ಮಂಗಳವಾರ, ಜೂನ್ 22, 2021

Red chutney recipe for masale dose in Kannada | ಕೆಂಪು ಚಟ್ನಿ ಮಾಡುವ ವಿಧಾನ

 

Red chutney recipe for masale dose in Kannada

Red chutney recipe for masale dose in Kannada | ಕೆಂಪು ಚಟ್ನಿ ಮಾಡುವ ವಿಧಾನ

ಮಸಾಲೆ ದೋಸೆ ಕೆಂಪು ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 10 ಬ್ಯಾಡ್ಗಿ ಮೆಣಸಿನಕಾಯಿ
  2. 1 ಸಣ್ಣ ಗಡ್ಡೆ ಬೆಳ್ಳುಳ್ಳಿ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 2 ಟೀಸ್ಪೂನ್ ಜೀರಿಗೆ
  5. ಸ್ವಲ್ಪ ಕರಿಬೇವು
  6. ಉಪ್ಪು ರುಚಿಗೆ ತಕ್ಕಷ್ಟು

ಕೆಂಪು ಚಟ್ನಿ ಮಾಡುವ ವಿಧಾನ:

  1. ಒಣಮೆಣಸಿನಕಾಯಿಯನ್ನು 30ನಿಮಿಷ ಬಿಸಿ ನೀರಿನಲ್ಲಿ ನೆನೆಸಿಡಿ. 
  2. ನೆನೆಸಿದ ಒಣಮೆಣಸಿನಕಾಯಿಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಳ್ಳಿ.
  3. ಸಿಪ್ಪೆ ತೆಗೆದ ಬೆಳ್ಳುಳ್ಳಿ ಸೇರಿಸಿ. 
  4. ಕೊತ್ತಂಬರಿ ಬೀಜ, ಜೀರಿಗೆ, ಕರಿಬೇವು ಮತ್ತು ಉಪ್ಪು ಸೇರಿಸಿ.  
  5. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. ಮೆಣಸಿನಕಾಯಿ ನೀರು ಸೇರಿಸಬಹುದು. 
  6. ಒಂದು ಪಾತ್ರೆಗೆ ತೆಗೆದು, ಮಸಾಲೆ ದೋಸೆಗೆ ಹಚ್ಚಿ, ಕಾಯಿಸಿ, ರುಚಿಕರ ಗರಿಗರಿ ದೋಸೆ ಮಾಡಿ.  

ಗುರುವಾರ, ಜೂನ್ 17, 2021

Kanchipuram idli recipe in Kannada | ಮಸಾಲೆ ಇಡ್ಲಿ ಮಾಡುವ ವಿಧಾನ

 

Kanchipuram idli recipe in Kannada

Kanchipuram idli recipe in Kannada | ಮಸಾಲೆ ಇಡ್ಲಿ ಮಾಡುವ ವಿಧಾನ

ಮಸಾಲೆ ಇಡ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಇಡ್ಲಿ ರವೆ
  2. 1/2 ಕಪ್ ಉದ್ದಿನಬೇಳೆ
  3. 1 ಟೀಸ್ಪೂನ್ ಮೆಂತೆ 
  4. ಎಣ್ಣೆ ಅಥವಾ ತುಪ್ಪ (ಇಡ್ಲಿ ತಟ್ಟೆಗೆ ಹಚ್ಚಲು)
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ
  3. 1 ಟೀಸ್ಪೂನ್ ಉದ್ದಿನಬೇಳೆ
  4. 1 ಟೀಸ್ಪೂನ್ ಕಡ್ಲೆಬೇಳೆ
  5. 1/2 - 1 ಟೀಸ್ಪೂನ್ ಜಜ್ಜಿದ ಕಾಳುಮೆಣಸು
  6. 1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು 
  7. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. 1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  9. 1 ಹೆಚ್ಚಿದ ಹಸಿರು ಮೆಣಸಿನಕಾಯಿ
  10. ದೊಡ್ಡ ಚಿಟಿಕೆ ಇಂಗು
  11. 2 ಟೀಸ್ಪೂನ್ ಅಡುಗೆ ಎಣ್ಣೆ

ಮಸಾಲೆ ಇಡ್ಲಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಉದ್ದಿನಬೇಳೆ ಮತ್ತು ಮೆಂತೆ ತೆಗೆದುಕೊಳ್ಳಿ. 
  2. ಚೆನ್ನಾಗಿ ತೊಳೆದು, 4 - 5 ಘಂಟೆ ನೆನೆಸಿಡಿ. 
  3. ನೆನೆಸಿದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  5. ಇಡ್ಲಿರವೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ತೊಳೆದು, ನೀರು ಸಂಪೂರ್ಣ ಬಗ್ಗಿಸಿ. 
  6. ಅದಕ್ಕೆ ಅರೆದ ಉದ್ದಿನಹಿಟ್ಟು ಹಾಕಿ. 
  7. ಚೆನ್ನಾಗಿ ಕಲಸಿ. 
  8. ಮುಚ್ಚಳ ಮುಚ್ಚಿ 7 - 10 ಘಂಟೆ ಹಿಟ್ಟು ಹುದುಗಲು ಬಿಡಿ. 
  9. ಹಿಟ್ಟು ಹುದುಗಿದ ಮೇಲೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಕಲಸಿ. 
  10. ಒಂದು ಬಾಣಲೆ ಬಿಸಿ ಮಾಡಿ. ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆಯ ಒಗ್ಗರಣೆ ಮಾಡಿ.
  11. ಸಾಸಿವೆ ಸಿಡಿದ ಕೂಡಲೇ ಜಜ್ಜಿದ ಕಾಳುಮೆಣಸು, ಹೆಚ್ಚಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಹಸಿರುಮೆಣಸಿನಕಾಯಿ ಸೇರಿಸಿ ಹುರಿಯಿರಿ. 
  12. ನಂತರ ಇಂಗು ಸೇರಿಸಿ ಸ್ಟವ್ ಆಫ್ ಮಾಡಿ.   
  13. ಇಡ್ಲಿ ಮಾಡಲು ತುಪ್ಪ ಅಥವಾ ಎಣ್ಣೆ ಸವರಿದ ಇಡ್ಲಿ ತಟ್ಟೆಗೆ ಹಿಟ್ಟನ್ನು ಹಾಕಿ 10 - 12 ನಿಮಿಷ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ. 
  14. ನಾನು ಲೋಟದಲ್ಲಿ ಹಾಕಿ 20 ನಿಮಿಷ ಬೇಯಿಸಿದೆ. 
  15. ತೆಂಗಿನ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

ಮಂಗಳವಾರ, ಜೂನ್ 15, 2021

5 min tomato chutney recipe in Kannada | 5 ನಿಮಿಷದಲ್ಲಿ ಟೊಮೇಟೊ ಚಟ್ನಿ ಮಾಡುವ ವಿಧಾನ

 

5 min tomato chutney recipe in Kannada

5 min tomato chutney recipe in Kannada | 5 ನಿಮಿಷದಲ್ಲಿ ಟೊಮೇಟೊ ಚಟ್ನಿ ಮಾಡುವ ವಿಧಾನ

Tomato onion chutney video Kannada

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 3 ಮಧ್ಯಮ ಗಾತ್ರದ ಟೊಮೇಟೊ
  2. 1  ಮಧ್ಯಮ ಗಾತ್ರದ ಈರುಳ್ಳಿ
  3. 2 ಎಸಳು ಬೆಳ್ಳುಳ್ಳಿ
  4. 1/2 ಟೀಸ್ಪೂನ್ ಸಾರಿನಪುಡಿ 
  5. 1/2 ಟೀಸ್ಪೂನ್ ಅಚ್ಚಖಾರದ ಪುಡಿ
  6. ಬೆಲ್ಲ ರುಚಿಗೆ ತಕ್ಕಷ್ಟು
  7. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. ದೊಡ್ಡ ಚಿಟಿಕೆ ಅರಿಶಿನ
  4. ದೊಡ್ಡ ಚಿಟಿಕೆಇಂಗು
  5. 4 - 5 ಕರಿಬೇವಿನ ಎಲೆ
  6. 2 ಟೇಬಲ್ ಚಮಚ ಅಡುಗೆ ಎಣ್ಣೆ

ಟೊಮೇಟೊ ನೀರುಳ್ಳಿ ಚಟ್ನಿ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಬೆಳ್ಳುಳ್ಳಿ ತೆಗೆದುಕೊಳ್ಳಿ. 
  2. ದೊಡ್ಡದಾಗಿ ಕತ್ತರಿಸಿದ ಟೊಮೇಟೊ ಮತ್ತು ಈರುಳ್ಳಿಯನ್ನುಸೇರಿಸಿ.
  3. ಸಾರಿನಪುಡಿ, ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪು ಸೇರಿಸಿ. 
  4. ಅರೆದು ಪಕ್ಕಕ್ಕಿಡಿ. 
  5. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಒಣಮೆಣಸಿನಕಾಯಿ ಒಗ್ಗರಣೆ ಮಾಡಿ. 
  6. ಕರಿಬೇವು, ಅರಿಶಿನ ಮತ್ತು ಇಂಗು ಸೇರಿಸಿ. 
  7. ಆಮೇಲೆ ಅರೆದ ಅಥವಾ ರುಬ್ಬಿದ ಟೊಮೇಟೊ ಪೇಸ್ಟ್ ಹಾಕಿ ಮಗುಚಿ. 
  8. ಮುಚ್ಚಳ ಮುಚ್ಚಿ ಬೇಯಿಸಿ. 
  9. ಬೇಕಾದಲ್ಲಿ ಉಪ್ಪು ಮತ್ತು ಬೆಲ್ಲ ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ.  
  10. ಎಣ್ಣೆ ಬಿಡುವವರೆಗೆ ಕುದಿಸಿ, ಸ್ಟವ್ ಆಫ್ ಮಾಡಿ. ಬಿಸಿ ಅನ್ನ, ದೋಸೆ, ಇಡ್ಲಿ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ. 
Related Posts Plugin for WordPress, Blogger...