ಮಂಗಳವಾರ, ಜುಲೈ 11, 2023

Ottu shavige recipe in Kannada | ಉಳಿದ ಅನ್ನದಿಂದ ಶಾವಿಗೆ ಮಾಡುವ ವಿಧಾನ

 

Ottu shavige recipe in Kannada

Ottu shavige recipe in Kannada | ಉಳಿದ ಅನ್ನದಿಂದ ಶಾವಿಗೆ ಮಾಡುವ ವಿಧಾನ

ಉಳಿದ ಅನ್ನದ ಶಾವಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅನ್ನ
  2. 1/2 ಕಪ್ ಅಕ್ಕಿಹಿಟ್ಟು 
  3. 1/4 ಕಪ್ ನೀರು
  4. 1 ಟೀಸ್ಪೂನ್ ಎಣ್ಣೆ
  5. ಉಪ್ಪು ರುಚಿಗೆ ತಕ್ಕಷ್ಟು

ಉಳಿದ ಅನ್ನದಿಂದ ಶಾವಿಗೆ ಮಾಡುವ ವಿಧಾನ:

  1. ಮಿಕ್ಸಿಯಲ್ಲಿ ಅನ್ನ ತೆಗೆದುಕೊಂಡು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. ಸುಮಾರು ಕಾಲು ಕಪ್ ನೀರು ಸಾಕಾಗುವುದು. 
  2. ರುಬ್ಬಿದ ಅನ್ನವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು, ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  3. ಸ್ವಲ್ಪ ಸ್ವಲ್ಪವೇ ಅಕ್ಕಿಹಿಟ್ಟನ್ನು ಸೇರಿಸಿ ಮೃದುವಾದ ಹಿಟ್ಟು ತಯಾರಿಸಿ. 
  4. ಕೈಗೆ ಎಣ್ಣೆ ಹಚ್ಚಿಕೊಂಡು  ಉದ್ದುದ್ದ ಉಂಡೆಗಳನ್ನು ಮಾಡಿ. 
  5. ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ. 
  6. ಸೆಕೆಯಲ್ಲಿ (ಆವಿಯಲ್ಲಿ) 8-10 ನಿಮಿಷ ಬೇಯಿಸಿ. ನಿಮ್ಮಿಷ್ಟದ ಸಾಂಬಾರ್ ಅಥವಾ ಗೊಜ್ಜು ಅಥವಾ ಚಟ್ನಿಯೊಂದಿಗೆ ಸವಿದು ಆನಂದಿಸಿ. 


ಶುಕ್ರವಾರ, ಜುಲೈ 7, 2023

Kobbari saaru recipe in Kannada | ಕೊಬ್ಬರಿ ಸಾರು ಮಾಡುವ ವಿಧಾನ

 

Kobbari saaru recipe in Kannada

Kobbari saaru recipe in Kannada | ಕೊಬ್ಬರಿ ಸಾರು ಮಾಡುವ ವಿಧಾನ

ಕೊಬ್ಬರಿ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1/2 ಕಪ್ ಒಣಕೊಬ್ಬರಿ
  2. 1 ಟೀಸ್ಪೂನ್ ಕಾಳುಮೆಣಸು
  3. 1 ಟೀಸ್ಪೂನ್ ಜೀರಿಗೆ
  4. 2 - 4 ಒಣಮೆಣಸಿನಕಾಯಿ
  5. 10 - 12 ಎಸಳು ಬೆಳ್ಳುಳ್ಳಿ
  6. 1/4 ಟೀಸ್ಪೂನ್ ಅರಿಶಿನ
  7. ಉಪ್ಪು ರುಚಿಗೆ ತಕ್ಕಷ್ಟು
  8. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  9. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. 1 ಟೀಸ್ಪೂನ್ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಚಮಚ ಜೀರಿಗೆ
  3. 1 ಒಣಮೆಣಸಿನಕಾಯಿ
  4. 10 - 12 ಎಸಳು ಬೆಳ್ಳುಳ್ಳಿ
  5. 5 - 6 ಕರಿಬೇವಿನ ಎಲೆ
  6. 1 ಟೇಬಲ್ ಚಮಚ ಎಣ್ಣೆ

 ಕೊಬ್ಬರಿ ಸಾರು ಮಾಡುವ ವಿಧಾನ:

  1. ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ, ಕಾಳುಮೆಣಸು ಮತ್ತು ಜೀರಿಗೆಯನ್ನು ಹಾಕಿ ಹುರಿಯಿರಿ. 
  2. ನಂತರ ಒಣಮೆಣಸಿನಕಾಯಿಯನ್ನು ಸೇರಿಸಿ ಹುರಿಯಿರಿ. 
  3. ಆಮೇಲೆ ಸಿಪ್ಪೆ ತೆಗೆದು ಕತ್ತರಿಸಿದ ಬೆಳ್ಳುಳ್ಳಿ ಮತ್ತು ಒಣಕೊಬ್ಬರಿ ಸೇರಿಸಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  4. ಬಿಸಿ ಅರಿದಮೇಲೆ ಮಿಕ್ಸಿ ಜಾರಿಗೆ ಹಾಕಿ.
  5. ಅರಿಶಿನ ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. ಮಸಾಲೆ ಪೇಸ್ಟ್ ತಯಾರಾಯಿತು. 
  6. ಇನ್ನೊಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿ.
  7. ಒಣಮೆಣಸಿನಕಾಯಿ, ಕತ್ತರಿಸಿದ ಬೆಳ್ಳುಳ್ಳಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ. 
  8. ಉರಿ ಕಡಿಮೆ ಮಾಡಿ ಅರೆದ ಮಸಾಲೆ ಸೇರಿಸಿ. 
  9. ಅಗತ್ಯವಿದ್ದಷ್ಟು ನೀರು ಸೇರಿಸಿ. 
  10. ಉಪ್ಪು ಸೇರಿಸಿ ಕುದಿಸಿ. ನಿಮ್ಮ ರುಚಿಗೆ ತಕ್ಕಂತೆ ಉಪ್ಪು ಹುಳಿ ಮತ್ತು ಬೆಲ್ಲ ಹೊಂದಿಸಿಕೊಳ್ಳಿ. 
  11. ಒಂದು ನಿಮಿಷ ಚೆನ್ನಾಗಿ ಕುದಿಸಿ. 
  12. ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
  13. ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಜೂನ್ 30, 2023

Vidyarthi bhavana style chutney | ವಿದ್ಯಾರ್ಥಿ ಭವನ ಶೈಲಿಯ ಕಾಯಿ ಚಟ್ನಿ

 

Vidyarthi bhavana style chutney

Vidyarthi bhavana style chutney | ವಿದ್ಯಾರ್ಥಿ ಭವನ ಶೈಲಿಯ ಕಾಯಿ ಚಟ್ನಿ

ವಿದ್ಯಾರ್ಥಿ ಭವನ ಶೈಲಿಯ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನ ತುರಿ
  2. 1/2 ಕಪ್ ಹುರಿಗಡಲೆ ಅಥವಾ ಕಡ್ಲೆ ಪಪ್ಪು
  3. 4 ಹಸಿರು ಮೆಣಸಿನಕಾಯಿ 
  4. 4 ಕಡ್ಡಿ ಕೊತ್ತಂಬರಿ ಸೊಪ್ಪು
  5. 1 ಸೆಮೀ ಉದ್ದದ ಶುಂಠಿ
  6. ಸ್ವಲ್ಪ ಹುಣಿಸೆ ಹಣ್ಣು 
  7. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟಿಸ್ಪೂನ್ ಎಣ್ಣೆ 
  2. 4 ಕರಿಬೇವಿನ ಎಲೆ
  3. 1/4 ಟಿಸ್ಪೂನ್ ಸಾಸಿವೆ 
  4. ಒಂದು ಚಿಟಿಕೆ ಇಂಗು

 ವಿದ್ಯಾರ್ಥಿ ಭವನ ಶೈಲಿಯ ಚಟ್ನಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಹಸಿಮೆಣಸಿನಕಾಯಿ ಮತ್ತು 2 ಕಡ್ಡಿ ಕೊತ್ತಂಬರಿ ಸೊಪ್ಪನ್ನು ಒಂದು ಚಮಚ ಎಣ್ಣೆ ಹಾಕಿ ಹುರಿಯಿರಿ. 
  2. ನಂತರ ಮಿಕ್ಸಿ ಜಾರಲ್ಲಿ ಹುರಿಗಡಲೆ, ತೆಂಗಿನ ತುರಿ, ಹುರಿದ ಪದಾರ್ಥಗಳು, ಹುಣಿಸೆ ಹಣ್ಣು, ಶುಂಠಿ ಮತ್ತು ಉಪ್ಪನ್ನು ತೆಗೆದುಕೊಳ್ಳಿ. 
  3. ನೀರು ಹಾಕದೆ ಪುಡಿಮಾಡಿಕೊಳ್ಳಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
  5. ಕೊನೆಯಲ್ಲಿ ಒಂದೆರಡು ಕಡ್ಡಿ ಕೊತ್ತಂಬರಿ ಸೊಪ್ಪು ಸೇರಿಸಿ ಅರೆಯಿರಿ. 
  6. ಒಂದು ಬಟ್ಟಲಿಗೆತೆಗೆಯಿರಿ. 
  7. ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಕರಿಬೇವಿನ ಒಗ್ಗರಣೆ ಕೊಡಿ. 
  8. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

Related Posts Plugin for WordPress, Blogger...