Hagalakayi fry recipe in Kannada | ಹಾಗಲಕಾಯಿ ಫ್ರೈ ಮಾಡುವ ವಿಧಾನ
ಹಾಗಲಕಾಯಿ ಫ್ರೈ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):
- 2 ಎಳೆಯ ಹಾಗಲಕಾಯಿ
- 1/4 ಟೀಸ್ಪೂನ್ ಅರಿಶಿನ ಪುಡಿ
- ಒಂದು ದೊಡ್ಡ ಚಿಟಿಕೆ ಇಂಗು
- 1 ಟೀಸ್ಪೂನ್ ಅಚ್ಚಖಾರದ ಪುಡಿ
- 1 ಟೀಸ್ಪೂನ್ ಧನಿಯಾ ಪುಡಿ
- 1/2 ಟೀಸ್ಪೂನ್ ಜೀರಿಗೆ ಪುಡಿ
- 1/2 - 1 ಟೀಸ್ಪೂನ್ ಮಾವಿನಕಾಯಿ ಪುಡಿ
- 1/2 ಟೀಸ್ಪೂನ್ ಗರಂ ಮಸಾಲಾ
- 1 ಟೀಸ್ಪೂನ್ ಜಜ್ಜಿದ ಸೋಂಪು
- 1 ಟೇಬಲ್ ಚಮಚ ಕಡ್ಲೆಹಿಟ್ಟು
- ನಿಮ್ಮ ರುಚಿ ಪ್ರಕಾರ ಉಪ್ಪು
- 3 - 5 ಟೇಬಲ್ ಚಮಚ ಅಡುಗೆ ಎಣ್ಣೆ
ಹಾಗಲಕಾಯಿ ಫ್ರೈ ಮಾಡುವ ವಿಧಾನ:
- ಮೊದಲಿಗೆ ಹಾಗಲಕಾಯಿಯನ್ನು ತೆಳು ಚಕ್ರಗಳನ್ನಾಗಿ ಕತ್ತರಿಸಿ, ಬೀಜ ತೆಗೆಯಿರಿ.
- ಬೇಕಾದಲ್ಲಿ ಉಪ್ಪು ನೀರಿನಲ್ಲಿ ಸ್ವಲ್ಪ ಹೊತ್ತು ಹಾಕಿಟ್ಟು ನೀರನು ಸಂಪೂರ್ಣ ಹಿಂಡಿ ತೆಗೆಯಿರಿ.
- ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
- ಅದಕ್ಕೆ ಕತ್ತರಿಸಿಟ್ಟ ಹಾಗಲಕಾಯಿ ಹಾಕಿ. ಸಣ್ಣ ಉರಿಯಲ್ಲಿ ಅಲ್ಲಲ್ಲಿಕಂದು ಬಣ್ಣ ಬರುವವರೆಗೆ ಹುರಿಯಿರಿ. ಬೇಕಾದಲ್ಲಿ ಸ್ವಲ್ಪ ಎಣ್ಣೆ ಸೇರಿಸಿಕೊಳ್ಳಿ.
- ಅದಕ್ಕೆ ಉಪ್ಪು, ಅರಿಶಿನ, ಅಚ್ಚಖಾರದ ಪುಡಿ ಮತ್ತು ಇಂಗು ಸೇರಿಸಿ.
- ಜೊತೆಯಲ್ಲಿ ಧನಿಯಾ ಪುಡಿ, ಜೀರಿಗೆ ಪುಡಿ, ಮಾವಿನಕಾಯಿ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಮಗುಚಿ.
- ಒಂದು ಚಮಚದಷ್ಟು ಜಜ್ಜಿದ ಸೋಂಪು ಸೇರಿಸಿ ಮಗುಚಿ.
- ಕೊನೆಯಲ್ಲಿ ಕಡ್ಲೆಹಿಟ್ಟು ಸೇರಿಸಿ, ಎರಡು ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ಬೇಕಾದಲ್ಲಿ ಸ್ವಲ್ಪ ಎಣ್ಣೆ ಸೇರಿಸಿಕೊಳ್ಳಿ.
- ಸ್ಟವ್ ಆಫ್ ಮಾಡಿ ಮೊಸರನ್ನ ಅಥವಾ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ