ಗುರುವಾರ, ಸೆಪ್ಟೆಂಬರ್ 28, 2017

Gudanna or kayanna recipe in Kannada | ಗುಡಾನ್ನ ಮಾಡುವ ವಿಧಾನ

Gudanna or kayanna recipe in Kannada

Gudanna or kayanna recipe in Kannada | ಗುಡಾನ್ನಮಾಡುವ ವಿಧಾನ

Gudanna video Kannada

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ
  2. 1/2 ಕಪ್ ಪುಡಿ ಮಾಡಿದ ಬೆಲ್ಲ (ರುಚಿಗೆ  ಬದಲಾಯಿಸಿ)
  3. 1/2 ಕಪ್ ತೆಂಗಿನ ತುರಿ
  4. 1 ಟೇಬಲ್ ಚಮಚ ಒಣ ದ್ರಾಕ್ಷಿ
  5. 1 ಟೇಬಲ್ ಚಮಚ ಗೋಡಂಬಿ
  6. 1 ಟೇಬಲ್ ಚಮಚ ತುಪ್ಪ
  7. 2 ಏಲಕ್ಕಿ
  8. 1.25 ಕಪ್ ನೀರು ಅನ್ನಕ್ಕೆ
  9. 1 ಕಪ್ ನೀರು ಬೆಲ್ಲ ಕರಗಿಸಲು


ಗುಡಾನ್ನ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು ಎರಡೂವರೆ ಪಟ್ಟು (1.25 ಕಪ್) ನೀರು ಸೇರಿಸಿ ಬೇಯಿಸಿಕೊಳ್ಳಿ. ಆದರೆ ಅನ್ನ ಮುದ್ದೆಯಾಗದಿರಲಿ. 
  2. ಒಂದು ಬಾಣಲೆಯಲ್ಲಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಒಂದು ಟೇಬಲ್ ಚಮಚ ತುಪ್ಪದಲ್ಲಿ ಹುರಿದು ತೆಗೆದಿಡಿ.
  3. ನಂತರ ಅದೇ ಬಾಣಲೆಗೆ ಬೆಲ್ಲ ಮತ್ತು ನೀರು ಸೇರಿಸಿ, ಕುದಿಸಿ.  (ಬೇಕಾದಲ್ಲಿ ಬೆಲ್ಲ ಕರಗಿದ ಮೇಲೆ ಶೋಧಿಸಿ.) 
  4. ನಂತ್ರ ಅದಕ್ಕೆ ಬೇಯಿಸಿದ ಅನ್ನ ಮತ್ತು ಕಾಯಿತುರಿ ಹಾಕಿ. ಮಧ್ಯಮ ಉರಿಯಲ್ಲಿ ಹೆಚ್ಚಿನ ನೀರಿನಂಶ ಹೋಗುವವರೆಗೆ ಮಗುಚಿ.
  5. ಕೊನೆಯಲ್ಲಿ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಸೇರಿಸಿ. ಏಲಕ್ಕಿ ಪುಡಿಯನ್ನೂ ಸೇರಿಸಿ. 
  6. ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ.  

Rave uttappa recipe in Kannada | ರವೆ ಉತ್ತಪ್ಪ ಮಾಡುವ ವಿಧಾನ

Rave uttappa recipe in Kannada

Rave uttappa recipe in Kannada | ರವೆ ಉತ್ತಪ್ಪ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೀಡಿಯಂ ರವೆ
  2. 0.5 ಕಪ್ ಮೊಸರು (ಸ್ವಲ್ಪ ಹುಳಿ ಇದ್ದರೆ ಒಳ್ಳೆಯದು )
  3. 2 ಈರುಳ್ಳಿ
  4. 4 ಟೇಬಲ್ ಚಮಚ ಕಡ್ಲೆಕಾಯಿ ಅಥವಾ ಶೇಂಗಾ
  5. 1 ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ
  6. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. 1 ಟೇಬಲ್ ಚಮಚ ಹೆಚ್ಚಿದ ಕರಿಬೇವು
  8. 5 - 6 ಚಮಚ ಎಣ್ಣೆ / ತುಪ್ಪ
  9. ಉಪ್ಪು ರುಚಿಗೆ ತಕ್ಕಷ್ಟು

ರವೆ ಉತ್ತಪ್ಪ ಮಾಡುವ ವಿಧಾನ:

  1. ದೊಡ್ಡ ಬಟ್ಟಲಿನಲ್ಲಿ ರವೆ ತೆಗೆದುಕೊಳ್ಳಿ.
  2. ಮೊಸರು ಹಾಕಿ ಕಲಸಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ ಗಟ್ಟಿಯಾದ ದೋಸೆಹಿಟ್ಟಿನ ಹದಕ್ಕೆ ಹಿಟ್ಟನ್ನು ತಯಾರಿಸಿ. ನಾನು ಸುಮಾರು 3/4 ಕಪ್ ನಷ್ಟು ನೀರು ಬಳಸಿದ್ದೇನೆ. 
  4. ಚೆನ್ನಾಗಿ ಕಲಸಿ, ಪಕ್ಕಕ್ಕಿಡಿ. 
  5. 4 ಟೇಬಲ್ ಚಮಚ ಕಡ್ಲೆಕಾಯಿ ಅಥವಾ ಶೇಂಗಾ ವನ್ನು ಮಧ್ಯಮ ಉರಿಯಲ್ಲಿ ಹುರಿದು, ಸಿಪ್ಪೆ ತೆಗೆದು, ಎರಡು ಭಾಗ ಮಾಡಿಟ್ಟುಕೊಳ್ಳಿ.
  6. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ, ೧ ಚಮಚ ಎಣ್ಣೆ ಹಾಕಿ, ಹುರಿದುಟ್ಟುಕೊಳ್ಳಿ.
  7. ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಉಪ್ಪನ್ನು ತಯಾರಿಸಿದ ಹಿಟ್ಟಿಗೆ ಸೇರಿಸಿ. 
  8. ಹುರಿದ ಕಡ್ಲೆಕಾಯಿ ಮತ್ತು ಹುರಿದ ಈರುಳ್ಳಿಯನ್ನೂ ಹಾಕಿ ಚೆನ್ನಾಗಿ ಕಲಸಿ. ಹಿಟ್ಟು ಗಟ್ಟಿಯಾದ ದೋಸೆ ಹಿಟ್ಟಿನಂತಿರಬೇಕು. ಬೇಕಾದಲ್ಲಿ ನೀರು ಸೇರಿಸಿ. 
  9. ದೋಸೆ ಕಲ್ಲು ಅಥವಾ ತವ ಬಿಸಿ ಮಾಡಿ. ಒಂದು ಸೌಟು ಹಿಟ್ಟು ಸುರಿದು ಸ್ವಲ್ಪ ಹರಡಿ. ಮುಚ್ಚಳ ಮುಚ್ಚಿ ಬೇಯಿಸಿ. 
  10. ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. 
  11. ಎರಡೂ ಬದಿ ಕಾಯಿಸಿ. ಕಾಯಿ ಚಟ್ನಿಯೊಂದಿಗೆ ಬಡಿಸಿ.

ಮಂಗಳವಾರ, ಸೆಪ್ಟೆಂಬರ್ 26, 2017

Mysuru tomato saaru recipe in Kannada | ಮೈಸೂರು ಟೊಮೇಟೊ ಸಾರು ಮಾಡುವ ವಿಧಾನ

Mysuru tomato saaru recipe in Kannada

Mysuru tomato saaru recipe in Kannada | ಮೈಸೂರು ಟೊಮೇಟೊ ಸಾರು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/4 ಕಪ್ ತೊಗರಿ ಬೇಳೆ
  2. 2 ಟೊಮೇಟೊ
  3. ಚಿಟಿಕೆ ಅರಿಶಿನ
  4. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  5. 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು
  6. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  7. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 2 - 4 ಒಣಮೆಣಸಿನಕಾಯಿ
  2. 2 ಚಮಚ ಕೊತ್ತಂಬರಿ ಬೀಜ ಅಥವಾ ಧನಿಯಾ
  3. 1/2 ಟೀಸ್ಪೂನ್ ಜೀರಿಗೆ
  4. ದೊಡ್ಡ ಚಿಟಿಕೆ ಮೆಂತ್ಯ
  5. 1/4 ಟೀಸ್ಪೂನ್ ಕರಿಮೆಣಸು ಅಥವಾ ಕಾಳುಮೆಣಸು
  6. ಇಂಗು ಒಂದು ಚಿಟಿಕೆ
  7. ದೊಡ್ಡ ಚಿಟಿಕೆ ಸಾಸಿವೆ
  8. ಸಣ್ಣ ಚೂರು ಚಕ್ಕೆ
  9. 4 - 5 ಕರಿಬೇವಿನ ಎಲೆ
  10. 1/4 ಕಪ್ ತೆಂಗಿನ ತುರಿ
  11. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. ಇಂಗು ಒಂದು ಚಿಟಿಕೆ
  3. 5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಮೈಸೂರು ಟೊಮೇಟೊ ಸಾರು ಮಾಡುವ ವಿಧಾನ:

  1. ತೊಗರಿ ಬೇಳೆಯನ್ನು ತೊಳೆದು, ಅಗತ್ಯವಿದ್ದಷ್ಟು ನೀರು, ಚಿಟಿಕೆ ಅರಿಶಿನ ಮತ್ತು ಎರಡು ಹನಿ ಎಣ್ಣೆ ಸೇರಿಸಿ, ಮೆತ್ತಗಾಗುವವರೆಗೆ ಬೇಯಿಸಿ.
  2. ನಂತ್ರ ಅದಕ್ಕೆ ಸಣ್ಣಗೆ ಕತ್ತರಿಸಿದ ಟೊಮೇಟೊ ಹಾಕಿ ಮೆತ್ತಗಾಗುವವರೆಗೆ ಬೇಯಿಸಿ. 
  3. ಅದೇ ಸಮಯದಲ್ಲಿ ಮಸಾಲೆ ಪದಾರ್ಥಗಳನ್ನು ಹುರಿಯಿರಿ. ಸಾರಿನ ಪುಡಿ ಇದ್ದಲ್ಲಿ ಮಸಾಲೆ ಹುರಿಯಬೇಕಿಲ್ಲ. ನೇರವಾಗಿ ಸಾರಿನ ಪುಡಿಯನ್ನು ತೆಂಗಿನತುರಿಯೊಂದಿಗೆ ಅರೆದರಾಯಿತು.
  4. ಕೊನೆಯಲ್ಲಿ ಕರಿಬೇವು ಹಾಕಿ ಹುರಿದು, ತೆಂಗಿನತುರಿಯೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  5. ಅರೆದ ಮಸಾಲೆಯನ್ನು ಬೇಯಿಸಿದ ಬೇಳೆ ಮತ್ತು ಟೊಮ್ಯಾಟೊಗೆ ಹಾಕಿ. 
  6. ಉಪ್ಪು, ಬೆಲ್ಲ ಮತ್ತು ಹುಣಿಸೆ ರಸ ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  8. ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  9. ಒಗ್ಗರಣೆ ಸೌಟು ಬಳಸಿಕೊಂಡು 2 ಚಮಚಎಣ್ಣೆ, 1/2 ಚಮಚ ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  10. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ.  ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...