Cooked rice paddu recipe in Kannada | ಅನ್ನ ಬಳಸಿ ಪಡ್ದು ಮಾಡುವ ವಿಧಾನ
ಅನ್ನ ಬಳಸಿ ಪಡ್ದು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅನ್ನ
- 2 ಟೇಬಲ್ ಸ್ಪೂನ್ ರವೆ
- 1 ಟೇಬಲ್ ಸ್ಪೂನ್ ಮೊಸರು
- 1/2 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- 1 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು
- 7 - 8 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
- 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಚಿಟಿಕೆ ಅರಿಶಿನ
- ಚಿಟಿಕೆ ಇಂಗು
- ಎಣ್ಣೆ ಪಡ್ಡು ಮಾಡಲು
- ಉಪ್ಪು ರುಚಿಗೆ ತಕ್ಕಷ್ಟು.
ಅನ್ನ ಬಳಸಿ ಪಡ್ದು ಮಾಡುವ ವಿಧಾನ:
- ಅನ್ನವನ್ನು ಹಿಸುಕಿ ಮುದ್ದೆ ಮಾಡಿ. ಅಥವಾ ಮಿಕ್ಸಿಯಲ್ಲಿ ಒಂದೆರಡು ಟೇಬಲ್ ಚಮಚ ನೀರು ಸೇರಿಸಿ ಅರೆದುಕೊಳ್ಳಿ.
- ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನ ಕಾಯಿ, ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
- ಅರಿಶಿನ ಮತ್ತು ಇಂಗು ಸೇರಿಸಿ.
- ನಂತ್ರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ರವೆಯನ್ನು ಸೇರಿಸಿ.
- ಮೊಸರು ಸೇರಿಸಿ.
- ಅಗತ್ಯವಿದ್ದಲ್ಲಿ ಒಂದೆರಡು ಟೇಬಲ್ ಚಮಚ ನೀರು ಸೇರಿಸಿ ಮೆತ್ತಗಿನ ಹಿಟ್ಟು ತಯಾರಿಸಿಕೊಳ್ಳಿ.
- ನಂತ್ರ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ. ಮಧ್ಯದಲ್ಲಿ ಸ್ವಲ್ಪ ತಗ್ಗು ಮಾಡಿದರೆ, ಬೇಗ ಬೇಯಲು ಅನುಕೂಲ ಆಗುತ್ತದೆ.
- ಪಡ್ಡು ತವಾವನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
- ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. ಮಧ್ಯಮ ಉರಿಯಲ್ಲಿ ಬೇಯಿಸಿ.
- ಸುಮಾರು ಒಂದು ನಿಮಿಷದ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ.
- ಪಡ್ಡುವನ್ನು ತಿರುಗಿಸಿ ಹಾಕಿ. ಇನ್ನೊಂದು ಬದಿಯೂ ಬೇಯಿಸಿ. ಬಿಸಿ ಅಥವಾ ತಣ್ಣಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ