Erissery recipe in Kannada | ಎರಿಸ್ಸೆರಿ ಮಾಡುವ ವಿಧಾನ
ಎರಿಸ್ಸೆರಿ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್)
- 1/4 ಕೆಜಿ ಸುವರ್ಣಗಡ್ಡೆ
- 1/4 ಕೆಜಿ ಚೀನಿಕಾಯಿ ಅಥವಾ ಸಿಹಿಗುಂಬಳ
- 1/4 ಕಪ್ ಅಲಸಂದೆ ಕಾಳು
- ಒಂದು ಚಿಟಿಕೆ ಅರಶಿನ ಪುಡಿ
- 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ಅರೆಯಲು ಬೇಕಾಗುವ ಪದಾರ್ಥಗಳು:
- 1 ಕಪ್ ತೆಂಗಿನ ತುರಿ
- 1 ಟೀಸ್ಪೂನ್ ಜೀರಿಗೆ
- 1 - 2 ಹಸಿರು ಮೆಣಸಿನಕಾಯಿ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 1 ಈರುಳ್ಳಿ ಹೆಚ್ಚಿದ್ದು
- 1/2 ಕಪ್ ತೆಂಗಿನತುರಿ
- 2 ಟೇಬಲ್ ಚಮಚ ಅಡುಗೆ ಎಣ್ಣೆ
ಎರಿಸ್ಸೆರಿ ಮಾಡುವ ವಿಧಾನ:
- ಅಲಸಂದೆ ಕಾಲನ್ನು ಮೂರರಿಂದ ನಾಲ್ಕು ಘಂಟೆ ನೀರಿನಲ್ಲಿ ನೆನೆಸಿಡಿ.
- ಸುವರ್ಣಗಡ್ಡೆಯನ್ನು ಸಿಪ್ಪೆ ತೆಗೆದು, ಕತ್ತರಿಸಿ ನೀರಿನಲ್ಲಿ ಹಾಕಿಡಿ. ಚೀನೀಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ.
- ಕಾಳು ಮತ್ತು ತರಕಾರಿಗಳನ್ನು ಕುಕ್ಕರ್ ನಲ್ಲಿ ತೆಗೆದುಕೊಳ್ಳಿ.
- ಅಚ್ಚಖಾರದ ಪುಡಿ, ಅರಿಶಿನ, ಉಪ್ಪು ಮತ್ತು ಒಂದು ಕಪ್ ನೀರು ಹಾಕಿ. ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ.
- ಜೀರಿಗೆ, ತೆಂಗಿನ ತುರಿ ಮತ್ತು ಹಸಿರುಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಬೇಯಿಸಿದ ತರಕಾರಿಗೆ ಅರೆದ ಮಸಾಲೆ ಹಾಕಿ. ಹೆಚ್ಚು ನೀರು ಹಾಕಬೇಡಿ.ಎರಿಸ್ಸೆರಿ ಸ್ವಲ್ಪ ಗಟ್ಟಿಯಾಗಿರಬೇಕು.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಒಂದೆರಡು ನಿಮಿಷ ಕುದಿಸಿ, ಸ್ಟವ್ ಆಫ್ ಮಾಡಿ.
- ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಒಗ್ಗರಣೆಗೆ ಈರುಳ್ಳಿ ಹಾಕಿ ಹುರಿಯಿರಿ.
- ಕೊನೆಯಲ್ಲಿ ತೆಂಗಿನತುರಿ ಹಾಕಿ ಹುರಿಯಿರಿ. ಕುದಿಸಿದ ಗೊಜ್ಜಿಗೆ ಸೇರಿಸಿ. ಚೆನ್ನಾಗಿ ಕಲಸಿ ಬಿಸಿ ಅನ್ನದೊಂದಿಗೆ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ