Kobbari saaru recipe in Kannada | ಕೊಬ್ಬರಿ ಸಾರು ಮಾಡುವ ವಿಧಾನ
ಕೊಬ್ಬರಿ ಸಾರು ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1/2 ಕಪ್ ಒಣಕೊಬ್ಬರಿ
- 1 ಟೀಸ್ಪೂನ್ ಕಾಳುಮೆಣಸು
- 1 ಟೀಸ್ಪೂನ್ ಜೀರಿಗೆ
- 2 - 4 ಒಣಮೆಣಸಿನಕಾಯಿ
- 10 - 12 ಎಸಳು ಬೆಳ್ಳುಳ್ಳಿ
- 1/4 ಟೀಸ್ಪೂನ್ ಅರಿಶಿನ
- ಉಪ್ಪು ರುಚಿಗೆ ತಕ್ಕಷ್ಟು
- ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಟೀಸ್ಪೂನ್ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1/2 ಚಮಚ ಜೀರಿಗೆ
- 1 ಒಣಮೆಣಸಿನಕಾಯಿ
- 10 - 12 ಎಸಳು ಬೆಳ್ಳುಳ್ಳಿ
- 5 - 6 ಕರಿಬೇವಿನ ಎಲೆ
- 1 ಟೇಬಲ್ ಚಮಚ ಎಣ್ಣೆ
ಕೊಬ್ಬರಿ ಸಾರು ಮಾಡುವ ವಿಧಾನ:
- ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ, ಕಾಳುಮೆಣಸು ಮತ್ತು ಜೀರಿಗೆಯನ್ನು ಹಾಕಿ ಹುರಿಯಿರಿ.
- ನಂತರ ಒಣಮೆಣಸಿನಕಾಯಿಯನ್ನು ಸೇರಿಸಿ ಹುರಿಯಿರಿ.
- ಆಮೇಲೆ ಸಿಪ್ಪೆ ತೆಗೆದು ಕತ್ತರಿಸಿದ ಬೆಳ್ಳುಳ್ಳಿ ಮತ್ತು ಒಣಕೊಬ್ಬರಿ ಸೇರಿಸಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಬಿಸಿ ಅರಿದಮೇಲೆ ಮಿಕ್ಸಿ ಜಾರಿಗೆ ಹಾಕಿ.
- ಅರಿಶಿನ ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. ಮಸಾಲೆ ಪೇಸ್ಟ್ ತಯಾರಾಯಿತು.
- ಇನ್ನೊಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿ.
- ಒಣಮೆಣಸಿನಕಾಯಿ, ಕತ್ತರಿಸಿದ ಬೆಳ್ಳುಳ್ಳಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ.
- ಉರಿ ಕಡಿಮೆ ಮಾಡಿ ಅರೆದ ಮಸಾಲೆ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ.
- ಉಪ್ಪು ಸೇರಿಸಿ ಕುದಿಸಿ. ನಿಮ್ಮ ರುಚಿಗೆ ತಕ್ಕಂತೆ ಉಪ್ಪು ಹುಳಿ ಮತ್ತು ಬೆಲ್ಲ ಹೊಂದಿಸಿಕೊಳ್ಳಿ.
- ಒಂದು ನಿಮಿಷ ಚೆನ್ನಾಗಿ ಕುದಿಸಿ.
- ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
- ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ