Vidyarthi bhavana style chutney | ವಿದ್ಯಾರ್ಥಿ ಭವನ ಶೈಲಿಯ ಕಾಯಿ ಚಟ್ನಿ
ವಿದ್ಯಾರ್ಥಿ ಭವನ ಶೈಲಿಯ ಚಟ್ನಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ತೆಂಗಿನ ತುರಿ
- 1/2 ಕಪ್ ಹುರಿಗಡಲೆ ಅಥವಾ ಕಡ್ಲೆ ಪಪ್ಪು
- 4 ಹಸಿರು ಮೆಣಸಿನಕಾಯಿ
- 4 ಕಡ್ಡಿ ಕೊತ್ತಂಬರಿ ಸೊಪ್ಪು
- 1 ಸೆಮೀ ಉದ್ದದ ಶುಂಠಿ
- ಸ್ವಲ್ಪ ಹುಣಿಸೆ ಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಟಿಸ್ಪೂನ್ ಎಣ್ಣೆ
- 4 ಕರಿಬೇವಿನ ಎಲೆ
- 1/4 ಟಿಸ್ಪೂನ್ ಸಾಸಿವೆ
- ಒಂದು ಚಿಟಿಕೆ ಇಂಗು
ವಿದ್ಯಾರ್ಥಿ ಭವನ ಶೈಲಿಯ ಚಟ್ನಿ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಹಸಿಮೆಣಸಿನಕಾಯಿ ಮತ್ತು 2 ಕಡ್ಡಿ ಕೊತ್ತಂಬರಿ ಸೊಪ್ಪನ್ನು ಒಂದು ಚಮಚ ಎಣ್ಣೆ ಹಾಕಿ ಹುರಿಯಿರಿ.
- ನಂತರ ಮಿಕ್ಸಿ ಜಾರಲ್ಲಿ ಹುರಿಗಡಲೆ, ತೆಂಗಿನ ತುರಿ, ಹುರಿದ ಪದಾರ್ಥಗಳು, ಹುಣಿಸೆ ಹಣ್ಣು, ಶುಂಠಿ ಮತ್ತು ಉಪ್ಪನ್ನು ತೆಗೆದುಕೊಳ್ಳಿ.
- ನೀರು ಹಾಕದೆ ಪುಡಿಮಾಡಿಕೊಳ್ಳಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಕೊನೆಯಲ್ಲಿ ಒಂದೆರಡು ಕಡ್ಡಿ ಕೊತ್ತಂಬರಿ ಸೊಪ್ಪು ಸೇರಿಸಿ ಅರೆಯಿರಿ.
- ಒಂದು ಬಟ್ಟಲಿಗೆತೆಗೆಯಿರಿ.
- ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಕರಿಬೇವಿನ ಒಗ್ಗರಣೆ ಕೊಡಿ.
- ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ