿ.
- ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಿಸಿ. ಬಿಸಿ ಆರಲು ಬಿಡಿ.
- ತೆಂಗಿನ ತುರಿ, ಹುರಿದ ಪದಾರ್ಥಗಳನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಂಡು ಪುಡಿ ಮಾಡಿ.
- ಬೇಯಿಸಿದ ಬೀಟ್ರೂಟ್, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಅರೆದ ಚಟ್ನಿಯನ್ನು ಒಂದು ಪಾತ್ರೆಗೆ ಹಾಕಿ.
- ಎಣ್ಣೆ, ಇಂಗು, ಒಣಮೆಣಸಿಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. ಅನ್ನ, ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ