ಬುಧವಾರ, ಫೆಬ್ರವರಿ 26, 2020

Tomato kurma in Kannada | ಟೊಮೇಟೊ ಕೂರ್ಮ ಮಾಡುವ ವಿಧಾನ

Tomato kurma in Kannada

Tomato kurma in Kannada | ಟೊಮೇಟೊ ಕೂರ್ಮ ಮಾಡುವ ವಿಧಾನ 


 ಬಿಳಿ ಸಾಗು ಅಥವಾ ಕೂರ್ಮ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 3 ಟೊಮೇಟೊ
  2. 1 ಈರುಳ್ಳಿ
  3. 1/2 ಟೀಸ್ಪೂನ್ ಜೀರಿಗೆ
  4. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ-ಬೆಳ್ಳುಳ್ಳಿ ಅಥವಾ ಪೇಸ್ಟ್
  5. 1 - 2 ಹಸಿರುಮೆಣಸಿನಕಾಯಿ
  6. 4 - 5 ಕರಿಬೇವಿನ ಎಲೆ
  7. 3 ಟೇಬಲ್ ಚಮಚ ಅಡುಗೆ ಎಣ್ಣೆ
  8. ದೊಡ್ಡ ಚಿಟಿಕೆ ಅರಿಶಿನ
  9. ಉಪ್ಪು ರುಚಿಗೆ ತಕ್ಕಷ್ಟು

ಬೇಕಾಗುವ ಪದಾರ್ಥಗಳು (ಮಸಾಲೆಗೆ):

  1. 1/4 ಕಪ್ ತೆಂಗಿನತುರಿ
  2. 3 - 4 ಒಣಮೆಣಸಿನಕಾಯಿ
  3. 2 ಟೀಸ್ಪೂನ್ ಎಳ್ಳು
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 1/4 ಟೀಸ್ಪೂನ್ ಮೆಂತ್ಯ
  7. 2 ಏಲಕ್ಕಿ
  8. 2 ಸೆಮೀ ಚಕ್ಕೆ
  9. 4 - 5 ಲವಂಗ

ಟೊಮೇಟೊ ಕೂರ್ಮ ಮಾಡುವ ವಿಧಾನ:

  1. ತೆಂಗಿನತುರಿ ಹೊರತುಪಡಿಸಿ, ಮಸಾಲೆಗೆ ಪಟ್ಟಿ ಮಾಡಿದ ಎಲ್ಲಾ ಪದಾರ್ಥಗಳನ್ನು ಒಂದು ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಹುರಿಯಿರಿ.
  2. ಬಿಸಿ ಆರಿದ ಮೇಲೆ, ತೆಂಗಿನತುರಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.  
  3. ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಜೀರಿಗೆ ಸೇರಿಸಿ.
  4. ಜೀರಿಗೆ ಸಿಡಿದ ಮೇಲೆ ಕತ್ತರಿಸಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಮತ್ತು ಕರಿಬೇವು ಹಾಕಿ. 
  5. ಸೀಳಿದ ಹಸಿಮೆಣಸಿನಕಾಯಿ ಸೇರಿಸಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.  
  6. ನಂತ್ರ ಕತ್ತರಿಸಿದ ಟೊಮೇಟೊ ಸೇರಿಸಿ ಹುರಿಯಿರಿ. 
  7. ಅರಿಶಿನ ಮತ್ತು ಉಪ್ಪು ಸೇರಿಸಿ, ಮಗುಚಿ, ಮುಚ್ಚಳ ಮುಚ್ಚಿ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. 
  8. ಆಮೇಲೆ ಅರೆದ ಮಸಾಲೆ ಸೇರಿಸಿ. 
  9. ಅಗತ್ಯವಿದ್ದಷ್ಟು ನೀರು ಸೇರಿಸಿ, ಮಗುಚಿ, ಮುಚ್ಚಳ ಮುಚ್ಚಿ ಪುನಃ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. 
  10. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಿಮ್ಮ ರುಚಿಗೆ ತಕ್ಕಂತೆ ಹುಳಿ ಮತ್ತು ಸಿಹಿ ಹೊಂದಿಸಿಕೊಳ್ಳಿ. 
  11. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಕುದಿಸಿ.  ಸ್ಟವ್ ಆಫ್ ಮಾಡಿ. 
  12. ಅನ್ನ, ಪೂರಿ, ದೋಸೆ, ಚಪಾತಿ ಮತ್ತು ರೊಟ್ಟಿ ಜೊತೆ ಬಡಿಸಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...