Menthe soppina pulav recipe in Kannada | ಮೆಂತೆಸೊಪ್ಪಿನ ಪಲಾವ್ ಮಾಡುವ ವಿಧಾನ
ಮೆಂತೆಸೊಪ್ಪಿನ ಪಲಾವ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ (ಸೋನಾ ಮಸೂರಿ)
- 1 ಸಣ್ಣ ಕಟ್ಟು ಅಥವಾ ಒಂದು ಕಪ್ ಮೆಂತೆ ಸೊಪ್ಪು
- 1/2 ಕಪ್ ಹಸಿ ಬಟಾಣಿ
- 1 ದೊಡ್ಡ ಈರುಳ್ಳಿ
- 1 ದೊಡ್ಡ ಟೊಮ್ಯಾಟೋ
- 1/2 ಟೀಸ್ಪೂನ್ ಜೀರಿಗೆ
- 1 ಪುಲಾವ್ ಎಲೆ
- 1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
- 2 ಟೇಬಲ್ ಚಮಚ ಅಡುಗೆ ಎಣ್ಣೆ
- 1 ಟೀಸ್ಪೂನ್ ತುಪ್ಪ
- 2 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
- 2 ಟೀಸ್ಪೂನ್ ಉಪ್ಪು (ನಿಮ್ಮ ರುಚಿಗೆ ತಕ್ಕಷ್ಟು)
ಮಸಾಲೆಗೆ ಬೇಕಾಗುವ ಪದಾರ್ಥಗಳು:
- 1/2 ಕಪ್ ತೆಂಗಿನತುರಿ
- 2 ಸೆಮೀ ಉದ್ದದ ಶುಂಠಿ
- 4 ಎಸಳು ಬೆಳ್ಳುಳ್ಳಿ
- 1 ಟೀಸ್ಪೂನ್ ಕೊತ್ತಂಬರಿ ಬೀಜ
- 1/2 ಟೀಸ್ಪೂನ್ ಸೋಂಪು / 1/2 ಟೀಸ್ಪೂನ್ ಜೀರಿಗೆ
- 1-2 ಹಸಿರುಮೆಣಸಿನಕಾಯಿ
- 1/2 ಬೆರಳುದ್ದ ಚಕ್ಕೆ
- 7 - 8 ಲವಂಗ
- 1 ಏಲಕ್ಕಿ
- ಒಂದು ಹಿಡಿ ಕೊತ್ತಂಬರಿ ಸೊಪ್ಪು
- ಒಂದು ಹಿಡಿ ಪುದೀನಾ ಸೊಪ್ಪು
- 1/2 ಕಪ್ ನೀರು ಅರೆಯಲು
ಮೆಂತೆಸೊಪ್ಪಿನ ಪಲಾವ್ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು ನೆನೆಸಿಟ್ಟುಕೊಳ್ಳಿ. ಟೊಮ್ಯಾಟೋ, ಮೆಂತೆ ಸೊಪ್ಪು ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟು ಕೊಳ್ಳಿ.
- ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದು ಕೊಳ್ಳಿ.
- ಈಗ ಒಂದು ಕುಕ್ಕರ್ ತೆಗೆದುಕೊಂಡು ಎಣ್ಣೆ ಹಾಕಿ. 1/2 ಟೀಸ್ಪೂನ್ ಜೀರಿಗೆ ಮತ್ತು ಪಲಾವ್ ಎಲೆ ಹಾಕಿ ಹುರಿಯಿರಿ.
- ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ.
- ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ
- ಅರಿಶಿನ ಹಾಕಿ ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ.
- ಒಂದೆರಡು ನಿಮಿಷದ ನಂತರ ಹಸಿಬಟಾಣಿ ಮತ್ತು ಮೆಂತೆ ಸೊಪ್ಪು ಹಾಕಿ ಹುರಿಯಿರಿ.
- ಆಮೇಲೆ ಅರೆದ ಮಸಾಲೆ ಹಾಕಿ ಪುನಃ 5 ನಿಮಿಷಗಳ ಕಾಲ ಆಗಾಗ್ಯೆ ಮಗುಚುತ್ತಾ ಹುರಿಯಿರಿ.
- ನೆನೆಸಿಟ್ಟ 1 ಕಪ್ ಅಕ್ಕಿ ಹಾಕಿ. ಒಮ್ಮೆ ಚೆನ್ನಾಗಿ ಮಗುಚಿ. 2 ಕಪ್ ನೀರು ಸೇರಿಸಿ (ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ).
- ಉಪ್ಪು ಹಾಕಿ, ಪುನಃ ಒಮ್ಮೆ ಕಲಸಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
- ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ. ಮೊಸರು ಬಜ್ಜಿ ಯೊಂದಿಗೆ, ಇಲ್ಲವೇ ಹಾಗೆ ಬಿಸಿ ಬಿಸಿಯಾಗಿರುವಾಗ ಬಡಿಸಿ.
tumba cennagide
ಪ್ರತ್ಯುತ್ತರಅಳಿಸಿ