ಗುರುವಾರ, ಮೇ 30, 2019

Ragi dose recipe in Kannada | ರಾಗಿ ದೋಸೆ ಮಾಡುವ ವಿಧಾನ

Ragi dose recipe in Kannada

Ragi dose recipe in Kannada | ರಾಗಿ ದೋಸೆ ಮಾಡುವ ವಿಧಾನ

ರಾಗಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 3/4 ಕಪ್ ರಾಗಿ 
  2. 1/4 ಕಪ್ ದೋಸೆ ಅಕ್ಕಿ
  3. 1/4 ಕಪ್ ಉದ್ದಿನಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. 1/4 - 1/2 ಕಪ್ ತೆಳು ಅವಲಕ್ಕಿ
  6. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  7. ಉಪ್ಪು ರುಚಿಗೆ ತಕ್ಕಷ್ಟು.

ರಾಗಿ ದೋಸೆ ಮಾಡುವ ವಿಧಾನ:

  1. ರಾಗಿ, ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 4-5 ಗಂಟೆಗಳ ಕಾಲ ನೆನೆಯಲು ಬಿಡಿ. ರಾಗಿ ಹಿಟ್ಟು ಬಳಸುತ್ತೀರಾದಲ್ಲಿ ಅಕ್ಕಿ ಮತ್ತು ಉದ್ದಿನಬೇಳೆ ನೆನೆಸಿ, ಅರೆದ ಮೇಲೆ ಸೇರಿಸಬಹುದು. 
  2. ನೆನೆಸಿದ ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  3. ಅವಲಕ್ಕಿ ತೊಳೆದು ಸೇರಿಸಿ. ಗಟ್ಟಿ ಅವಲಕ್ಕಿ ಆದಲ್ಲಿ, ೧೦ ನಿಮಿಷ ನೆನೆಸಿ ಸೇರಿಸಿ. 
  4. ಎಲ್ಲವನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  5. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  6. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  7. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ದೋಸೆ ಮಾಡಿ.
  8. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  9. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಸೋಮವಾರ, ಮೇ 27, 2019

Custard powder pudding recipe in Kannada | ಕಸ್ಟರ್ಡ್ ಪೌಡರ್ ಪುಡ್ಡಿಂಗ್ ಮಾಡುವ ವಿಧಾನ

Custard powder pudding recipe in Kannada

Custard powder pudding recipe in Kannada | ಕಸ್ಟರ್ಡ್ ಪೌಡರ್ ಪುಡ್ಡಿಂಗ್ ಮಾಡುವ ವಿಧಾನ

ಕಸ್ಟರ್ಡ್ ಪೌಡರ್ ಪುಡ್ಡಿಂಗ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಟೇಬಲ್ ಚಮಚ ಕಸ್ಟರ್ಡ್ ಪೌಡರ್
  2. 3 ಟೇಬಲ್ ಚಮಚ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  3. 1 ಕಪ್ ಹಾಲು 
  4. 1 ಚಮಚ ಬೆಣ್ಣೆ
  5. 1 ಕಪ್ ಹಣ್ಣು ಬಡಿಸಲು

ಕಸ್ಟರ್ಡ್ ಪೌಡರ್ ಪುಡ್ಡಿಂಗ್ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಎರಡು ಟೇಬಲ್ ಚಮಚ ಕಸ್ಟರ್ಡ್ ಪೌಡರ್ ತೆಗೆದುಕೊಳ್ಳಿ.
  2. ಅದಕ್ಕೆ ಅರ್ಧ ಕಪ್ ಹಾಲು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. 
  3. ಇನ್ನೊಂದು ಪಾತ್ರೆಯಲ್ಲಿ ಅರ್ಧ ಕಪ್ ಹಾಲು ತೆಗೆದುಕೊಳ್ಳಿ. 
  4. ಅದಕ್ಕೆ ಮೂರು ಟೇಬಲ್ ಚಮಚ ಸಕ್ಕರೆ ಹಾಕಿ ಕುದಿಯಲು ಇಡೀ. 
  5. ಹಾಲು ಸ್ವಲ್ಪ ಬಿಸಿ ಆದ ಮೇಲೆ ಕಲಸಿಟ್ಟುಕೊಂಡ ಹಾಲು ಮತ್ತು ಕಸ್ಟರ್ಡ್ ಪೌಡರ್ ನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ, ಗಂಟಿಲ್ಲದಂತೆ ಕಲಸಿಕೊಳ್ಳಿ. 
  6. ಕುದಿಸಿದ ನಂತ್ರ, ಉರಿ ಕಡಿಮೆ ಮಾಡಿ, ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ. 
  7. ಸ್ವಲ್ಪ ದಪ್ಪ ಆದಮೇಲೆ ಸ್ಟವ್ ಆಫ್ ಮಾಡಿ. 
  8. ಒಂದು ಚಮಚ ಬೆಣ್ಣೆ ಹಾಕಿ ಕಲಸಿ. 
  9. ಬಿಸಿ ಆರಿದ ಮೇಲೆ ಒಂದು 15 ನಿಮಿಷ ಫ್ರಿಡ್ಜ್ ನಲ್ಲಿಡಿ. 
  10. ತಣ್ಣಗಾದ ಮೇಲೆ, ಕತ್ತರಿಸಿದ ಹಣ್ಣುಗಳಿಂದ ಅಲಂಕರಿಸಿ ಸವಿದು ಆನಂದಿಸಿ. 

ಗುರುವಾರ, ಮೇ 23, 2019

Alugadde masale palya recipe in Kannada | ಆಲೂಗಡ್ಡೆ ಮಸಾಲೆ ಪಲ್ಯ ಮಾಡುವ ವಿಧಾನ

Alugadde masale palya recipe in Kannada

Alugadde masale palya recipe in Kannada | ಆಲೂಗಡ್ಡೆ ಮಸಾಲೆ ಪಲ್ಯ ಮಾಡುವ ವಿಧಾನ 

ಆಲೂಗಡ್ಡೆ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 4  ಮಧ್ಯಮ ಗಾತ್ರದ ಆಲೂಗಡ್ಡೆ
  2. 1 ದೊಡ್ಡ ಗಾತ್ರದ ಈರುಳ್ಳಿ
  3. 1 ಟೊಮೇಟೊ
  4. 1/2 ಚಮಚ ಸಾಸಿವೆ 
  5. 1/2 ಚಮಚ ಜೀರಿಗೆ
  6. 1 ಒಣಮೆಣಸು
  7. 1/4 ಟೀಸ್ಪೂನ್ ಅರಿಶಿನ ಪುಡಿ
  8. ಒಂದು ದೊಡ್ಡ ಚಿಟಿಕೆ ಇಂಗು
  9. 5 - 6 ಕರಿಬೇವಿನ ಎಲೆ
  10. 1 ಟೀಸ್ಪೂನ್ ಕಿಚನ್ ಕಿಂಗ್ ಮಸಾಲಾ (ಅಥವಾ 1/2 ಟೀಸ್ಪೂನ್ ಗರಂ ಮಸಾಲಾ)
  11. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  12. ನಿಮ್ಮ ರುಚಿ ಪ್ರಕಾರ ಉಪ್ಪು 
  13. 2 ಟೇಬಲ್ ಚಮಚ ಅಡುಗೆ ಎಣ್ಣೆ

 ಆಲೂಗಡ್ಡೆ ಮಸಾಲೆ ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಆಲೂಗಡ್ಡೆ, ಟೊಮೇಟೊ ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ. 
  2. ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿಕೊಳ್ಳಿ. 
  3. ಸಾಸಿವೆ ಸಿಡಿದ ಮೇಲೆ ಚೂರು ಮಾಡಿದ ಒಣಮೆಣಸು ಸೇರಿಸಿ. 
  4. ಅದಕ್ಕೆ ಕತ್ತರಿಸಿಟ್ಟ ಈರುಳ್ಳಿ ಹಾಕಿ. 
  5. ಕರಿಬೇವು, ಅರಿಶಿನ ಮತ್ತು ಇಂಗು ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  6.  ನಂತರ ಕತ್ತರಿಸಿದ ಟೊಮೇಟೊ ಹಾಕಿ. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ.
  7. ಆಮೇಲೆ ಕತ್ತರಿಸಿದ ಆಲೂಗಡ್ಡೆ ಹಾಕಿ, ಒಮ್ಮೆ ಮಗುಚಿ.
  8. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  9. ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಆಲೂಗಡ್ಡೆ ಮೆತ್ತಗಾಗುವವರೆಗೆ ಬೇಯಿಸಿ.
  10. ಕೊನೆಯಲ್ಲಿ ಕಿಚನ್ ಕಿಂಗ್ ಮಸಾಲಾ (ಅಥವಾ ಗರಂ ಮಸಾಲಾ) ಮತ್ತು ಅಚ್ಚಖಾರದ ಪುಡಿ ಸೇರಿಸಿ ಮಗುಚಿ. 
  11. ಸ್ಟವ್ ಆಫ್ ಮಾಡಿ ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.
Related Posts Plugin for WordPress, Blogger...