ಗುರುವಾರ, ಏಪ್ರಿಲ್ 29, 2021

Immunity saaru recipe in Kannada | ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾರು ಮಾಡುವ ವಿಧಾನ

 

Immunity saaru recipe in Kannada

Immunity saaru recipe in Kannada | ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾರು ಮಾಡುವ ವಿಧಾನ 

ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 2 ಮಧ್ಯಮ ಗಾತ್ರದ ಟೊಮೆಟೋ 
  2. 1/4 ಟೀಸ್ಪೂನ್ ಅರಿಶಿನ ಪುಡಿ
  3. 1 ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ಅನುಗುಣವಾಗಿ)
  4. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  5. 1 ಟೇಬಲ್ ಸ್ಪೂನ್ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
  6. 1/2 - 1 ನಿಂಬೆಹಣ್ಣು

ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1 ಟೀಸ್ಪೂನ್ ಕೋತ್ತಂಬರಿ ಬೀಜ 
  2. 1 ಟೀಸ್ಪೂನ್ ಜೀರಿಗೆ
  3. 1 ಟೀಸ್ಪೂನ್ ಕಾಳು ಮೆಣಸು
  4. 2 ಒಣ ಮೆಣಸಿನಕಾಯಿ
  5. 1 ಇಂಚು ಉದ್ದದ ಶುಂಠಿ
  6. 10 ಎಸಳು ಬೆಳ್ಳುಳ್ಳಿ
  7. ಸ್ವಲ್ಪ ಕರಿಬೇವು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/2 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ
  3.  5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಎಣ್ಣೆ ಅಥವಾ ತುಪ್ಪ 

ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾರು ಮಾಡುವ ವಿಧಾನ:

  1. ಅರೆಯಲು ಪಟ್ಟಿಮಾಡಿದ ಪದಾರ್ಥಗಳನ್ನು ಮಿಕ್ಸಿಜಾರಿನಲ್ಲಿ ನೀರು ಹಾಕದೆ ಪುಡಿಮಾಡಿಕೊಳ್ಳಿ. 
  2. ಮಸಾಲೆ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿಡಿ. 
  3. ನಂತರ ಟೊಮೇಟೊವನ್ನು ತರಿತರಿಯಾಗಿ ಅರೆದುಕೊಳ್ಳಿ. 
  4. ಅರೆದ ಟೊಮ್ಯಾಟೊವನ್ನು ಒಂದು ಬಾಣಲೆಗೆ ಅಥವಾ ಪಾತ್ರೆಗೆ ಹಾಕಿ ಕುದಿಯಲು ಇಡಿ. 
  5. ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಮಗುಚಿ.
  6. ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿ.  
  7. ಆಮೇಲೆ ಅಗತ್ಯವಿದ್ದಷ್ಟು ನೀರು, ಬೆಲ್ಲ ಮತ್ತು ರುಚಿಗೆ ತಕ್ಕಂತೆ ಉಪ್ಪು ಹಾಕಿ ಕುದಿಸಿ. 
  8. ತಯಾರಿಸಿದ ಮಸಾಲೆ ಹಾಕಿ ಕುದಿಸಿ. 
  9. ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  10. ರುಚಿಗೆ ತಕ್ಕಷ್ಟು ನಿಂಬೆ ಹಣ್ಣಿನ ರಸ ಹಾಕಿ. 
  11. ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.  
  12. ಬಿಸಿಯಾದ ಅನ್ನದೊಂದಿಗೆ ಬಡಿಸಿ. ಅಥವಾ ಸೂಪ್ ತರಹ ಕುಡಿಯಲು ಕೊಡಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಏಪ್ರಿಲ್ 27, 2021

Choco bar recipe in Kannada | ಬಿಸ್ಕೆಟ್ ಚಾಕೋ ಬಾರ್ ಮಾಡುವ ವಿಧಾನ

 

Choco bar recipe in Kannada

Choco bar recipe in Kannada | ಬಿಸ್ಕೆಟ್ ಚಾಕೋ ಬಾರ್ ಮಾಡುವ ವಿಧಾನ 

ಚಾಕೋ ಬಾರ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ 

  1. 2 ಸಣ್ಣ ಪ್ಯಾಕೆಟ್ ಚಾಕೋಚಿಪ್ ಬಿಸ್ಕತ್ (5ರೂ. ನ ಹ್ಯಾಪಿ ಹ್ಯಾಪಿ)
  2. 1/4 - 1/2 ಕಪ್ ಹಾಲು
  3. 1- 2 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)

ಬಿಸ್ಕೆಟ್ ಚಾಕೋ ಬಾರ್ ಮಾಡುವ ವಿಧಾನ:

  1. ಹಾಲನ್ನು ಕುದಿಸಿ ಆರಿಸಿಕೊಳ್ಳಿ. 
  2. ಬಿಸ್ಕತ್ ಪ್ಯಾಕ್ ತೆರೆದು ಬಿಸ್ಕತ್ ಅನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. 
  3. ರುಚಿಗೆ ತಕ್ಕಂತೆ ಸಕ್ಕರೆ ಸೇರಿಸಿ. ಸಕ್ಕರೆ ಹಾಕದೆಯೂ ಮಾಡಬಹುದು. 
  4. ಬಿಸ್ಕತ್ಕು ಅನ್ನು ಪುಡಿಮಾಡಿಕೊಳ್ಳಿ. 
  5. ಹಾಲು ಹಾಕಿ ಪುನಃ ಅರೆಯಿರಿ. ದಪ್ಪ ಮಿಲ್ಕ್ ಶೇಕ್ ನಂತಾಗಲಿ.  
  6. ಈಗ ಲೋಟ ತೆಗೆದುಕೊಂಡು ಅದರಲ್ಲಿ ಖಾಲಿ ಬಿಸ್ಕತ್ ಕವರ್ ಇಡಿ. 
  7. ಅದಕ್ಕೆ ಅರೆದ ಮಿಶ್ರಣವನ್ನು ಸುರಿಯಿರಿ.  ಪೇಪರ್ ಕಪ್ ಬೇಕಾದರೂ ಬಳಸಬಹುದು. 
  8. ಒಂದು ಚಮಚ ಅಥವಾ ಕಡ್ಡಿ ಇಟ್ಟು ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ. ಸುಮಾರು ೪ - ೫ ಘಂಟೆ ಬೇಕಾಗಬಹುದು.ನಾನು ರಾತ್ರೆಯಿಡೀ ಇಟ್ಟಿದ್ದೆ.
  9. ಗಟ್ಟಿಯಾದ ನಂತರ, ಬಿಸ್ಕತ್ ಕವರ್ ಅನ್ನು ಹರಿದು ತೆಗೆಯಿರಿ. 
  10. ರುಚಿಯಾದ ಚಾಕೋ ಬಾರ್ ನ್ನು ಸವಿಯಿರಿ. 

ಭಾನುವಾರ, ಏಪ್ರಿಲ್ 25, 2021

Halasinakai palya recipe in Kannada | ಹಲಸಿನಕಾಯಿ ಪಲ್ಯ ಮಾಡುವ ವಿಧಾನ

 

Halasinakai palya recipe in Kannada

Halasinakai palya recipe in Kannada | ಹಲಸಿನಕಾಯಿ ಪಲ್ಯ ಮಾಡುವ ವಿಧಾನ 

ಹಲಸಿನಕಾಯಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಎಳೆ ಹಲಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 4 - 6 ಟೀಸ್ಪೂನ್ ಅಡುಗೆ ಎಣ್ಣೆ
  6. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  7. 1 ದೊಡ್ಡ ಚಿಟಿಕೆ ಇಂಗು
  8. 4 - 5 ಕರಿಬೇವಿನ ಎಲೆ
  9. ನೆಲ್ಲಿಕಾಯಿ ಗಾತ್ರದ ಬೆಲ್ಲ
  10. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  11. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 3 ಒಣ ಮೆಣಸಿನಕಾಯಿ
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ

ಹಲಸಿನಕಾಯಿ ಪಲ್ಯ ಮಾಡುವ ವಿಧಾನ:

  1. ಹಲಸಿನಕಾಯಿ ಹೊರಗಿನ ಸಿಪ್ಪೆ ಮತ್ತು ಒಳಗಿನ ತಿರುಳು ತೆಗೆದು ಕತ್ತರಿಸಿ ನೀರಿನಲ್ಲಿ ಹಾಕಿಡಿ.
  2. ನಂತ್ರ ಕುಕ್ಕರ್ ನಲ್ಲಿ ನೀರಿನಲ್ಲಿ ಹಾಕಿಟ್ಟ ಹಲಸಿನಕಾಯಿ ತೆಗೆದುಕೊಳ್ಳಿ.  
  3. ಒಂದು ಚಮಚ ಉಪ್ಪು ಮತ್ತು ಚಿಟಿಕೆ ಅರಶಿನ ಪುಡಿ ಹಾಕಿ.
  4. ಅಗತ್ಯವಿದ್ದಷ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ. 
  5. ಬೇಯಿಸಿದ ನಂತರ ನೀರು ಬಸಿದು, ಹಲಸಿನಕಾಯಿಯನ್ನು ಗುದ್ದಿಕೊಳ್ಳಿ. 
  6. ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, ಸಾಸಿವೆ, ಕೊತ್ತಂಬರಿ ಬೀಜ ಮತ್ತು ಒಣ ಮೆಣಸಿನಕಾಯಿ ಹಾಕಿ, ನೀರು ಹಾಕದೆ ಪುಡಿ ಮಾಡಿ. 
  7. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  8. ಸಾಸಿವೆ ಸಿಡಿದ ಕೂಡಲೇ ಒಣಮೆಣಸಿನಕಾಯಿ, ಅರಶಿನ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  9. ಅದಕ್ಕೆ ಜಜ್ಜಿದ ಹಲಸಿನಕಾಯಿ ಹಾಕಿ.  ಒಮ್ಮೆ ಮಗುಚಿ. 
  10. ಉಪ್ಪು, ಹುಳಿ ಮತ್ತು ಬೆಲ್ಲ ಹಾಕಿ ಮಗುಚಿ.
  11. ಪುಡಿ ಮಾಡಿದ ಮಸಾಲೆಯನ್ನು ಸೇರಿಸಿ ಮಗುಚಿ.  ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...