ಶುಕ್ರವಾರ, ಫೆಬ್ರವರಿ 15, 2019

Quinoa upma recipe in Kannada | ಕಿನ್ವಾ ಉಪ್ಪಿಟ್ಟು ಮಾಡುವ ವಿಧಾನ

Quinoa upma recipe in Kannada

Quinoa upma recipe in Kannada | ಕಿನ್ವಾ ಉಪ್ಪಿಟ್ಟು ಮಾಡುವ ವಿಧಾನ 

ಕಿನ್ವಾ ಉಪ್ಪಿಟ್ಟು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಕಿನ್ವಾ
  2. 2 ಕಪ್ ನೀರು + 1/4 ಕಪ್ ತರಕಾರಿ ಬೇಯಿಸಲು
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೀಸ್ಪೂನ್ ಕಡ್ಲೆಬೇಳೆ
  6. 1 ದೊಡ್ಡ ಈರುಳ್ಳಿ
  7. 1 ಟೊಮ್ಯಾಟೋ 
  8. 1 ಸಣ್ಣ ಕ್ಯಾರಟ್
  9. 5 - 6 ಬೀನ್ಸ್
  10. 1/4 ಕಪ್ ಹಸಿ ಬಟಾಣಿ
  11. 1-2 ಹಸಿರು ಮೆಣಸಿನಕಾಯಿ
  12. 7 - 8 ಕರಿ ಬೇವಿನ ಎಲೆ
  13. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  14. 1/4 ಟೀಸ್ಪೂನ್ ಅರಶಿನ ಪುಡಿ
  15. 2 ಟೇಬಲ್ ಚಮಚ ಅಡುಗೆ ಎಣ್ಣೆ
  16. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
  17. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  18. 1/4 ಕಪ್ ತೆಂಗಿನತುರಿ

ಕಿನ್ವಾ ಉಪ್ಪಿಟ್ಟು ಮಾಡುವ ವಿಧಾನ:

  1. ತರಕಾರಿಗಳನ್ನು ತೊಳೆದು, ಕತ್ತರಿಸಿಟ್ಟುಕೊಳ್ಳಿ. ಹಾಗೇ ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟು ಕೊಳ್ಳಿ. ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  2. ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಬೀನ್ಸ್, ಕ್ಯಾರಟ್  ಮತ್ತು ಹಸಿ ಬಟಾಣಿಯನ್ನು 1/4 ಕಪ್ ನೀರಿನಲ್ಲಿ ಬೇಯಿಸಿಕೊಳ್ಳಿ.  
  3. ಕಿನ್ವಾ ವನ್ನು ಐದು ನಿಮಿಷ ನೀರಿನಲ್ಲಿ ನೆನೆಸಿ, ಚೆನ್ನಾಗಿ ತೊಳೆದು, ನೀರು ಬಸಿದಿಟ್ಟುಕೊಳ್ಳಿ.
  4. ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  5. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. 
  6. ನಂತರ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  7. ಇಂಗು ಮತ್ತು ಅರಶಿನ ಪುಡಿ ಸೇರಿಸಿ. 
  8. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಹಾಕಿ. ಮತ್ತು  ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
  9. ಸುಮಾರು 2 ಕಪ್ ನೀರು ಹಾಕಿ, ಉಪ್ಪು ಸೇರಿಸಿ, ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ತೊಳೆದಿಟ್ಟ ಕಿನ್ವಾ ಹಾಕಿ ಮಗುಚಿ. 
  10. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 
  11. ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಸ್ಟವ್ ಆಫ್ ಮಾಡಿ, ಬಡಿಸಿ.


ಮಂಗಳವಾರ, ಫೆಬ್ರವರಿ 12, 2019

Tomato bellulli gojju recipe in Kannada | ಟೊಮೇಟೊ ಬೆಳ್ಳುಳ್ಳಿ ಗೊಜ್ಜು ಮಾಡುವ ವಿಧಾನ

Tomato bellulli gojju recipe in Kannada

Tomato bellulli gojju recipe in Kannada | 5 ನಿಮಿಷದಲ್ಲಿ ಟೊಮೇಟೊ ಬೆಳ್ಳುಳ್ಳಿ ಗೊಜ್ಜು ಮಾಡುವ ವಿಧಾನ

ಟೊಮೇಟೊ ಬೆಳ್ಳುಳ್ಳಿ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 3 ದೊಡ್ಡ ಟೊಮ್ಯಾಟೋ
  2. 1/2 ಟೀಸ್ಪೂನ್ ಜೀರಿಗೆ
  3. 1/2 ಟೀಸ್ಪೂನ್ ಸಾಸಿವೆ
  4. 4-5 ಕರಿಬೇವಿನ ಎಲೆ
  5. 6 - 7 ಬೇಳೆ ಜಜ್ಜಿದ ಬೆಳ್ಳುಳ್ಳಿ
  6. 1 - 2 ಹಸಿರು ಮೆಣಸಿನಕಾಯಿ
  7. ದೊಡ್ಡ ಚಿಟಿಕೆ ಅರಿಶಿನ
  8. 1 ಗೋಲಿ ಗಾತ್ರದ ಹುಣಿಸೆಹಣ್ಣು
  9. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  10. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  11. 1/4 - 1/2 ಟೀಸ್ಪೂನ್ ಜಜ್ಜಿದ ಕಾಳುಮೆಣಸು
  12. 1 ಟೇಬಲ್ ಚಮಚ ಅಡುಗೆ ಎಣ್ಣೆ
  13. ಉಪ್ಪು ರುಚಿಗೆ ತಕ್ಕಷ್ಟು.

ಟೊಮೇಟೊ ಬೆಳ್ಳುಳ್ಳಿ ಗೊಜ್ಜು ಮಾಡುವ ವಿಧಾನ:

  1. ಟೊಮೆಟೊ ತೊಳೆದು ಸಣ್ಣದಾಗಿ ಕತ್ತರಿಸಿ. ಬೇರೆ ಪದಾರ್ಥಗಳನ್ನು ಎತ್ತಿಟ್ಟುಕೊಳ್ಳಿ. 
  2. ಒಂದು ಬಾಣಲೆಯನ್ನು ಬಿಸಿಮಾಡಿ, ಎಣ್ಣೆ, ಸಾಸಿವೆ ಮತ್ತು  ಜೀರಿಗೆ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಕೂಡಲೇ ಹಸಿರು ಮೆಣಸಿನಕಾಯಿ, ಜಜ್ಜಿದ ಬೆಳ್ಳಿಳ್ಳಿ ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. 
  4. ನಂತರ ಕತ್ತರಿಸಿದ ಟೊಮೆಟೊ ಸೇರಿಸಿ. 
  5. ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಒಂದು ನಿಮಿಷ ಮಗುಚಿ.
  6. ಆಮೇಲೆ ಹುಣಸೆ ರಸ ಮತ್ತು ಬೆಲ್ಲ ಸೇರಿಸಿ ಕುದಿಸಿ. 
  7. ಮುಚ್ಚಳ ಮುಚ್ಚಿ ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  8. ಕೊನೆಯಲ್ಲಿ ಕಾಳುಮೆಣಸಿನ ಪುಡಿ ಹಾಕಿ. 
  9. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ. ಒಂದು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ. 
  10. ಬಿಸಿ ಅನ್ನದೊಂದಿಗೆ ಬಡಿಸಿ. 

ಶುಕ್ರವಾರ, ಫೆಬ್ರವರಿ 8, 2019

Vanilla mug cake recipe in Kannada | ವೆನಿಲ್ಲಾ ಮಗ್ ಕೇಕ್ ಮಾಡುವ ವಿಧಾನ

Vanilla mug cake recipe in Kannada

Vanilla mug cake recipe in Kannada | ವೆನಿಲ್ಲಾ ಮಗ್ ಕೇಕ್ ಮಾಡುವ ವಿಧಾನ 

ವೆನಿಲ್ಲಾ ಮಗ್ ಕೇಕ್ ವಿಡಿಯೋ

ಬೇಕಾಗುವ ಪದಾರ್ಥಗಳು: (1 ಟೇಬಲ್ ಚಮಚ = 15ಎಂಎಲ್ )

  1. 4  ಟೇಬಲ್ ಚಮಚ ಮೈದಾ ಹಿಟ್ಟು
  2. 3 ಟೇಬಲ್ ಚಮಚ ಸಕ್ಕರೆ 
  3. 1/4 ಟೀಸ್ಪೂನ್ ಬೇಕಿಂಗ್ ಪೌಡರ್
  4. 3 ಟೇಬಲ್ ಚಮಚ ಹಾಲು
  5. 2 ಟೇಬಲ್ ಕರಗಿಸಿದ ಚಮಚ ಬೆಣ್ಣೆ
  6. 1/4 ಟೀಸ್ಪೂನ್ ವೆನಿಲ್ಲಾ ಎಸೆನ್ಸ್ (ನಿಮ್ಮಿಷ್ಟದ ಯಾವುದೇ ಎಸೆನ್ಸ್ ಬಳಸಬಹುದು)

ವೆನಿಲ್ಲಾ ಮಗ್ ಕೇಕ್ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಸಕ್ಕರೆ ಮತ್ತು ಬೇಕಿಂಗ್ ಪೌಡರ್ ತೆಗೆದುಕೊಳ್ಳಿ.
  2. ಅದಕ್ಕೆ ಹಾಲು, ಕರಗಿಸಿದ ಬೆಣ್ಣೆ ಮತ್ತು ವೆನಿಲ್ಲಾ ಎಸೆನ್ಸ್ ಹಾಕಿ ಕಲಸಿ. 
  3. ವಿಸ್ಕ್ ಅಥವಾ ಫೋರ್ಕ್ ಸಹಾಯದಿಂದ ಚೆನ್ನಾಗಿ ಮಿಶ್ರ ಮಾಡಿ.
  4. ಅದನ್ನು ಬೆಣ್ಣೆ ಸವರಿದ ಮಗ್ ಗೆ ಹಾಕಿ ಮೈಕ್ರೋವೇವ್ ಓವೆನ್ ನಲ್ಲಿ ಒಂದು ನಿಮಿಷ ಹೈ ಪವರ್ (700w) ನಲ್ಲಿ ಬೇಯಿಸಿ. ಓವೆನ್ ನಿಂದ ಓವೆನ್ ಗೆ ಸಮಯ ಬದಲಾಗಬಹುದು. 
  5. ಒಂದು ಕಡ್ಡಿ ಅಥವಾ ಫೋರ್ಕ್ ನ್ನು ಚುಚ್ಚಿ ಕೇಕ್ ಸಂಪೂರ್ಣ ಬೆಂದಿದೆಯೆಂದು ಖಾತ್ರಿ ಪಡಿಸಿಕೊಳ್ಳಿ. ಚುಚ್ಚಿದ ಕಡ್ಡಿಗೆ ಹಸಿ ಹಿಟ್ಟು ಅಂಟಿರಬಾರದು. 
  6. ಬೇಯಿಸಿದ ಕೇಕ್ ಸ್ವಲ್ಪ ಬಿಸಿ ಆರುವವರೆಗೆ ಕಾಯಿರಿ. ನಂತರ ನಿಮ್ಮಿಷ್ಟದಂತೆ ಅಲಂಕಾರ ಮಾಡಿ ಕೂಡಲೇ ತಿನ್ನಲು ಕೊಡಿ. 
  7. ಈ ಕೇಕ್ ನ್ನು ಸ್ವಲ್ಪ ಹೊತ್ತು ಬಿಟ್ಟು ತಿನ್ನುತ್ತೀರಾದರೆ, ಕೇಕ್ ನ್ನು ಮಗ್ ನಿಂದ ತೆಗೆದು, ಕೇಕ್ ನ ಸುತ್ತಲೂ ಸಕ್ಕರೆ ನೀರನ್ನು ಹಚ್ಚಿ.(ಸಕ್ಕರೆ ನೀರು ಮಾಡಲು, 1 ಚಮಚ ಸಕ್ಕರೆ ಯನ್ನು 2 ಚಮಚ ನೀರಿನಲ್ಲಿ ಕರಗಿಸಿ). ಇಲ್ಲವಾದಲ್ಲಿ ಕೇಕ್ ಸ್ವಲ್ಪ ಗಟ್ಟಿ ಎನಿಸಬಹುದು. 

Related Posts Plugin for WordPress, Blogger...