Paneer bhurji recipe in Kannada | ಪನೀರ್ ಭುರ್ಜಿ ಮಾಡುವ ವಿಧಾನ
ಪನೀರ್ ಭುರ್ಜಿ ವಿಡಿಯೋ
ಪನೀರ್ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಲೀ ಹಾಲು
- 1 ಟೇಬಲ್ ಚಮಚ ಲಿಂಬೆ ಹಣ್ಣಿನ ರಸ ಅಥವಾ ವಿನೆಗರ್ ಅಥವಾ 1/4 ಕಪ್ ಹುಳಿ ಮೊಸರು
ಪನೀರ್ ಭುರ್ಜಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಥವಾ 200 ಗ್ರಾಂ ಪನೀರ್
- 1 ದೊಡ್ಡ ಈರುಳ್ಳಿ
- 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ (ಅಥವಾ ಸಣ್ಣಗೆ ಕತ್ತರಿಸಿದ ಶುಂಠಿ ಬೆಳ್ಳುಳ್ಳಿ)
- 2 ದೊಡ್ಡ ಟೊಮೇಟೊ
- 1/2 ಟೀಸ್ಪೂನ್ ಜೀರಿಗೆ
- 1/2 - 1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
- 1/2 ಟೀಸ್ಪೂನ್ ಗರಂ ಮಸಾಲಾ
- ದೊಡ್ಡ ಚಿಟಿಕೆ ಅರಿಶಿನ ಪುಡಿ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ಕಸೂರಿ ಮೇಥಿ ಅಥವಾ ಒಣಗಿದ ಮೆಂತೆ ಸೊಪ್ಪು (ಬೇಕಾದಲ್ಲಿ)
- 2 ಟೇಬಲ್ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಪನೀರ್ ಭುರ್ಜಿ ಮಾಡುವ ವಿಧಾನ:
- ಪನೀರ್ ಇಲ್ಲವಾದಲ್ಲಿ, ಒಂದು ಲೀ ಹಾಲು ಕುದಿಸಿ.
- 1 ಟೇಬಲ್ ಚಮಚ ಲಿಂಬೆ ಹಣ್ಣಿನ ರಸ ಅಥವಾ ವಿನೆಗರ್ ಅಥವಾ 1/4 ಕಪ್ ಹುಳಿ ಮೊಸರು ಹಾಕಿ ಹಾಲನ್ನು ಒಡೆಸಿಕೊಳ್ಳಿ. ಹಾಲು ಒಡೆದ ಕೂಡಲೇ ಸ್ಟವ್ ಆಫ್ ಮಾಡಿ.
- ತಡಮಾಡದೆ ಒಡೆದ ಹಾಲನ್ನು ಸೋಸಿದರೆ, ಪನೀರ್ ಸಿದ್ಧ.
- ಒಂದು ಬಾಣಲೆಯಲ್ಲಿ ಎಣ್ಣೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.
- ಜೀರಿಗೆ ಕೆಂಪಾದ ಕೂಡಲೇ, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಿರಿ.
- ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ನ್ನು ಹಾಕಿ ಬಾಡಿಸಿ. ಬೇಕಾದಲ್ಲಿ ಸಣ್ಣಗೆ ಕತ್ತರಿಸಿದ ಹಸಿಮೆಣಸು ಸೇರಿಸಬಹುದು.
- ಆಮೇಲೆ ಸಣ್ಣಗೆ ಕತ್ತರಿಸಿದ ಟೊಮೇಟೊ, ಅರಿಶಿನ ಪುಡಿ ಮತ್ತು ಉಪ್ಪು ಹಾಕಿ, ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ.
- ಅದಕ್ಕೆ ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಮಗುಚಿ. ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ.
- ಪುಡಿ ಮಾಡಿದ ಪನೀರ್ ಮತ್ತು ಕಸೂರಿ ಮೇಥಿ ಹಾಕಿ ಒಂದೆರಡು ನಿಮಿಷ ಕುದಿಸಿ.
- ಬೇಕಾದಲ್ಲಿ ಉಪ್ಪು ಹೊಂದಿಸಿಕೊಳ್ಳಿ.
- ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ಬ್ರೆಡ್ ನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ