ಸೋಮವಾರ, ಏಪ್ರಿಲ್ 30, 2018

Mavina hannina sasive recipe in kannada | ಮಾವಿನ ಹಣ್ಣಿನ ಸಾಸಿವೆ ಮಾಡುವ ವಿಧಾನ

Mavina hannina sasive recipe in kannada

Mavina hannina sasive recipe in kannada | ಮಾವಿನ ಹಣ್ಣಿನ ಸಾಸಿವೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 4 - 5 ಮಾವಿನಹಣ್ಣು (ಗಾತ್ರ ಅವಲಂಬಿಸಿದೆ)
  2. 1/4 - 1/2 ಕಪ್ ಬೆಲ್ಲ (ಮಾವಿನ ಹುಳಿ ಅವಲಂಬಿಸಿ)
  3. ಉಪ್ಪು ರುಚಿಗೆ ತಕ್ಕಷ್ಟು.

ಅರೆಯಲು ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 2 - 4 ಒಣಮೆಣಸಿನಕಾಯಿ
  3. 1/2 ಕಪ್ ತೆಂಗಿನತುರಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 2 ಟೀಸ್ಪೂನ್ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ

ಮಾವಿನ ಹಣ್ಣಿನ ಸಾಸಿವೆ ಮಾಡುವ ವಿಧಾನ:

  1. ಮಾವಿನಹಣ್ಣು ತೊಳೆದು, ಸಿಪ್ಪೆ ಸುಲಿಯಿರಿ. 
  2. ಆಮೇಲೆ ಕಿವುಚಿ, ರಸ ತೆಗೆದಿಟ್ಟುಕೊಳ್ಳಿ. ಗೊರಟು ಬೇಕಾದರೆ ಹಾಕಬಹುದು. 
  3. ನಂತ್ರ ಒಂದು ಪಾತ್ರೆಯಲ್ಲಿ ಬೆಲ್ಲ ಪುಡಿ ಮಾಡಿ, ಅದಕ್ಕೆ ತೆಗೆದಿಟ್ಟ ಮಾವಿನ ರಸ ಹಾಕಿ. 
  4. ಸಾಸಿವೆ, ಒಣಮೆಣಸಿನಕಾಯಿ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  5. ಅರೆದ ಮಿಶ್ರಣವನ್ನು ಮಾವಿನರಸ ಮತ್ತು ಬೆಲ್ಲ ಇರುವ ಪಾತ್ರೆಗೆ ಹಾಕಿ. 
  6. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಚೆನ್ನಾಗಿ ಕಲಸಿ.
  7. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಗುರುವಾರ, ಏಪ್ರಿಲ್ 26, 2018

Khara bath recipe in Kannada | ಖಾರ ಬಾತ್ ಮಾಡುವ ವಿಧಾನ

Khara bath recipe in Kannada

Khara bath recipe in Kannada | ಖಾರ ಬಾತ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಬನ್ಸಿ ರವೇ
  2. 2.5 ಕಪ್ ನೀರು
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೀಸ್ಪೂನ್ ಕಡ್ಲೆಬೇಳೆ
  6. 1 ದೊಡ್ಡ ಈರುಳ್ಳಿ
  7. 1 ಟೊಮ್ಯಾಟೋ 
  8. 1/2 ದೊಣ್ಣೆಮೆಣಸು
  9. 1 ಸಣ್ಣ ಕ್ಯಾರಟ್
  10. 5 - 6 ಬೀನ್ಸ್
  11. 1/4 ಕಪ್ ಹಸಿ ಬಟಾಣಿ
  12. 1-2 ಹಸಿರು ಮೆಣಸಿನಕಾಯಿ
  13. 4-5 ಕರಿ ಬೇವಿನ ಎಲೆ
  14. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  15. 1/4 ಟೀಸ್ಪೂನ್ ಅರಶಿನ ಪುಡಿ
  16. 2 - 3 ವಾಂಗೀಬಾತ್ ಪುಡಿ
  17. 6-8 ಟೀಸ್ಪೂನ್ ಅಡುಗೆ ಎಣ್ಣೆ
  18. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  19. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  20. 1/2 ಕಪ್ ತೆಂಗಿನತುರಿ

ಬೇಕಾಗುವ ಪದಾರ್ಥಗಳು: (ವಾಂಗೀಬಾತ್ ಪುಡಿ ಇಲ್ಲದಿದ್ದಲ್ಲಿ)

  1. 1.5 ಟೀಸ್ಪೂನ್ ಕೊತ್ತಂಬರಿ ಬೀಜ
  2. 1 ಟೀಸ್ಪೂನ್ ಉದ್ದಿನಬೇಳೆ
  3. 1 ಟೀಸ್ಪೂನ್ ಕಡ್ಲೆಬೇಳೆ
  4. 1/4 ಟೀಸ್ಪೂನ್ ಗಸಗಸೆ
  5. 4 - 5 ಲವಂಗ
  6. 1/4 ಬೆರಳುದ್ದ ಚಕ್ಕೆ
  7. 1/2 ಕಪ್ ಕೊಬ್ಬರಿ

ಖಾರ ಬಾತ್ ಮಾಡುವ ವಿಧಾನ:

  1. ವಾಂಗೀಬಾತ್ ಪುಡಿ ಇಲ್ಲದಿದ್ದಲ್ಲಿ, ಎಲ್ಲ ಪದಾರ್ಥಗಳನ್ನು ಹುರಿದು, ಕೊಬ್ಬರಿಯೊಂದಿಗೆ ಪುಡಿ ಮಾಡಿ. 
  2. ತರಕಾರಿಗಳನ್ನು ತೊಳೆದು, ಕತ್ತರಿಸಿಟ್ಟುಕೊಳ್ಳಿ. ಹಾಗೇ ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟು ಕೊಳ್ಳಿ. ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  3. ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಬೀನ್ಸ್, ಕ್ಯಾರಟ್  ಮತ್ತು ಹಸಿ ಬಟಾಣಿಯನ್ನು ಸ್ವಲ್ಪ ನೀರಿನಲ್ಲಿ (ಸುಮಾರು ಅರ್ಧ ಕಪ್) ಬೇಯಿಸಿಕೊಳ್ಳಿ. 
  4. ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  5. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. 
  6. ನಂತರ ಈರುಳ್ಳಿ ಮತ್ತು ದೊಣ್ಣೆಮೆಣಸು ಹಾಕಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  7. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಹಾಕಿ. 
  8. ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
  9. ಸುಮಾರು 2 ಕಪ್ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ರವೇ (ದೊಡ್ಡ ರವೇ) ಹಾಕಿ ಮಗುಚಿ. 
  10. ಒಂದು ನಿಮಿಷದ ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 
  11. ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಪುನಃ ಮುಚ್ಚಳ ಮುಚ್ಚಿ, 2-3 ನಿಮಿಷಗಳ ಕಾಲ ಬೇಯಲು ಬಿಡಿ. ಸ್ಟವ್ ಆಫ್ ಮಾಡಿ, ಬಡಿಸಿ.


Genasina sasive recipe in kannada | ಗೆಣಸಿನ ಸಾಸಿವೆ ಮಾಡುವ ವಿಧಾನ

Genasina sasive recipe in kannada

Genasina sasive recipe in kannada | ಗೆಣಸಿನ ಸಾಸಿವೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸಿಹಿಗೆಣಸು
  2. 1/2 ಕಪ್ ಮೊಸರು
  3. ಉಪ್ಪು ರುಚಿಗೆ ತಕ್ಕಷ್ಟು.

ಅರೆಯಲು ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 1/4 ಕಪ್ ತೆಂಗಿನತುರಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 2 ಟೀಸ್ಪೂನ್ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ

ಗೆಣಸಿನ ಸಾಸಿವೆ ಮಾಡುವ ವಿಧಾನ:

  1. ಗೆಣಸನ್ನು ತೊಳೆದು ಬೇಯಿಸಿ.
  2. ನಂತರ ಸಿಪ್ಪೆ ತೆಗೆದು, ಚೆನ್ನಾಗಿ ಹಿಸುಕಿ ಅಥವಾ ಮ್ಯಾಶ್ ಮಾಡಿ. 
  3. ಸಾಸಿವೆ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  4. ಅರೆದ ಮಿಶ್ರಣವನ್ನು ಹಿಸುಕಿದ ಗೆಣಸಿಗೆ ಹಾಕಿ. 
  5. ರುಚಿಗೆ ತಕ್ಕಷ್ಟು ಉಪ್ಪು, ಮೊಸರು ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ. ಚೆನ್ನಾಗಿ ಕಲಸಿ. ಹೆಚ್ಚಿನ ಖಾರ ಬೇಕಾದಲ್ಲಿ ಸಣ್ಣಗೆ ಕತ್ತರಿಸಿದ ಹಸಿರುಮೆಣಸಿನಕಾಯಿ ಸೇರಿಸಬಹುದು. 
  6. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...