ಶುಕ್ರವಾರ, ಜುಲೈ 12, 2019

Cooked rice paddu recipe in Kannada | ಅನ್ನ ಬಳಸಿ ಪಡ್ದು ಮಾಡುವ ವಿಧಾನ

Cooked rice paddu recipe in Kannada

Cooked rice paddu recipe in Kannada | ಅನ್ನ ಬಳಸಿ ಪಡ್ದು ಮಾಡುವ ವಿಧಾನ 

ಅನ್ನ ಬಳಸಿ ಪಡ್ದು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅನ್ನ
  2. 2 ಟೇಬಲ್ ಸ್ಪೂನ್ ರವೆ
  3. 1 ಟೇಬಲ್ ಸ್ಪೂನ್ ಮೊಸರು
  4. 1/2 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  5. 1 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು 
  6. 7 - 8 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  7. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. ಚಿಟಿಕೆ ಅರಿಶಿನ 
  9. ಚಿಟಿಕೆ ಇಂಗು
  10. ಎಣ್ಣೆ ಪಡ್ಡು ಮಾಡಲು 
  11. ಉಪ್ಪು ರುಚಿಗೆ ತಕ್ಕಷ್ಟು.

ಅನ್ನ ಬಳಸಿ ಪಡ್ದು ಮಾಡುವ ವಿಧಾನ:

  1. ಅನ್ನವನ್ನು ಹಿಸುಕಿ ಮುದ್ದೆ ಮಾಡಿ. ಅಥವಾ ಮಿಕ್ಸಿಯಲ್ಲಿ ಒಂದೆರಡು ಟೇಬಲ್ ಚಮಚ ನೀರು ಸೇರಿಸಿ ಅರೆದುಕೊಳ್ಳಿ. 
  2. ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನ ಕಾಯಿ, ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
  3. ಅರಿಶಿನ ಮತ್ತು ಇಂಗು ಸೇರಿಸಿ. 
  4. ನಂತ್ರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  5. ರವೆಯನ್ನು ಸೇರಿಸಿ. 
  6. ಮೊಸರು ಸೇರಿಸಿ.
  7. ಅಗತ್ಯವಿದ್ದಲ್ಲಿ ಒಂದೆರಡು ಟೇಬಲ್ ಚಮಚ ನೀರು ಸೇರಿಸಿ ಮೆತ್ತಗಿನ ಹಿಟ್ಟು ತಯಾರಿಸಿಕೊಳ್ಳಿ. 
  8. ನಂತ್ರ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ. ಮಧ್ಯದಲ್ಲಿ ಸ್ವಲ್ಪ ತಗ್ಗು ಮಾಡಿದರೆ, ಬೇಗ ಬೇಯಲು ಅನುಕೂಲ ಆಗುತ್ತದೆ.  
  9. ಪಡ್ಡು ತವಾವನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  10. ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. ಮಧ್ಯಮ ಉರಿಯಲ್ಲಿ ಬೇಯಿಸಿ. 
  11. ಸುಮಾರು ಒಂದು ನಿಮಿಷದ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  12. ಪಡ್ಡುವನ್ನು ತಿರುಗಿಸಿ ಹಾಕಿ.  ಇನ್ನೊಂದು ಬದಿಯೂ ಬೇಯಿಸಿ. ಬಿಸಿ ಅಥವಾ ತಣ್ಣಗೆ ಬಡಿಸಿ. 


ಶುಕ್ರವಾರ, ಜುಲೈ 5, 2019

Eerulli sagu recipe in Kannada | ಈರುಳ್ಳಿ ಸಾಗು ಮಾಡುವ ವಿಧಾನ

Eerulli sagu recipe in Kannada

Eerulli sagu recipe in Kannada | ಈರುಳ್ಳಿ ಸಾಗು ಮಾಡುವ ವಿಧಾನ 


ಈರುಳ್ಳಿ ಸಾಗು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 - 3 ದೊಡ್ಡ ಈರುಳ್ಳಿ
  2. 1  ಟೊಮ್ಯಾಟೋ
  3. ದೊಡ್ಡ ಚಿಟಿಕೆ ಅರಶಿನ ಪುಡಿ
  4. 2 ಟೇಬಲ್ ಚಮಚ ಅಡುಗೆ ಎಣ್ಣೆ
  5. 1/2 ಟೀಸ್ಪೂನ್ ಸಾಸಿವೆ
  6. 1 ಟೀಸ್ಪೂನ್ ಉದ್ದಿನ ಬೇಳೆ
  7. 1 ಒಣಮೆಣಸು
  8. 4 - 5 ಕರಿಬೇವಿನ ಎಲೆ
  9. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನತುರಿ
  2. 1 ಸೆಮೀ ಉದ್ದದ ಶುಂಠಿ
  3. 3 ಎಸಳು ಬೆಳ್ಳುಳ್ಳಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 1 ಟೇಬಲ್ ಸ್ಪೂನ್ ಹುರಿಗಡಲೆ 
  7. 1 ಟೀಸ್ಪೂನ್ ಗಸಗಸೆ 
  8. 1 - 2 ಹಸಿರುಮೆಣಸಿನಕಾಯಿ
  9. ಸ್ವಲ್ಪ ಚಕ್ಕೆ
  10. 4 - 5 ಲವಂಗ
  11. 1 ಏಲಕ್ಕಿ
  12. 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು
  13. ಸ್ವಲ್ಪ ಪುದಿನ ಎಲೆ (ಬೇಕಾದಲ್ಲಿ)

ಈರುಳ್ಳಿ ಸಾಗು ಮಾಡುವ ವಿಧಾನ:

  1. ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ಅರೆದು ಕೊಳ್ಳಿ.
  2. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಉದ್ದಿನ ಬೇಳೆ, ಒಣಮೆಣಸು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  3.  ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ.
  4. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ.
  5. ಟೊಮೇಟೊ ಹುರಿಯುವಾಗ, ಚಿಟಿಕೆ ಅರಿಶಿನ, ಒಂದು ಚಮಚ ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ, ಈರುಳ್ಳಿ ಮತ್ತು ಟೊಮೇಟೊ ವನ್ನು ಮೆತ್ತಗೆ ಬೇಯಿಸಿಕೊಳ್ಳಿ. 
  6. ಆಮೇಲೆ ಅರೆದ ಮಸಾಲೆ ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ. 
  7. ಬೇಕಾದಲ್ಲಿ ಉಪ್ಪು ಹೊಂದಿಸಿ. 
  8. ಐದು ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ, ಸ್ಟವ್ ಆಫ್ ಮಾಡಿ. 


ಬುಧವಾರ, ಜುಲೈ 3, 2019

Tomato rice recipe in Kannada | ಟೊಮೇಟೊ ರೈಸ್ ಮಾಡುವ ವಿಧಾನ

Tomato rice recipe in Kannada

Tomato rice recipe in Kannada | ಟೊಮೇಟೊ ರೈಸ್ ಮಾಡುವ ವಿಧಾನ

ಟೊಮೇಟೊ ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. 2 - 3 ಟೊಮ್ಯಾಟೋ
  3. 1/2 ಟೀಸ್ಪೂನ್ ಜೀರಿಗೆ
  4. 1/2 ಟೀಸ್ಪೂನ್ ಸಾಸಿವೆ 
  5. 1 ಚಮಚ ತುರಿದ ಶುಂಠಿ
  6. 1 ದೊಡ್ಡ ಈರುಳ್ಳಿ
  7. 1 - 2 ಹಸಿರುಮೆಣಸಿನಕಾಯಿ
  8. ಸ್ವಲ್ಪ ಕರಿಬೇವು
  9. 1/4 ಟೀಸ್ಪೂನ್ ಅರಶಿನ ಪುಡಿ
  10. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  11. ಸ್ವಲ್ಪ ಮೆಂತೆ ಸೊಪ್ಪು ಅಥವಾ ಒಂದು ಟೇಬಲ್ ಚಮಚ ಕಸೂರಿ ಮೇಥಿ (ಬೇಕಾದಲ್ಲಿ)
  12. 3 ಟೇಬಲ್ ಚಮಚ ಅಡುಗೆ ಎಣ್ಣೆ 
  13. 2 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
  14. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು

ಟೊಮೇಟೊ ರೈಸ್ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದಿಟ್ಟುಕೊಳ್ಳಿ. 
  2. ಟೊಮ್ಯಾಟೋ, ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ. ಕತ್ತರಿಸಿದ ಟೊಮ್ಯಾಟೊವನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದಿಟ್ಟುಕೊಳ್ಳಿ. 
  3. ಈಗ ಒಂದು ಕುಕ್ಕರ್ ತೆಗೆದುಕೊಂಡು ಎಣ್ಣೆ ಬಿಸಿಮಾಡಿ. ಜೀರಿಗೆ ಮತ್ತು ಸಾಸಿವೆ ಹಾಕಿ ಹುರಿಯಿರಿ. 
  4. ಜೀರಿಗೆ ಸಿಡಿದ ಕೂಡಲೇ ಸಣ್ಣಗೆ ಕತ್ತರಿಸಿದ ಶುಂಠಿ, ಕರಿಬೇವು ಮತ್ತು ಹಸಿರುಮೆಣಸಿನಕಾಯಿ ಹಾಕಿ ಹುರಿಯಿರಿ.
  5. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ಹಸಿ ಮೆಂತೆ ಸೊಪ್ಪು ಹಾಕುವುದಾದಲ್ಲಿ ಈರುಳ್ಳಿ ಜೊತೆ ಹಾಕಿ ಹುರಿಯಿರಿ.
  6. ಈರುಳ್ಳಿ ಮೆತ್ತಗಾದ ಕೂಡಲೇ ತೊಳೆದಿಟ್ಟ ಅಕ್ಕಿ ಹಾಕಿ ಒಂದು ನಿಮಿಷ ಹುರಿಯಿರಿ.
  7. ಆಮೇಲೆ ಟೊಮೇಟೊ ಪೇಸ್ಟ್, ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿಯಿರಿ. 
  8. ಆಮೇಲೆ ಅಚ್ಚಖಾರದ ಪುಡಿ, ಗರಂ ಮಸಾಲಾ ಮತ್ತು ಕೊತ್ತಂಬರಿ ಪುಡಿ ಸೇರಿಸಿ ಮಗುಚಿ.
  9. ಒಮ್ಮೆ ಚೆನ್ನಾಗಿ ಮಗುಚಿ. ಕಸೂರಿ ಮೇತಿ ಅಥವಾ ಒಣಗಿದ ಮೆಂತೆ ಸೊಪ್ಪು ಸೇರಿಸಿ. 
  10. ನಂತರ ಎರಡು ಕಪ್ ನೀರು ಸೇರಿಸಿ (ಸುಮಾರು ಒಂದು ಕಪ್ ನಷ್ಟು ಟೊಮೇಟೊ ಪೇಸ್ಟ್ ಹಾಕಿದ ಕಾರಣ).
  11. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
  12. ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ, ಸವಿದು ಆನಂದಿಸಿ. 

Related Posts Plugin for WordPress, Blogger...