ಸೋಮವಾರ, ಜನವರಿ 15, 2018

Avarekalu sagu recipe in Kannada | ಅವರೇಕಾಳು ಸಾಗು ಮಾಡುವ ವಿಧಾನ

Avarekalu sagu recipe in Kannada

Avarekalu sagu recipe in Kannada |ಅವರೇಕಾಳು ಸಾಗು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

 1. 1 ಕಪ್ ಅವರೇಕಾಳು
 2. 1 ದೊಡ್ಡ ಈರುಳ್ಳಿ
 3. 1 ಟೊಮ್ಯಾಟೋ
 4. 1/4 ಟೀಸ್ಪೂನ್ ಅರಶಿನ ಪುಡಿ
 5. 4 ಟೀಸ್ಪೂನ್ ಅಡುಗೆ ಎಣ್ಣೆ
 6. 1/2 ಟೀಸ್ಪೂನ್ ಸಾಸಿವೆ
 7. 1 ಟೀಸ್ಪೂನ್ ಉದ್ದಿನ ಬೇಳೆ
 8. 4 - 5 ಕರಿಬೇವಿನ ಎಲೆ
 9. ಉಪ್ಪು ರುಚಿಗೆ ತಕ್ಕಷ್ಟು

ಬೇಕಾಗುವ ಪದಾರ್ಥಗಳು (ಮಸಾಲೆಗೆ):

 1. 1/2 ಕಪ್ ತೆಂಗಿನತುರಿ
 2. 1 ಸೆಮೀ ಉದ್ದದ ಶುಂಠಿ
 3. 3 ಎಸಳು ಬೆಳ್ಳುಳ್ಳಿ
 4. 1 ಟೀಸ್ಪೂನ್ ಕೊತ್ತಂಬರಿ ಬೀಜ
 5. 1/2 ಟೀಸ್ಪೂನ್ ಜೀರಿಗೆ
 6. 2 ಟೇಬಲ್ ಸ್ಪೂನ್ ಹುರಿಗಡಲೆ 
 7. 1 ಟೀಸ್ಪೂನ್ ಗಸಗಸೆ 
 8. 1 - 2 ಹಸಿರುಮೆಣಸಿನಕಾಯಿ
 9. 1/2 ಬೆರಳುದ್ದ ಚಕ್ಕೆ
 10. 4 - 5 ಲವಂಗ
 11. 1 ಏಲಕ್ಕಿ
 12. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು

ಅವರೇಕಾಳು ಸಾಗು ಮಾಡುವ ವಿಧಾನ:

 1. ಒಂದು ಕಪ್ ನಷ್ಟು ಅವರೆಕಾಳನ್ನು ಕುಕ್ಕರ್ಗೆ ಹಾಕಿ. ಬೇಕಾದಷ್ಟು ನೀರು, ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ. 
 2. ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ಅರೆದು ಕೊಳ್ಳಿ.
 3. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ ಮತ್ತು ಉದ್ದಿನ ಬೇಳೆಯ ಒಗ್ಗರಣೆ ಮಾಡಿ. 
 4. ಸಾಸಿವೆ ಸಿಡಿದ ಕೂಡಲೇ ಅರಿಶಿನ, ಇಂಗು ಮತ್ತು ಕರಿಬೇವಿನ ಎಲೆ ಸೇರಿಸಿ. 
 5. ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. 
 6. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ.
 7. ಈಗ ಅರೆದ ಮಸಾಲೆ ಹಾಕಿ. 
 8. ನಂತ್ರ ಬೇಯಿಸಿದ ಅವರೇಕಾಳನ್ನು ಹಾಕಿ.
 9. ಉಪ್ಪು ಮತ್ತು ಬೇಕಾದಷ್ಟು ನೀರು ಸೇರಿಸಿ. 
 10. ಸಣ್ಣ ಉರಿಯಲ್ಲಿ ಒಂದೈದು ನಿಮಿಷ ಕುದಿಸಿ
 11. ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...