5 min tomato chutney recipe in Kannada | 5 ನಿಮಿಷದಲ್ಲಿ ಟೊಮೇಟೊ ಚಟ್ನಿ ಮಾಡುವ ವಿಧಾನ
Tomato onion chutney video Kannada
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 3 ಮಧ್ಯಮ ಗಾತ್ರದ ಟೊಮೇಟೊ
- 1 ಮಧ್ಯಮ ಗಾತ್ರದ ಈರುಳ್ಳಿ
- 2 ಎಸಳು ಬೆಳ್ಳುಳ್ಳಿ
- 1/2 ಟೀಸ್ಪೂನ್ ಸಾರಿನಪುಡಿ
- 1/2 ಟೀಸ್ಪೂನ್ ಅಚ್ಚಖಾರದ ಪುಡಿ
- ಬೆಲ್ಲ ರುಚಿಗೆ ತಕ್ಕಷ್ಟು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- ದೊಡ್ಡ ಚಿಟಿಕೆ ಅರಿಶಿನ
- ದೊಡ್ಡ ಚಿಟಿಕೆಇಂಗು
- 4 - 5 ಕರಿಬೇವಿನ ಎಲೆ
- 2 ಟೇಬಲ್ ಚಮಚ ಅಡುಗೆ ಎಣ್ಣೆ
ಟೊಮೇಟೊ ನೀರುಳ್ಳಿ ಚಟ್ನಿ ಮಾಡುವ ವಿಧಾನ:
- ಮಿಕ್ಸಿ ಜಾರಿನಲ್ಲಿ ಬೆಳ್ಳುಳ್ಳಿ ತೆಗೆದುಕೊಳ್ಳಿ.
- ದೊಡ್ಡದಾಗಿ ಕತ್ತರಿಸಿದ ಟೊಮೇಟೊ ಮತ್ತು ಈರುಳ್ಳಿಯನ್ನುಸೇರಿಸಿ.
- ಸಾರಿನಪುಡಿ, ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪು ಸೇರಿಸಿ.
- ಅರೆದು ಪಕ್ಕಕ್ಕಿಡಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಒಣಮೆಣಸಿನಕಾಯಿ ಒಗ್ಗರಣೆ ಮಾಡಿ.
- ಕರಿಬೇವು, ಅರಿಶಿನ ಮತ್ತು ಇಂಗು ಸೇರಿಸಿ.
- ಆಮೇಲೆ ಅರೆದ ಅಥವಾ ರುಬ್ಬಿದ ಟೊಮೇಟೊ ಪೇಸ್ಟ್ ಹಾಕಿ ಮಗುಚಿ.
- ಮುಚ್ಚಳ ಮುಚ್ಚಿ ಬೇಯಿಸಿ.
- ಬೇಕಾದಲ್ಲಿ ಉಪ್ಪು ಮತ್ತು ಬೆಲ್ಲ ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ.
- ಎಣ್ಣೆ ಬಿಡುವವರೆಗೆ ಕುದಿಸಿ, ಸ್ಟವ್ ಆಫ್ ಮಾಡಿ. ಬಿಸಿ ಅನ್ನ, ದೋಸೆ, ಇಡ್ಲಿ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ