Balehannina rasayana recipe in kannada | ಬಾಳೆ ಹಣ್ಣಿನ ರಸಾಯನ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 10 ಸಣ್ಣ ಬಾಳೆಹಣ್ಣು
- 2 ಕಪ್ ತೆಂಗಿನತುರಿ ಅಥವಾ 1 ಕಪ್ ಗಟ್ಟಿ ತೆಂಗಿನಕಾಯಿ ಹಾಲು
- 1 ಕಪ್ ನೀರು (ಕಾಯಿಹಾಲು ತೆಗೆಯಲು)
- 1/2 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- ಚಿಟಿಕೆ ಉಪ್ಪು.
- ದೊಡ್ಡ ಚಿಟಿಕೆ ಏಲಕ್ಕಿ
ಬಾಳೆ ಹಣ್ಣಿನ ರಸಾಯನ ಮಾಡುವ ವಿಧಾನ:
- ಬಾಳೆ ಹಣ್ಣು ಸಿಪ್ಪೆ ತೆಗೆದು, ಸಣ್ಣದಾಗಿ ಕತ್ತರಿಸಿ.
- ಆಮೇಲೆ ಪುಡಿ ಮಾಡಿದ ಬೆಲ್ಲ ಸೇರಿಸಿ.
- ಚಿಟಿಕೆ ಉಪ್ಪು ಹಾಕಿ. ಚೆನ್ನಾಗಿ ಕಲಸಿ.
- ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ.
- ಅರೆದ ಮಿಶ್ರಣವನ್ನು ಬಟ್ಟೆಯಲ್ಲಿ ಹಿಂಡಿ, ಕಾಯಿ ಹಾಲನ್ನು ತೆಗೆದು, ಬಾಳೆಹಣ್ಣು ಮತ್ತು ಬೆಲ್ಲ ಇರುವ ಪಾತ್ರೆಗೆ ಹಾಕಿ.
- ಏಲಕ್ಕಿ ಪುಡಿ ಹಾಕಿ ಕಲಸಿ.
- ನೀರು ದೋಸೆ, ತೆಳು ಅವಲಕ್ಕಿ ಅಥವಾ ಒತ್ತು ಶಾವಿಗೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ