Ellu chikki recipe in Kannada | ಎಳ್ಳು ಚಿಕ್ಕಿ ಮಾಡುವ ವಿಧಾನ
ಎಳ್ಳು ಚಿಕ್ಕಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 1/4 ಕಪ್ಎಳ್ಳು
- 1/4 ಕಪ್ ಸಕ್ಕರೆ
- 1/2 ಟೀಸ್ಪೂನ್ ತುಪ್ಪ
ಎಳ್ಳು ಚಿಕ್ಕಿ ಮಾಡುವ ವಿಧಾನ:
- ಅಡುಗೆಮನೆ ಕಟ್ಟೆ ಅಥವಾ ಚಪಾತಿ ಮಣೆ ಅಥವಾ ಒಂದು ಪ್ಲೇಟ್ ನ ಹಿಂಭಾಗಕ್ಕೆ ತುಪ್ಪ ಸವರಿಡಿ.
- ಒಂದು ಬಾಣಲೆಯಲ್ಲಿ ಎಳ್ಳನ್ನು ಮಧ್ಯಮ ಉರಿಯಲ್ಲಿ ಚಟಪಟ ಅನ್ನುವುವರೆಗೆ ಹುರಿದು ತೆಗೆದಿಡಿ.
- ಅದೇ ಬಾಣಲೆಯಲ್ಲಿ ಸಕ್ಕರೆ ತೆಗೆದುಕೊಂಡು ಸಣ್ಣ ಉರಿಯಲ್ಲಿ ಕರಗಲು ಬಿಡಿ. ನೀರು ಹಾಕುವ ಅಗತ್ಯವಿಲ್ಲ.
- ಸಕ್ಕರೆ ಕರಗಲು ಶುರು ಆದಾಗ ಮಗುಚಲು ಪ್ರಾರಂಭಿಸಿ.
- ಸಕ್ಕರೆ ಸಂಪೂರ್ಣ ಕರಗಿ ಕಂದು ಬಣ್ಣಕ್ಕೆ ತಿರುಗಿದಾಗ ಸ್ಟವ್ ಆಫ್ ಮಾಡಿ.
- ಕೂಡಲೇ ಹುರಿದಿಟ್ಟ ಎಳ್ಳು ಸೇರಿಸಿ ಚೆನ್ನಾಗಿ ಕಲಸಿ.
- ಕಲಸುವಾಗ ಬೇಕಾದಲ್ಲಿ ಅರ್ಧ ಚಮಚ ತುಪ್ಪ ಸೇರಿಸಿದರೆ, ಒಳ್ಳೆ ಘಮ ಮತ್ತು ಹೊಳತೆ ಬರುವುದು.
- ಕೂಡಲೇ ತುಪ್ಪ ಸವರಿದ ಅಡುಗೆಮನೆ ಕಟ್ಟೆಗೆ (ಚಪಾತಿ ಮಣೆ ಅಥವಾ ಪ್ಲೇಟ್ ನ ಹಿಂಭಾಗ) ಸುರಿದು, ತುಪ್ಪ ಸವರಿದ ಲಟ್ಟಣಿಗೆಯಿಂದ ಅಗಲ ಮಾಡಿ.
- ಕೂಡಲೇ ಬೇಕಾದ ಆಕಾರಕ್ಕೆ ಕತ್ತರಿಸಿ. ಅಥವಾ ಚೂರುಗಳಾಗಿ ಮುರಿಯಲೂ ಬಹುದು.
- ಎಳ್ಳು ಚಿಕ್ಕಿ ಸವಿಯಲು ಸಿದ್ದ. ಬಿಸಿ ಆರಿದ ಮೇಲೆ ಡಬ್ಬಿಯಲ್ಲಿ ಹಾಕಿ ಎತ್ತಿಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ