Aloo rava fingers recipe in Kannada | ಆಲೂಗಡ್ಡೆ ರವೆ ಫಿಂಗರ್ಸ್ ಮಾಡುವ ವಿಧಾನ
ಆಲೂಗಡ್ಡೆ ರವೆ ಫಿಂಗರ್ಸ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಮಧ್ಯಮ ಗಾತ್ರದ ಆಲೂಗಡ್ಡೆ
- 1/4 ಕಪ್ ರವೇ
- 1/4 ಕಪ್ ನೀರು
- 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1/2 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
- 1 ಸಣ್ಣಗೆ ಹೆಚ್ಚಿದ ಹಸಿಮೆಣಸು
- 1/4 ಚಮಚ ಜೀರಿಗೆ ಪುಡಿ
- ಉಪ್ಪು ನಿಮ್ಮ ರುಚಿ ಪ್ರಕಾರ
- ಎಣ್ಣೆ ಕಾಯಿಸಲು
ಆಲೂಗಡ್ಡೆ ರವೆ ಫಿಂಗರ್ಸ್ ಮಾಡುವ ವಿಧಾನ:
- ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ಒಂದು ಚಮಚ ಎಣ್ಣೆಯೊಂದಿಗೆ ನೀರು ಕುದಿಸಿ.
- ಅದಕ್ಕೆ ರವೇ ಸೇರಿಸಿ, ಮಗುಚಿ ಸ್ಟವ್ ಆಫ್ ಮಾಡಿ.
- ನಂತ್ರ ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ ಸೇರಿಸಿ.
- ಕೊತ್ತಂಬರಿ ಸೊಪ್ಪು ಹಾಕಿ.
- ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಹಸಿಮೆಣಸು ಹಾಕಿ.
- ಜೀರಿಗೆ ಪುಡಿ ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಎಲ್ಲವನ್ನು ಚೆನ್ನಾಗಿ ಗಂಟಿಲ್ಲದಂತೆ ಕಲಸಿ.
- ಕೈಗೆ ಎಣ್ಣೆ ಹಚ್ಚಿಕೊಂಡು ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು, ಹೊಸೆದು ಕಡ್ಡಿಗಳನ್ನು ಮಾಡಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಹೊಸೆದ ಕಡ್ಡಿಗಳನ್ನು ಹಾಕಿ ಕಾಯಿಸಿ.
- ಗುಳ್ಳೆಗಳು ಕಡಿಮೆ ಆಗುತ್ತಾ ಬಂದಾಗ, ತೆಗೆಯಿರಿ. ಟೊಮೇಟೊ ಸಾಸ್ ನೊಂದಿಗೆ ಬಡಿಸಿ. ಹಾಗೆಯೂ ತಿನ್ನಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ