ಮಂಗಳವಾರ, ಡಿಸೆಂಬರ್ 25, 2018

Balehannina rasayana recipe in kannada | ಬಾಳೆ ಹಣ್ಣಿನ ರಸಾಯನ ಮಾಡುವ ವಿಧಾನ

Balehannina rasayana recipe in kannada

Balehannina rasayana recipe in kannada | ಬಾಳೆ ಹಣ್ಣಿನ ರಸಾಯನ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 10 ಸಣ್ಣ ಬಾಳೆಹಣ್ಣು
  2. 2 ಕಪ್ ತೆಂಗಿನತುರಿ ಅಥವಾ 1 ಕಪ್ ಗಟ್ಟಿ ತೆಂಗಿನಕಾಯಿ ಹಾಲು
  3. 1 ಕಪ್ ನೀರು (ಕಾಯಿಹಾಲು ತೆಗೆಯಲು)
  4. 1/2 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  5. ಚಿಟಿಕೆ ಉಪ್ಪು.
  6. ದೊಡ್ಡ ಚಿಟಿಕೆ ಏಲಕ್ಕಿ

ಬಾಳೆ ಹಣ್ಣಿನ ರಸಾಯನ ಮಾಡುವ ವಿಧಾನ:

  1. ಬಾಳೆ ಹಣ್ಣು ಸಿಪ್ಪೆ ತೆಗೆದು, ಸಣ್ಣದಾಗಿ ಕತ್ತರಿಸಿ.
  2. ಆಮೇಲೆ ಪುಡಿ ಮಾಡಿದ ಬೆಲ್ಲ ಸೇರಿಸಿ. 
  3. ಚಿಟಿಕೆ ಉಪ್ಪು ಹಾಕಿ. ಚೆನ್ನಾಗಿ ಕಲಸಿ.
  4. ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  5. ಅರೆದ ಮಿಶ್ರಣವನ್ನು ಬಟ್ಟೆಯಲ್ಲಿ ಹಿಂಡಿ, ಕಾಯಿ ಹಾಲನ್ನು ತೆಗೆದು, ಬಾಳೆಹಣ್ಣು ಮತ್ತು ಬೆಲ್ಲ ಇರುವ ಪಾತ್ರೆಗೆ ಹಾಕಿ. 
  6. ಏಲಕ್ಕಿ ಪುಡಿ ಹಾಕಿ ಕಲಸಿ.
  7. ನೀರು ದೋಸೆ, ತೆಳು ಅವಲಕ್ಕಿ ಅಥವಾ ಒತ್ತು ಶಾವಿಗೆಯೊಂದಿಗೆ ಬಡಿಸಿ.

ಬುಧವಾರ, ಡಿಸೆಂಬರ್ 19, 2018

Menthe soppina pulav recipe in Kannada | ಮೆಂತೆಸೊಪ್ಪಿನ ಪಲಾವ್ ಮಾಡುವ ವಿಧಾನ

Menthe soppina pulav recipe in Kannada

Menthe soppina pulav recipe in Kannada | ಮೆಂತೆಸೊಪ್ಪಿನ ಪಲಾವ್ ಮಾಡುವ ವಿಧಾನ

ಮೆಂತೆಸೊಪ್ಪಿನ ಪಲಾವ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. 1 ಸಣ್ಣ ಕಟ್ಟು ಅಥವಾ ಒಂದು ಕಪ್ ಮೆಂತೆ ಸೊಪ್ಪು
  3. 1/2 ಕಪ್ ಹಸಿ ಬಟಾಣಿ
  4. 1 ದೊಡ್ಡ ಈರುಳ್ಳಿ
  5. 1 ದೊಡ್ಡ ಟೊಮ್ಯಾಟೋ
  6. 1/2 ಟೀಸ್ಪೂನ್ ಜೀರಿಗೆ
  7. 1 ಪುಲಾವ್ ಎಲೆ
  8. 1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
  9. 2 ಟೇಬಲ್ ಚಮಚ ಅಡುಗೆ ಎಣ್ಣೆ 
  10. 1 ಟೀಸ್ಪೂನ್ ತುಪ್ಪ
  11. 2 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
  12. 2 ಟೀಸ್ಪೂನ್ ಉಪ್ಪು (ನಿಮ್ಮ ರುಚಿಗೆ ತಕ್ಕಷ್ಟು)

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನತುರಿ
  2. 2 ಸೆಮೀ ಉದ್ದದ ಶುಂಠಿ
  3. 4 ಎಸಳು ಬೆಳ್ಳುಳ್ಳಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಸೋಂಪು / 1/2 ಟೀಸ್ಪೂನ್ ಜೀರಿಗೆ
  6. 1-2 ಹಸಿರುಮೆಣಸಿನಕಾಯಿ
  7. 1/2 ಬೆರಳುದ್ದ ಚಕ್ಕೆ
  8. 7 - 8 ಲವಂಗ
  9. 1 ಏಲಕ್ಕಿ
  10. ಒಂದು ಹಿಡಿ ಕೊತ್ತಂಬರಿ ಸೊಪ್ಪು
  11. ಒಂದು ಹಿಡಿ ಪುದೀನಾ ಸೊಪ್ಪು
  12. 1/2 ಕಪ್ ನೀರು ಅರೆಯಲು

ಮೆಂತೆಸೊಪ್ಪಿನ ಪಲಾವ್ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು ನೆನೆಸಿಟ್ಟುಕೊಳ್ಳಿ. ಟೊಮ್ಯಾಟೋ, ಮೆಂತೆ ಸೊಪ್ಪು ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟು ಕೊಳ್ಳಿ. 
  2. ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದು ಕೊಳ್ಳಿ.
  3. ಈಗ ಒಂದು ಕುಕ್ಕರ್ ತೆಗೆದುಕೊಂಡು ಎಣ್ಣೆ ಹಾಕಿ. 1/2 ಟೀಸ್ಪೂನ್ ಜೀರಿಗೆ ಮತ್ತು ಪಲಾವ್ ಎಲೆ ಹಾಕಿ ಹುರಿಯಿರಿ. 
  4. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ.
  5. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ 
  6. ಅರಿಶಿನ ಹಾಕಿ ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  7. ಒಂದೆರಡು ನಿಮಿಷದ ನಂತರ ಹಸಿಬಟಾಣಿ ಮತ್ತು ಮೆಂತೆ ಸೊಪ್ಪು ಹಾಕಿ ಹುರಿಯಿರಿ.
  8. ಆಮೇಲೆ ಅರೆದ ಮಸಾಲೆ ಹಾಕಿ ಪುನಃ 5 ನಿಮಿಷಗಳ ಕಾಲ ಆಗಾಗ್ಯೆ ಮಗುಚುತ್ತಾ ಹುರಿಯಿರಿ.
  9. ನೆನೆಸಿಟ್ಟ 1 ಕಪ್ ಅಕ್ಕಿ ಹಾಕಿ. ಒಮ್ಮೆ ಚೆನ್ನಾಗಿ ಮಗುಚಿ. 2 ಕಪ್ ನೀರು ಸೇರಿಸಿ (ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ).
  10. ಉಪ್ಪು ಹಾಕಿ, ಪುನಃ ಒಮ್ಮೆ ಕಲಸಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
  11. ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ. ಮೊಸರು ಬಜ್ಜಿ ಯೊಂದಿಗೆ, ಇಲ್ಲವೇ ಹಾಗೆ ಬಿಸಿ ಬಿಸಿಯಾಗಿರುವಾಗ ಬಡಿಸಿ.

ಸೋಮವಾರ, ಡಿಸೆಂಬರ್ 17, 2018

Shunti saaru recipe in Kannada | ಶುಂಠಿ ಸಾರು ಮಾಡುವ ವಿಧಾನ

Shunti saaru recipe in Kannada

Shunti saaru recipe in Kannada | ಶುಂಠಿ ಸಾರು ಮಾಡುವ ವಿಧಾನ 

ಶುಂಠಿ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/2 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ
  3. 1 ಒಣಮೆಣಸಿನಕಾಯಿ
  4.  5 - 6 ಕರಿಬೇವಿನ ಎಲೆ
  5. 4 ಟೀಸ್ಪೂನ್ ಅಡುಗೆ ಎಣ್ಣೆ ಅಥವಾ ತುಪ್ಪ 
  6. 1 ದೊಡ್ಡ ಟೊಮೆಟೋ 
  7. ಅರಿಶಿನ ಪುಡಿ ಒಂದು ದೊಡ್ಡ ಚಿಟಿಕೆ 
  8. 1 ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  9. 1 ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ಅನುಗುಣವಾಗಿ)
  10. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  11. 1 ಟೀ ಸ್ಪೂನ್ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು

ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1 ಟೀಸ್ಪೂನ್  ತೊಗರಿಬೇಳೆ
  2. 1 ಟೀಸ್ಪೂನ್  ಕಡ್ಲೆಬೇಳೆ
  3. 1/2 ಟೀಸ್ಪೂನ್ ಜೀರಿಗೆ
  4. 1/2 ಟೀಸ್ಪೂನ್ ಕಾಳು ಮೆಣಸು
  5. 1 - 2 ಒಣ ಮೆಣಸಿನಕಾಯಿ
  6. 1 ಟೇಬಲ್ ಚಮಚ ಶುಂಠಿ


ಶುಂಠಿ ಸಾರು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ತೊಗರಿಬೇಳೆ, ಕಡ್ಲೆಬೇಳೆ, ಜೀರಿಗೆ, ಕಾಳುಮೆಣಸು ಮತ್ತು ಒಣಮೆಣಸಿನಕಾಯಿ ಹಾಕಿ ಹುರಿಯಿರಿ. 
  2. ಬೇಳೆಗಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ, ಕತ್ತರಿಸಿದ ಶುಂಠಿ ಹಾಕಿ ಹುರಿಯಿರಿ. ಸ್ಟವ್ ಆಫ್ ಮಾಡಿ
  3. ಬಿಸಿ ಆರಿದ ಮೇಲೆ, ಮಿಕ್ಸಿಯಲ್ಲಿ ನುಣ್ಣನೆ ಪುಡಿ ಮಾಡಿಟ್ಟುಕೊಳ್ಳಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ. 
  5. ಸಾಸಿವೆ ಸಿಡಿದ ಕೂಡಲೇ ಒಣಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಸೇರಿಸಿ. 
  6. ನಂತ್ರ ಅದಕ್ಕೆ ಸಣ್ಣಗೆ ಕತ್ತರಿಸಿದ ಟೊಮೇಟೊ ಮತ್ತು ಅರಿಶಿನ ಪುಡಿ ಹಾಕಿ. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  7. ಅದಕ್ಕೆ ಹುಣಸೆರಸ, ಉಪ್ಪು ಮತ್ತು ಬೆಲ್ಲ ಸೇರಿಸಿ. 
  8. ಸ್ವಲ್ಪ ನೀರು ಹಾಕಿ ಕುದಿಸಿ
  9. ಪುಡಿಮಾಡಿದ ಮಸಾಲೆ ಸೇರಿಸಿ. 
  10. ಅಗತ್ಯವಿದ್ದಷ್ಟು ನೀರು (ಸುಮಾರು ಎರಡು ದೊಡ್ಡ ಲೋಟ) ಸೇರಿಸಿ. 
  11. ಕುದಿಸಿ, ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  12. ಬಿಸಿಯಾದ ಅನ್ನದೊಂದಿಗೆ ಬಡಿಸಿ. ಅಥವಾ ಸೂಪ್ ತರಹ ಕುಡಿಯಲು ಕೊಡಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...