ಬುಧವಾರ, ಜೂನ್ 28, 2017

Plain Akki rotti recipe in Kannada | ಉಕ್ಕರಿಸಿದ ಅಕ್ಕಿ ರೊಟ್ಟಿ ಮಾಡುವ ವಿಧಾನ

Plain Akki rotti recipe in Kannada

Plain Akki rotti recipe in Kannada | ಉಕ್ಕರಿಸಿದ ಅಕ್ಕಿ ರೊಟ್ಟಿ ಮಾಡುವ ವಿಧಾನ

ಉಕ್ಕರಿಸಿದ ಅಕ್ಕಿರೊಟ್ಟಿ ಅಥವಾ ಉಬ್ಬುರೊಟ್ಟಿಯ ವಿಡಿಯೋವನ್ನು ಈ ಕೆಳಗೆ ನೀಡಿದ್ದೇನೆ. ಒಮ್ಮೆ ವೀಕ್ಷಿಸಿದಲ್ಲಿ ರೊಟ್ಟಿ ಮಾಡಲು ಅನುಕೂಲವಾಗಬಹುದು. 
Akki rotti video

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1.5 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
  3. 1 ಟೀಸ್ಪೂನ್ ಅಡುಗೆ ಎಣ್ಣೆ 
  4. ಉಪ್ಪು ರುಚಿಗೆ ತಕ್ಕಷ್ಟು


ಉಕ್ಕರಿಸಿದ ಅಕ್ಕಿ ರೊಟ್ಟಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು, ಉಪ್ಪು ಮತ್ತು ಎಣ್ಣೆ ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ  ಅಕ್ಕಿ ಹಿಟ್ಟನ್ನು ಸೇರಿಸಿ ಒಂದೆರಡು ಸುತ್ತು ಕಲಸಿ. ಸ್ಟವ್ ಆಫ್ ಮಾಡಿ. 
  3. ಸ್ಟವ್ ಆರಿಸಿದ ಮೇಲೆ ಸಟ್ಟುಗದಿಂದ ಚೆನ್ನಾಗಿ ಕಲಸಿ ಮುಚ್ಚಿಡಿ. 
  4. ಬಿಸಿ ಆರಿದ ಮೇಲೆ ಕೈಯಿಂದ ಚೆನ್ನಾಗಿ ನಾದಿ ಮೃದುವಾದ ಹಿಟ್ಟನ್ನು ತಯಾರಿಸಿ. 
  5. ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ. 
  6. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ. 
  7. ಒಂದು ಶುಭ್ರವಾದ ಬಟ್ಟೆಯಿಂದ ರೊಟ್ಟಿಯ ಮೇಲ್ಭಾಗಕ್ಕೆ ನೀರನ್ನು ಹಚ್ಚಿ. 
  8. ಸಣ್ಣ ಗುಳ್ಳೆಗಳು ಬಂಡ ಕೂಡಲೇ ತಿರುಗಿಸಿ ಇನ್ನೊಂದು ಬದಿ ಕಾಯಿಸಿ. 
  9.  ಅಥವಾ ರೊಟ್ಟಿಯ ಎರಡು ಬದಿಯನ್ನು ಸುಮಾರು ಹತ್ತು ಸೆಕೆಂಡ್ಗಳ ಕಾಲ ಕಾಯಿಸಿ. 
  10. ನಂತರ ರೊಟ್ಟಿಯನ್ನು ನೇರವಾಗಿ ಸ್ಟವ್ ಮೇಲೆ ಹಾಕಿ. ಎರಡು ಬದಿ ಅಲ್ಲಲ್ಲಿ ಕೆಂಪಾಗುವವರೆಗೆ ಕಾಯಿಸಿ. 
  11. ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

ಮಂಗಳವಾರ, ಜೂನ್ 27, 2017

Bendekai kayirasa recipe in Kannada | ಬೆಂಡೆಕಾಯಿ ಕಾಯಿರಸ ಮಾಡುವ ವಿಧಾನ

Bendekai kayirasa recipe in Kannada

Bendekai kayirasa recipe in Kannada | ಬೆಂಡೆಕಾಯಿ ಕಾಯಿರಸ ಮಾಡುವ ವಿಧಾನ 

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 250 ಗ್ರಾಂ ಬೆಂಡೆಕಾಯಿ
  2. 1 ಚಿಟಿಕೆ ಅರಿಶಿನ ಪುಡಿ
  3. ಹುಣಸೆ ಹಣ್ಣು ಒಂದು ನೆಲ್ಲಿಕಾಯಿ ಗಾತ್ರ
  4. ಬೆಲ್ಲ ಒಂದು ನೆಲ್ಲಿಕಾಯಿ ಗಾತ್ರ
  5. ಉಪ್ಪು ರುಚಿಗೆ ತಕ್ಕಷ್ಟು.

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಟೀಸ್ಪೂನ್ ಉದ್ದಿನ ಬೇಳೆ
  2. 2 - 4 ಒಣ ಮೆಣಸಿನಕಾಯಿ
  3. 1/2 ಕಪ್ ತೆಂಗಿನ ತುರಿ
  4. 1/2 ಟೀಸ್ಪೂನ್ ಮೆಂತ್ಯ
  5. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 1 ಒಣಮೆಣಸಿನಕಾಯಿ (ಬೇಕಾದಲ್ಲಿ)
  3. 4 - 5 ಕರಿಬೇವಿನ ಎಲೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಬೆಂಡೆಕಾಯಿ ಕಾಯಿರಸ ಮಾಡುವ ವಿಧಾನ:

  1. ಬೆಂಡೆಕಾಯಿ ತೊಳೆದು, ತುದಿ ಮತ್ತು ಬುಡ ತೆಗೆದು, 2 ಸೆಮೀ ಉದ್ದಕ್ಕೆ ಕತ್ತರಿಸಿಕೊಳ್ಳಿ.
  2. 1 ಕಪ್ ನೀರಿನಲ್ಲಿ ಹುಣಸೆ ಹಣ್ಣನ್ನು ನೆನೆಸಿ ರಸ ತೆಗೆದಿಟ್ಟುಕೊಳ್ಳಿ. 
  3. ಕುಕ್ಕರ್‌ಗೆ ಕತ್ತರಿಸಿದ ಬೆಂಡೆಕಾಯಿ ಹಾಕಿ. ಉಪ್ಪು, ಅರಿಶಿನ ಪುಡಿ, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ ಒಂದು ವಿಷಲ್ ಮಾಡಿ.
  4. ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಒಣ ಮೆಣಸು, ಉದ್ದಿನ ಬೇಳೆ, ಮೆಂತ್ಯ ಮತ್ತು ಎಣ್ಣೆ ಹಾಕಿ. ಉದ್ದಿನ ಬೇಳೆ ಹೊಂಬಣ್ಣಕ್ಕೆ ಬರುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
  5. ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಪದಾರ್ಥಗಳನ್ನು ಹಾಕಿ ಅರೆಯಿರಿ. 
  6. ಬೇಯಿಸಿದ ಬೆಂಡೆಕಾಯಿಗೆ ಅರೆದ ಮಸಾಲೆ ಸೇರಿಸಿ. ಬೇಕಾದಲ್ಲಿ ಉಪ್ಪು ಸೇರಿಸಿ. ಒಂದು ಕುದಿ ಕುದಿಸಿ.  
  7. ನಂತರ ಎಣ್ಣೆ, ಒಣಮೆಣಸು, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ.

ಸೋಮವಾರ, ಜೂನ್ 26, 2017

Kashaya pudi recipe in Kannada | ಕಷಾಯ ಪುಡಿ ಮಾಡುವ ವಿಧಾನ

Kashaya pudi recipe in Kannada

Kashaya pudi recipe in Kannada | ಕಷಾಯ ಪುಡಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು (ವಿಧಾನ ೧):

  1. 100 ಗ್ರಾಂ ಕೊತ್ತುಂಬರಿ ಬೀಜ
  2. 100 ಗ್ರಾಂ ಜೀರಿಗೆ
  3. 50 ಗ್ರಾಂ ಮೆಂತ್ಯೆ
  4. 100 ಗ್ರಾಂ ಹೆಸರುಕಾಳು
  5. 20 ಏಲಕ್ಕಿ 
  6. 50 ಗ್ರಾಂ ಬಡೇಸೊಂಪು 
  7. 50 ಗ್ರಾಂ ಒಣ ಶುಂಠಿ 
  8. 100 ಗ್ರಾಂ ಕರಿ ಮೆಣಸು 
  9. 100 ಗ್ರಾಂ ಸುಗಂಧಿ 
  10. 100 ಗ್ರಾಂ ಅಶ್ವಗಂಧ 
  11. 100 ಗ್ರಾಂ ನೆಗ್ಗಿನಮುಳ್ಳು 
  12. 100 ಗ್ರಾಂ ಜೇಷ್ಠಮಧು 
  13. 100 ಗ್ರಾಂ ಅರಿಶಿನ ಕೊಂಬು (ಬೇಕಾದಲ್ಲಿ)

ಬೇಕಾಗುವ ಪದಾರ್ಥಗಳು (ವಿಧಾನ ೨):

  1. 1/2 ಕಪ್ ಕೊತ್ತುಂಬರಿ ಬೀಜ
  2. 1/4 ಕಪ್ ಜೀರಿಗೆ
  3. 1 ಟೇಬಲ್ ಚಮಚ ಮೆಂತ್ಯ
  4. 2 ಟೇಬಲ್ ಚಮಚ ಬಡೇಸೊಂಪು 
  5. 2 ಟೇಬಲ್ ಚಮಚ ಕರಿ ಮೆಣಸು 
  6. 2cm ಅರಿಶಿನ ಕೊಂಬು
  7. 1cm  ಒಣ ಶುಂಠಿ 
  8. 4-5 ಏಲಕ್ಕಿ 
  9. 10 ಲವಂಗ

ಕಷಾಯ ಪುಡಿ ಮಾಡುವ ವಿಧಾನ:

  1. ಅಳತೆ ಪ್ರಕಾರ ಎಲ್ಲ ಮಸಾಲಾ ಪದಾರ್ಥಗಳನ್ನು ತೆಗೆದುಕೊಳ್ಳಿ. 
  2. ನಂತರ ಮಸಾಲಾ ಪದಾರ್ಥಗಳನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಬಾಣಲೆಯಲ್ಲಿ ಸ್ವಲ್ಪ ಬಿಸಿಯಾಗುವವರೆಗೆ ಹುರಿಯಿರಿ. 
  3. ಮಸಾಲಾ ಪದಾರ್ಥಗಳು ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಬೇರು ನಾರುಗಳನ್ನು ಮೊದಲಿಗೆ ಒರಳು ಕಲ್ಲಿನಲ್ಲಿ ಜಜ್ಜಿಕೊಂಡು ನಂತ್ರ ಮಿಕ್ಸಿಗೆ ಹಾಕಿ. 
  4. ಜರಡಿಯಲ್ಲಿ ಸಾರಣಿಸಿ, ನುಣ್ಣನೆ ಪುಡಿಯನ್ನು ತಯಾರಿಸಿ.  
  5.  ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ರುಚಿಕರ ಮತ್ತು ಆರೋಗ್ಯಕರ ಕಷಾಯಪುಡಿ ಉಪಯೋಗಿಸಿ ಕಷಾಯ ಮಾಡಿ.
  6. ಕಷಾಯ ಮಾಡಲು, ನೀರು ಮತ್ತು ಬೆಲ್ಲ ಕುದಿಸಿ, ಕೊನೆಯಲ್ಲಿ ಪುಡಿ ಹಾಕಿ ಸ್ವಲ್ಪ ಹೊತ್ತು ಕುದಿಸಿ, ಹಾಲು ಹಾಕಿ ಕುಡಿದರಾಯಿತು. 
Related Posts Plugin for WordPress, Blogger...