Red chutney recipe for masale dose in Kannada | ಕೆಂಪು ಚಟ್ನಿ ಮಾಡುವ ವಿಧಾನ
ಮಸಾಲೆ ದೋಸೆ ಕೆಂಪು ಚಟ್ನಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 10 ಬ್ಯಾಡ್ಗಿ ಮೆಣಸಿನಕಾಯಿ
- 1 ಸಣ್ಣ ಗಡ್ಡೆ ಬೆಳ್ಳುಳ್ಳಿ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 2 ಟೀಸ್ಪೂನ್ ಜೀರಿಗೆ
- ಸ್ವಲ್ಪ ಕರಿಬೇವು
- ಉಪ್ಪು ರುಚಿಗೆ ತಕ್ಕಷ್ಟು
ಕೆಂಪು ಚಟ್ನಿ ಮಾಡುವ ವಿಧಾನ:
- ಒಣಮೆಣಸಿನಕಾಯಿಯನ್ನು 30ನಿಮಿಷ ಬಿಸಿ ನೀರಿನಲ್ಲಿ ನೆನೆಸಿಡಿ.
- ನೆನೆಸಿದ ಒಣಮೆಣಸಿನಕಾಯಿಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಳ್ಳಿ.
- ಸಿಪ್ಪೆ ತೆಗೆದ ಬೆಳ್ಳುಳ್ಳಿ ಸೇರಿಸಿ.
- ಕೊತ್ತಂಬರಿ ಬೀಜ, ಜೀರಿಗೆ, ಕರಿಬೇವು ಮತ್ತು ಉಪ್ಪು ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. ಮೆಣಸಿನಕಾಯಿ ನೀರು ಸೇರಿಸಬಹುದು.
- ಒಂದು ಪಾತ್ರೆಗೆ ತೆಗೆದು, ಮಸಾಲೆ ದೋಸೆಗೆ ಹಚ್ಚಿ, ಕಾಯಿಸಿ, ರುಚಿಕರ ಗರಿಗರಿ ದೋಸೆ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ