Badam halwa recipe in Kannada | ಬಾದಾಮ್ ಹಲ್ವಾ ಮಾಡುವ ವಿಧಾನ
ಬಾದಾಮ್ ಹಲ್ವಾ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಬಾದಾಮಿ
- 1/2 ಕಪ್ ಹಾಲು
- 1/2 ಕಪ್ ಸಕ್ಕರೆ
- 2 ಟೇಬಲ್ ಚಮಚ ತುಪ್ಪ
- ಚಿಟಿಕೆ ಕೇಸರಿ (ಬೇಕಾದಲ್ಲಿ)
- ಚಿಟಿಕೆ ಏಲಕ್ಕಿ ಪುಡಿ
ಬಾದಾಮ್ ಹಲ್ವಾ ಮಾಡುವ ವಿಧಾನ:
- ಎರಡು ಟೇಬಲ್ ಚಮಚ ಹಾಲಿನಲ್ಲಿ ಕೇಸರಿಯನ್ನು ನೆನೆಸಿಡಿ.
- ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಬಾದಾಮಿ ಹಾಕಿ ಎರಡು ನಿಮಿಷದ ನಂತ್ರ ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ಬಾದಾಮಿ ಸಿಪ್ಪೆ ತೆಗೆದು ಒಂದು ಘಂಟೆ ನೀರಿನಲ್ಲಿ ನೆನೆಸಿಡಿ.
- ನೆನೆಸಿದ ಬಾದಾಮಿಯನ್ನು ಹಾಲು ಹಾಕಿ ನುಣ್ಣನೆ ಅರೆಯಿರಿ.
- ಒಂದು ನಾನ್-ಸ್ಟಿಕ್ ಬಾಣಲೆಯಲ್ಲಿ ತುಪ್ಪ ಮತ್ತು ಅರೆದ ಮಿಶ್ರಣ ಹಾಕಿ ಸ್ಟೋವ್ ಮೇಲಿಟ್ಟು ಮಗುಚಲು ಪ್ರಾರಂಭಿಸಿ.
- ಸಕ್ಕರೆಯನ್ನು ಸೇರಿಸಿ ಮಗುಚುವುದನ್ನು ಮುಂದುವರೆಸಿ.
- ಕೇಸರಿ ನೆನೆಸಿದ ಹಾಲನ್ನು ಹಾಕಿ ಮಧ್ಯಮ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ.
- ಸ್ವಲ್ಪ ಗಟ್ಟಿಯಾದಾಗ ಎರಡು ಟೇಬಲ್ ಚಮಚ ತುಪ್ಪ ಸೆರಿಸ್ ಮಗುಚುವುದನ್ನು ಮುಂದುವರೆಸಿ.
- ಸ್ವಲ್ಪ ಸಮಯದ ನಂತರ ತಳ ಬಿಡಲು ಪ್ರಾರಂಭಿಸಿದಾಗ, ಏಲಕ್ಕಿ ಪುಡಿ ಸೇರಿಸಿ.
- ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ.
- ಬಾದಾಮ್ ಹಲ್ವಾ ಸವಿಯಲು ಸಿದ್ದ. ಬಿಸಿ ಅಥವಾ ತಣ್ಣಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ