ಮಂಗಳವಾರ, ಮೇ 31, 2016

Alasande kalu saaru recipe in kannada | ಅಲಸಂದೆ ಕಾಳು ಸಾರು ಮಾಡುವ ವಿಧಾನ

Alasande kalu saaru recipe in kannada

Alasande kalu saaru recipe | ಅಲಸಂದೆ ಕಾಳು ಸಾರು ಮಾಡುವ ವಿಧಾನ 



ತಯಾರಿ ಸಮಯ: 7 - 8 ಘಂಟೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಲಸಂದೆ ಕಾಳು / ಹೆಸರು ಕಾಳು / ಅವಡೆ ಕಾಳು
  2. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  3. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 4 - 6 ಕೆಂಪು ಮೆಣಸಿನಕಾಯಿ 
  2. 10 ಎಸಳು ಬೆಳ್ಳುಳ್ಳಿ
  3. 4 - 5 ಕರಿಬೇವಿನ ಎಲೆ
  4. 6 ಚಮಚ ಅಡುಗೆ ಎಣ್ಣೆ 

ಅಲಸಂದೆ ಕಾಳು ಸಾರು ಮಾಡುವ ವಿಧಾನ:

  1. ಅಲಸಂದೆ ಕಾಳನ್ನು 7 - 8 ಘಂಟೆಗಳ ಕಾಲ ನೀರಿನಲ್ಲಿ ನೆನೆಸಿ.
  2. ನೆನೆಸಿದ ಕಾಳನ್ನು ಮೆತ್ತಗೆ ಬೇಯಿಸಿಕೊಳ್ಳಿ. ನಾನು ಕುಕ್ಕರ್ ನಲ್ಲಿ 4 - 5 ವಿಷಲ್ ಮಾಡುತ್ತೇನೆ. ಬೇಯಿಸುವಾಗ ಉಪ್ಪು ಸೇರಿಸಬೇಡಿ. 
  3. ಬೇಯಿಸಿದ ಕಾಳನ್ನು ಸೌಟಿನ ಹಿಂಭಾಗ ಬಳಸಿ ಸ್ವಲ್ಪ ಮಸೆಯಿರಿ ಅಥವಾ ಮ್ಯಾಶ್ ಮಾಡಿಕೊಳ್ಳಿ.
  4. ಹುಣಿಸೆಹಣ್ಣಿನ ರಸ, ಉಪ್ಪು ಸೇರಿಸಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ  ಕುದಿಸಿ. 
  5. ಅನ್ನದ ಜೊತೆ ಬಡಿಸ ಬೇಕಾದಲ್ಲಿ ಹೆಚ್ಚು ನೀರು ಸೇರಿಸಿ. ಒಂದು ವೇಳೆ ಚಪಾತಿ ಜೊತೆ ಬಡಿಸುತ್ತೀರಾದರೆ  ಸ್ವಲ್ಪ ನೀರು ಸೇರಿಸಿ. 
  6. ಒಂದು ಸಣ್ಣ ಬಾಣಲೆಯಲ್ಲಿ ಬೆಳ್ಳುಳ್ಳಿ , ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ತಯಾರಿಸಿ. 
  7. ಕುದಿಸಿದ ಸಾರು ಅಥವಾ ರಸಂ ಗೆ ಸೇರಿಸಿ, ಮಗುಚಿ ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ. 

ಸೋಮವಾರ, ಮೇ 16, 2016

Mango ice candy in Kannada | ಮಾವಿನ ಹಣ್ಣಿನ ಐಸ್ ಕ್ಯಾಂಡಿ ಮಾಡುವ ವಿಧಾನ

Mango ice candy recipe in Kannada

Mango ice candy in Kannada | ಮಾವಿನ ಹಣ್ಣಿನ ಐಸ್ ಕ್ಯಾಂಡಿ ಮಾಡುವ ವಿಧಾನ 

ತಯಾರಿ ಸಮಯ: 10 ನಿಮಿಷ
ಶೀಥಲಿಕರಣ ಸಮಯ : 2 - 3 ಘಂಟೆ
ಪ್ರಮಾಣ : 4 ಜನರಿಗೆ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕತ್ತರಿಸಿದ ಮಾವಿನ ಹಣ್ಣು 
  2. 1/4 ಕಪ್ ಕುದಿಸಿ ತಂಪು ಮಾಡಿದ ಹಾಲು 
  3. 1/4 ಕಪ್ ತಂಪು ಮಾಡಿದ ನೀರು 
  4. 10 ಚಮಚ ಸಕ್ಕರೆ (ಅಥವಾ ರುಚಿಗೆ ತಕ್ಕಷ್ಟು)
  5. ಐಸ್ ಕ್ಯಾಂಡಿ ಅಚ್ಚು ಅಥವಾ ಲೋಟ

ಮಾವಿನ ಹಣ್ಣಿನ ಐಸ್ ಕ್ಯಾಂಡಿ ಮಾಡುವ ವಿಧಾನ:

  1. ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. 
  2. ಮಿಕ್ಸಿ ಜಾರಿಗೆ ಕತ್ತರಿಸಿದ ಮಾವಿನ ಹಣ್ಣು, ಹಾಲು, ನೀರು ಮತ್ತು ಸಕ್ಕರೆ ಹಾಕಿ ನುಣ್ಣಗೆ ಅರೆಯಿರಿ. 
  3. ಅರೆದ ಮಿಶ್ರಣವನ್ನು ಐಸ್ ಕ್ಯಾಂಡಿ ಅಚ್ಚಿಗೆ ಹಾಕಿ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ. 
  4. ಐಸ್ ಕ್ಯಾಂಡಿ ಅಚ್ಚು ಇಲ್ಲದಿದ್ದಲ್ಲಿ ಸಣ್ಣ ಪೇಪರ್ ಕಪ್ ಅಥವಾ ಸ್ಟೀಲ್ ಲೋಟಕ್ಕೆ ಹಾಕಿ, ಐಸ್ ಕ್ಯಾಂಡಿ ಕಡ್ಡಿಯನ್ನು ಇಟ್ಟು, ನಂತರ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ. 
  5. ಗಟ್ಟಿಯಾದ ನಂತರ, ಅಚ್ಚು ಅಥವಾ ಲೋಟವನ್ನು ಕೆಲವು  ಸೆಕೆಂಡ್ ಗಳ ಕಾಲ ನೀರಿನಲ್ಲಿಡಿ ಅಥವಾ ನಲ್ಲಿ(ಟ್ಯಾಪ್) ನೀರಿನಡಿ ಹಿಡಿಯಿರಿ. ಆಮೇಲೆ ಐಸ್ ಕ್ಯಾಂಡಿಯನ್ನು ಜಾಗ್ರತೆಯಿಂದ ಹೊರ ತೆಗೆದು ಸವಿಯಿರಿ. 

ಶನಿವಾರ, ಮೇ 14, 2016

Vangi bath recipe in kannada | ವಾಂಗಿ ಬಾತ್ ಮಾಡುವ ವಿಧಾನ

Vangi bath recipe in kannada | ವಾಂಗಿ ಬಾತ್ ಮಾಡುವ ವಿಧಾನ

ವಾಂಗಿ ಬಾತ್ ವಿಡಿಯೋ



ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 3 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಎಳೆ ಹಸಿರು ಉದ್ದದ ಬದನೆಕಾಯಿ
  2. 1 ಕಪ್ ಸೋನಾ ಮಸೂರಿ ಅಥವಾ ಉತ್ತಮ ಗುಣಮಟ್ಟದ ಅಕ್ಕಿ
  3. 1/2 ಚಮಚ ಸಾಸಿವೆ
  4. 2 ಟೀಸ್ಪೂನ್ ಕಡ್ಲೇಬೇಳೆ 
  5. 2 ಟೀಸ್ಪೂನ್ ಉದ್ದಿನ ಬೇಳೆ
  6. 5 - 6 ಗೋಡಂಬಿ ಅಥವಾ 2 ಟೇಬಲ್ ಸ್ಪೂನ್ ನೆಲಗಡಲೆ ಬೀಜ
  7. 5 - 6 ಕರಿಬೇವಿನ ಎಲೆ 
  8. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  9. 3 - 4 ಚಮಚ ವಾಂಗಿ ಬಾತ್ ಪುಡಿ
  10. 1/4 ಟೀಸ್ಪೂನ್ ಅರಿಶಿನ ಪುಡಿ
  11.  ಉಪ್ಪು ರುಚಿಗೆ ತಕ್ಕಷ್ಟು
  12. 8 ಟೀಸ್ಪೂನ್ ಅಡುಗೆ ಎಣ್ಣೆ

ವಾಂಗಿ ಬಾತ್ ಮಾಡುವ ವಿಧಾನ:

  1. ಮೊದಲಿಗೆ ಅನ್ನ ಮಾಡಿ ತೆಗೆದಿಟ್ಟು ಕೊಳ್ಳಿ. 
  2. ಬದನೆಕಾಯಿಯನ್ನು 2 "ತುಂಡುಗಳಾಗಿ ಕತ್ತರಿಸಿ ಉದ್ದವಾಗಿ ಸೀಳಿ. ಮತ್ತು ಒಳ್ಳೆಯ ನೀರಿನಲ್ಲಿ ನೆನೆಸಿಡಿ. 
  3. ಒಂದು ಬಾಣಲೆಯನ್ನು ಬಿಸಿ ಮಾಡಿ. 8 ಚಮಚ ಅಡುಗೆ ಎಣ್ಣೆ ಹಾಕಿ
  4. ಸಾಸಿವೆ, ಕಡ್ಲೇಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಸೇರಿಸಿ ಒಗ್ಗರಣೆ ಮಾಡಿ. 
  5. ಸಾಸಿವೆ ಸಿಡಿಯುವವರೆಗೆ, ಬೇಳೆಗಳು ಕಂದು ಬಣ್ಣ ಬರುವ ತನಕ ಹುರಿಯಿರಿ. 
  6. ಕರಿಬೇವು ಹಾಕಿ, ಉರಿ ಕಡಿಮೆ ಮಾಡಿ.
  7. ಕತ್ತರಿಸಿ ನೀರಿನಲ್ಲಿ ನೆನೆಸಿಟ್ಟ ಬದನೆಕಾಯಿಯನ್ನು ನೀರನ್ನು ಹಿಂಡಿ ತೆಗೆದು ಸೇರಿಸಿ. 1 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ. 
  8. ಅರಿಶಿನ ಪುಡಿ ಹಾಕಿ. ಪುನಃ 2 ನಿಮಿಷ ಹುರಿಯಿರಿ. 
  9. ಉಪ್ಪು ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ. 
  10. ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ. 
  11. ನಂತರ 3 - 4 ಚಮಚ ವಾಂಗಿ ಬಾತ್ ಪುಡಿ ಸೇರಿಸಿ. ಒಂದೆರಡು ನಿಮಿಷ ಮಗುಚಿ. ಸ್ಟವ್ ಆಫ್ ಮಾಡಿ. 
  12. ಮೊದಲೇ ಬೇಯಿಸಿಟ್ಟ ಅನ್ನ ಸೇರಿಸಿ, ಮುದ್ದೆಯಾಗದಂತೆ ಕಲಸಿ. 
  13. ಸಲಾಡ್ ಅಥವಾ ಮೊಸರನ್ನ ದೊಂದಿಗೆ ಬಡಿಸಿ.
Related Posts Plugin for WordPress, Blogger...