ಮಂಗಳವಾರ, ಜುಲೈ 31, 2018

Eerulli thambli recipe in kannada | ಈರುಳ್ಳಿ ತಂಬ್ಳಿ ಮಾಡುವ ವಿಧಾನ

Eerulli thambli recipe in kannada

Eerulli thambli recipe in kannada | ಈರುಳ್ಳಿ ತಂಬ್ಳಿ ಮಾಡುವ ವಿಧಾನ

ಈರುಳ್ಳಿ ತಂಬ್ಳಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಮಧ್ಯಮ ಗಾತ್ರದ ಈರುಳ್ಳಿ
  2. 1/2 ಕಪ್ ತೆಂಗಿನತುರಿ
  3. 1/2 ಕಪ್ ಮೊಸರು ಅಥವಾ 3/4 ಕಪ್ ಮಜ್ಜಿಗೆ
  4. 1 ಒಣ ಮೆಣಸಿನಕಾಯಿ
  5. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
  2. 1/2 ಒಣ ಮೆಣಸಿನಕಾಯಿ
  3. 1/2 ಟೀಸ್ಪೂನ್ ಸಾಸಿವೆ
  4. 3 - 4 ಕರಿಬೇವಿನ ಎಲೆ

ಈರುಳ್ಳಿ ತಂಬ್ಳಿ ಮಾಡುವ ವಿಧಾನ:

  1. ಈರುಳ್ಳಿಯನ್ನು ಸಿಪ್ಪೆ ತೆಗೆದು ಕತ್ತರಿಸಿ.
  2. ಕತ್ತರಿಸಿದ ಈರುಳ್ಳಿ, ತೆಂಗಿನತುರಿ ಮತ್ತು ಒಣಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.  
  3. ಒಂದು ಪಾತ್ರೆಗೆ ಬಗ್ಗಿಸಿ.
  4. ಒಂದು ಚಮಚ ಅಥವಾ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  5. ಸುಮಾರು ಅರ್ಧ ಕಪ್ ನಷ್ಟು ನೀರು ಸೇರಿಸಿ. 
  6. ಮೊಸರು ಅಥವಾ ಮಜ್ಜಿಗೆ ಸೇರಿಸಿ. 
  7. ಎಣ್ಣೆ, ಒಣಮೆಣಸು, ಕರಿಬೇವು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಗುರುವಾರ, ಜುಲೈ 26, 2018

Kadle kalu saru recipe in Kannada | ಕಡ್ಲೆಕಾಳು ಸಾರು ಮಾಡುವ ವಿಧಾನ

Kadle kalu saru recipe in Kannada

Kadle kalu saru recipe in Kannada | ಕಡ್ಲೆಕಾಳು ಸಾರು ಮಾಡುವ ವಿಧಾನ 

ಮುಖ್ಯ ಪದಾರ್ಥಗಳು: (ಅಳತೆ ಕಪ್ = 240ml) 

  1. 1/2 ಕಪ್ ಕಡ್ಲೆಕಾಳು
  2. 1 ಆಲೂಗಡ್ಡೆ
  3. 2 ಸಣ್ಣ ಬದನೆಕಾಯಿ 
  4. 1/2 ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು 
  5. ಚಿಟಿಕೆ ಅರಿಶಿನ ಪುಡಿ
  6. ನಿಮ್ಮ ರುಚಿ ಪ್ರಕಾರ ಉಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

  1. 2 - 4 ಒಣ ಮೆಣಸಿನಕಾಯಿ
  2. 2  ಟೀಸ್ಪೂನ್ ಕೊತ್ತಂಬರಿ ಬೀಜ
  3. 1 ಟೀಸ್ಪೂನ್ ಜೀರಿಗೆ 
  4. 1/4 ಟೀಸ್ಪೂನ್ ಕರಿಮೆಣಸು
  5. 1 ಕತ್ತರಿಸಿದ ಈರುಳ್ಳಿ
  6. 5 ಬೇಳೆ ಬೆಳ್ಳುಳ್ಳಿ
  7. 1 ಕತ್ತರಿಸಿದ ಟೊಮೆಟೊ
  8. 1/2 ಕಪ್ ತೆಂಗಿನ ತುರಿ
  9. ನಿಮ್ಮ ರುಚಿ ಪ್ರಕಾರ ಉಪ್ಪು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: 

  1. 1 ಕೆಂಪು ಮೆಣಸಿನಕಾಯಿ 
  2. 5 - 6 ಕರಿಬೇವಿನ ಎಲೆ
  3. 1/2 ಚಮಚ ಸಾಸಿವೆ 
  4. 2 ಟೀಸ್ಪೂನ್ ಅಡುಗೆ ಎಣ್ಣೆ 

ಕಡ್ಲೆಕಾಳು ಸಾರು ಮಾಡುವ ವಿಧಾನ:

  1. ಕಡ್ಲೆಕಾಳನ್ನು ತೊಳೆದು, ಒಂದು ದಿನ ನೆನೆಸಿ, ಮೊಳಕೆ ಕಟ್ಟಿಸಿಕೊಳ್ಳಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. 
  2. ಅದಕ್ಕೆ ಕತ್ತರಿಸಿದ ಆಲೂಗಡ್ಡೆ, ಬದನೆಕಾಯಿ, ಉಪ್ಪು ಮತ್ತು ಹುಣಿಸೆರಸ ಸೇರಿಸಿ ತರಕಾರಿ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಕರಿ ಮೆಣಸನ್ನು ಹುರಿಯಿರಿ. 
  4. ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಿರಿ.
  5. ನಂತರ ಕತ್ತರಿಸಿದ ಟೊಮೇಟೊ ಸೇರಿಸಿ ಹುರಿಯಿರಿ.
  6. ಕೊನೆಯಲ್ಲಿ ತೆಂಗಿನ ತುರಿ ಸೇರಿಸಿ ಹುರಿದು ಸ್ಟವ್ ಆಫ್ ಮಾಡಿ. 
  7. ಮಿಕ್ಸಿಯಲ್ಲಿ ಹುರಿದ ಎಲ್ಲ ಪದಾರ್ಥಗಳನ್ನು ಹಾಕಿ ನುಣ್ಣನೆ ಅರೆದುಕೊಳ್ಳಿ. 
  8. ಅರೆದ ಮಸಾಲೆಯನ್ನು ಬೇಯಿಸಿದ ಕಡ್ಲೆಕಾಳು ಮತ್ತು ತರಕಾರಿಗೆ ಹಾಕಿ, ಬೇಕಾದಷ್ಟು ನೀರು ಸೇರಿಸಿ, ಉಪ್ಪು ಹಾಕಿ ಕುದಿಸಿ. 
  9. ಎಣ್ಣೆ, ಒಣಮೆಣಸು, ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ. 

ಗುರುವಾರ, ಜುಲೈ 19, 2018

Bendekai gojju recipe in Kannada | ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನ

Bendekai gojju recipe in Kannada

Bendekai gojju recipe in Kannada | ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನ 

ಬೆಂಡೆಕಾಯಿ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 kg ಬೆಂಡೆಕಾಯಿ
  2. 1 ಕತ್ತರಿಸಿದ ಈರುಳ್ಳಿ 
  3.  1/2 ಟೀಸ್ಪೂನ್ ಜೀರಿಗೆ
  4.  1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
  5.  1/2 ಟೀಸ್ಪೂನ್ ಗರಂ ಮಸಾಲಾ
  6.  1 ಟೀಸ್ಪೂನ್ ಕೊತ್ತಂಬರಿ ಅಥವಾ ಧನಿಯಾ ಪುಡಿ 
  7. 1/4 ಟೀಸ್ಪೂನ್ ಅರಿಶಿನ ಪುಡಿ 
  8. 2 ಟೇಬಲ್ ಚಮಚ ಮೊಸರು
  9. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. 1 ಟೇಬಲ್ ಚಮಚ ಕಸೂರಿ ಮೇಥಿ ಅಥವಾ ಒಣಗಿದ ಮೆಂತೆ ಸೊಪ್ಪು  (ಬೇಕಾದಲ್ಲಿ) 
  11. 1 ಟೇಬಲ್ ಚಮಚ ಅಡುಗೆ ಎಣ್ಣೆ 
  12. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 2 ಕತ್ತರಿಸಿದ ಟೊಮೇಟೊ
  2. 2 - 4 ಎಸಳು ಬೆಳ್ಳುಳ್ಳಿ
  3. 1cm ಉದ್ದದ ಶುಂಠಿ

ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನ:

  1. ಟೊಮೇಟೊ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಅರೆದಿಟ್ಟುಕೊಳ್ಳಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕತ್ತರಿಸಿದ ಬೆಂಡೆಕಾಯಿ ಹಾಕಿ ಹುರಿದಿಟ್ಟುಕೊಳ್ಳಿ. 
  3. ನಂತ್ರ ಅದೇ ಬಾಣಲೆಯಲ್ಲಿ ಎಣ್ಣೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ. 
  4. ಜೀರಿಗೆ ಸಿಡಿದ ಮೇಲೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. 
  5. ಆಮೇಲೆ ಅರೆದ ಟೊಮೇಟೊ+ಶುಂಠಿ+ಬೆಳ್ಳುಳ್ಳಿ ಪೇಸ್ಟ್ ನ್ನು ಹಾಕಿ ಬಾಡಿಸಿ. 
  6. ಅದಕ್ಕೆ ಉಪ್ಪು, ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲಾ, ಕೊತ್ತಂಬರಿ ಅಥವಾ ಧನಿಯಾ ಪುಡಿ ಮತ್ತು ಅರಿಶಿನ ಪುಡಿ ಹಾಕಿ ಮಗುಚಿ.
  7. ಎರಡು ಟೇಬಲ್ ಚಮಚದಷ್ಟು ಮೊಸರು ಹಾಕಿ ಒಂದೆರಡು ನಿಮಿಷ ಬೇಯಿಸಿ. 
  8. ಆಮೇಲೆ ಹುರಿದಿಟ್ಟು ಕೊಂಡ ಬೆಂಡೆಕಾಯಿಯನ್ನು ಹಾಕಿ.
  9. 1/2 ಕಪ್ ನೀರು ಹಾಕಿ ಒಂದೈದು ನಿಮಿಷ ಬೇಯಿಸಿ. 
  10. ಕೊತ್ತಂಬರಿ ಸೊಪ್ಪು ಮತ್ತು ಕಸೂರಿ ಮೇಥಿ ಹಾಕಿ ಒಂದೆರಡು ನಿಮಿಷ ಕುದಿಸಿ.
  11. ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...