Parota recipe in Kannada | ಪರೋಟ ಮಾಡುವ ವಿಧಾನ
ಪರೋಟ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೈದಾ ಹಿಟ್ಟು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಪರೋಟ ಮಾಡುವ ವಿಧಾನ:
- ಮೊದಲಿಗೆ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು ಮತ್ತು ಉಪ್ಪು ತೆಗೆದುಕೊಳ್ಳಿ.
- ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಚಪಾತಿ ಹಿಟ್ಟಿನಂತೆ ಮೃದುವಾದ ಹಿಟ್ಟು ಕಲಸಿಕೊಳ್ಳಿ.
- ನಂತ್ರ ಸುಮಾರು ಅರ್ಧ ಗಂಟೆಯಿಂದ ಒಂದು ಗಂಟೆವರೆಗೆ ನೆನೆಯಲು ಬಿಡಿ.
- ನಿಂಬೆ ಗಾತ್ರದ ಚಪಾತಿ ಹಿಟ್ಟು ತೆಗೆದುಕೊಂಡು ತೆಳುವಾದ ಚಪಾತಿ ಮಾಡಿ. ಅಗತ್ಯವಿದ್ದಷ್ಟು ಎಣ್ಣೆ ಮುಟ್ಟಿಸಿಕೊಳ್ಳಿ.
- ಲಟ್ಟಿಸಿದ ಚಪಾತಿಯನ್ನು ಒಟ್ಟು ಮಾಡಿ, ವೃತ್ತಾಕಾರವಾಗಿ ಸುತ್ತಿ ಪುನಃ ಲಟ್ಟಿಸಿ. ದಯವಿಟ್ಟು ಮೇಲೆ ನೀಡಿದ ವಿಡಿಯೋ ನೋಡಿ.
- ಬಿಸಿ ತವಾ ಮೇಲೆ ಎಣ್ಣೆ ಹಾಕಿ ಎರಡು ಬದಿ ಕಾಯಿಸಿ.
- ಕೊನೆಯಲ್ಲಿ ಎಲ್ಲ ಪರೋಟಗಳನ್ನು ಒಟ್ಟಿಗೆಇಟ್ಟು ಎರಡು ಕೈಯಿಂದ ಮುದ್ದೆಯಾಗುವಂತೆ ಬಡಿಯಿರಿ. ನಿಮ್ಮಿಷ್ಟದ ಪಲ್ಯ ಅಥವಾ ಗೊಜ್ಜಿನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ