ಗುರುವಾರ, ಜೂನ್ 14, 2018

Capsicum ricebath recipe in Kannada | ದೊಣ್ಣೆಮೆಣಸು ರೈಸ್ ಬಾತ್ ಮಾಡುವ ವಿಧಾನ

Capsicum ricebath recipe in Kannada

Capsicum ricebath recipe in Kannada | ದೊಣ್ಣೆಮೆಣಸು ರೈಸ್ ಬಾತ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 2 ದೊಡ್ಡ ದೊಣ್ಣೆಮೆಣಸು
  3. 4 ಟೇಬಲ್ ಚಮಚ ಅಡುಗೆ ಎಣ್ಣೆ 
  4. 1/2 ಚಮಚ ಸಾಸಿವೆ 
  5. 1 ಟೀಸ್ಪೂನ್ ಉದ್ದಿನ ಬೇಳೆ 
  6. 1 ಟೀಸ್ಪೂನ್ ಕಡಲೆಬೇಳೆ 
  7. 4 - 5 ಕರಿಬೇವಿನ ಎಲೆ 
  8. 2 ಟೇಬಲ್ ಚಮಚ ನೆಲಗಡಲೆ
  9. 1/2 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  10. 1/2 ನೆಲ್ಲಿಕಾಯಿ ಗಾತ್ರದ ಬೆಲ್ಲ
  11. 1/4 ಟೀಸ್ಪೂನ್ ಅರಶಿನ ಪುಡಿ
  12. 1/4 ಟೀಸ್ಪೂನ್ ಇಂಗು 
  13. 2 ಟೇಬಲ್ ಚಮಚ ವಾಂಗೀಬಾತ್ ಪುಡಿ (ಇಲ್ಲದಿದ್ದಲ್ಲಿ ಕೆಳಗೆ ನೀಡಿರುವ ಪದಾರ್ಥಗಳನ್ನು ಹುರಿದು ಪುಡಿ ಮಾಡಿಕೊಳ್ಳಿ)
  14. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು 
  15. 2 ಟೇಬಲ್ ಚಮಚ ತೆಂಗಿನತುರಿ
  16. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:( ವಾಂಗೀಬಾತ್ ಪುಡಿ ಇಲ್ಲದಿದ್ದಲ್ಲಿ)

  1. 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
  2. 2 ಟೀಸ್ಪೂನ್ ಉದ್ದಿನ ಬೇಳೆ
  3. 2 ಟೀಸ್ಪೂನ್ ಕಡಲೆಬೇಳೆ 
  4. 4 ಟೀಸ್ಪೂನ್ ಕೊತ್ತಂಬರಿ ಬೀಜ
  5. 1cm ಉದ್ದದ ಚಕ್ಕೆ 
  6. 3 - 4 ಲವಂಗ 
  7. 1/4 ಟೀಸ್ಪೂನ್ ಗಸಗಸೆ
  8. 2 - 4 ಟೇಬಲ್ ಚಮಚ ತೆಂಗಿನ ತುರಿ

ದೊಣ್ಣೆಮೆಣಸು ರೈಸ್ ಬಾತ್ ಮಾಡುವ ವಿಧಾನ:

  1. ವಾಂಗೀಬಾತ್ ಪುಡಿ ಇಲ್ಲದಿದ್ದಲ್ಲಿ "ಮಸಾಲೆ ಪುಡಿ" ಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿದು ಪುಡಿಮಾಡಿಟ್ಟುಕೊಳ್ಳಿ. 
  2. ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ. 
  3. ದೊಣ್ಣೆಮೆಣಸನ್ನು ತೊಳೆದು, ಸಣ್ಣಗೆ ಕತ್ತರಿಸಿಟ್ಟು ಕೊಳ್ಳಿ. ಈರುಳ್ಳಿಯನ್ನೂ ಕತ್ತರಿಸಿಟ್ಟುಕೊಳ್ಳಿ. 
  4. ನಂತರ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ. 
  5. ನೆಲಗಡಲೆ ಹಾಕಿ ಹುರಿಯಿರಿ. 
  6. ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  7. ಇಂಗು ಮತ್ತು ಅರಿಶಿನ ಪುಡಿ ಸೇರಿಸಿ. 
  8. ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ.
  9. ನಂತರ ಹೆಚ್ಚಿದ ದೊಣ್ಣೆಮೆಣಸು ಹಾಕಿ ಒಂದೈದು ನಿಮಿಷ ಹುರಿಯಿರಿ. 
  10. ನಂತರ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಸೇರಿಸಿ. 
  11. ಆಗಾಗ್ಯೆ ಮಗುಚುತ್ತಾ  ದೊಣ್ಣೆಮೆಣಸನ್ನು ಮೆತ್ತಗೆ ಬೇಯಿಸಿಕೊಳ್ಳಿ. 
  12. ಕೊನೆಯಲ್ಲಿ ಮಸಾಲೆ ಪುಡಿ ಹಾಕಿ. 
  13. ಕಾಯಿತುರಿ ಮತ್ತು ಕೊತ್ತಂಬರಿ ಸೂಪ್ಪು ಹಾಕಿ. ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ. 
  14. ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಬಿಸಿ ಬಿಸಿಯಾಗಿ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಜೂನ್ 12, 2018

Mavinakayi thokku recipe in Kannada | ಮಾವಿನಕಾಯಿ ತೊಕ್ಕು ಮಾಡುವ ವಿಧಾನ

Mavinakayi thokku recipe in Kannada

Mavinakayi thokku recipe in Kannada | ಮಾವಿನಕಾಯಿ ತೊಕ್ಕು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಮಾಧ್ಯಮ ಗಾತ್ರದ ಮಾವಿನಕಾಯಿ
  2. 1 - 2 ಟೇಬಲ್ ಚಮಚ ಅಚ್ಚಖಾರದ ಪುಡಿ
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 2 ಟೇಬಲ್ ಚಮಚ ಉಪ್ಪು  ಅಥವಾ ನಿಮ್ಮ ರುಚಿಗೆ ತಕ್ಕಷ್ಟು

ಹುರಿಯಲು ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಮೆಂತೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1/4 ಟೀಸ್ಪೂನ್ ಇಂಗು
  3. 4 - 5 ಕರಿಬೇವಿನ ಎಲೆ
  4. 4 ಟೇಬಲ್ ಚಮಚ ಎಣ್ಣೆ

ಮಾವಿನಕಾಯಿ ತೊಕ್ಕು ಮಾಡುವ ವಿಧಾನ:

  1. ಮಾವಿನಕಾಯಿಯನ್ನು ತೊಳೆದು ನೀರಾರಿಸಿ, ತುರಿದಿಟ್ಟುಕೊಳ್ಳಿ. ಬೇಕಾದಲ್ಲಿ ಸಿಪ್ಪೆ ತೆಗೆಯಬಹುದು. ನಾನು ತೆಗೆಯಲಿಲ್ಲ. 
  2. ಒಂದು ಬಾಣಲೆಯಲ್ಲಿ ಸಾಸಿವೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ಪುಡಿ ಮಾಡಿಟ್ಟು ಕೊಳ್ಳಿ.
  3. ನಂತರ ಅದೇ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  4. ಅದಕ್ಕೆ ತುರಿದ ಮಾವಿನಕಾಯಿಯನ್ನು ಸೇರಿಸಿ. 
  5. ಅಚ್ಚಖಾರದಪುಡಿ, ಅರಿಶಿನ, ಹುರಿದು ಪುಡಿಮಾಡಿದ ಮೆಂತೆ+ಸಾಸಿವೆ ಮತ್ತು ಉಪ್ಪು ಹಾಕಿ. 
  6.  ಸಣ್ಣ ಉರಿಯಲ್ಲಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಮಗುಚಿ. 6 - 7 ನಿಮಿಷ ಬೇಕಾಗಬಹುದು. 
  7. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 
  8. ಮಾವಿನಕಾಯಿ ತೊಕ್ಕು ಸವಿಯಲು ಸಿದ್ಧ. ಬಿಸಿ ಅನ್ನ ಅಥವಾ ಮೊಸರನ್ನದೊಂದಿಗೆ ಬಡಿಸಿ. 

ಸೋಮವಾರ, ಜೂನ್ 11, 2018

Broken wheat bisi bele bath Recipe in Kannada | ಗೋಧಿ ನುಚ್ಚು ಬಿಸಿ ಬೇಳೆ ಬಾತ್ ಮಾಡುವ ವಿಧಾನ

Broken wheat bisi bele bath Recipe in Kannada

Broken wheat bisi bele bath Recipe in Kannada | ಗೋಧಿ ನುಚ್ಚು ಬಿಸಿ ಬೇಳೆ ಬಾತ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್)

  1. 1/4 ಕಪ್ ಹೆಸರುಬೇಳೆ
  2. 1/4 ಕಪ್ ತೊಗರಿಬೇಳೆ
  3. 3/4 ಕಪ್ ಗೋಧಿ ನುಚ್ಚು
  4. 2 ಟೇಬಲ್ ಸ್ಪೂನ್  ನೆಲಗಡಲೆ ಅಥವಾ ಶೇಂಗಾ
  5. 5 ಬೀನ್ಸ್
  6. 1 ಸಣ್ಣ ಕ್ಯಾರೆಟ್
  7. 1 ಸಣ್ಣ ಆಲೂಗಡ್ಡೆ
  8. 1 ಸಣ್ಣ ಟೊಮೇಟೊ
  9. 2 ಟೇಬಲ್ ಸ್ಪೂನ್ ಹಸಿ ಅಥವಾ ನೆನೆಸಿದ ಬಟಾಣಿ
  10. 1 ಟೊಮ್ಯಾಟೋ
  11. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೆ ಹಣ್ಣು
  12. 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
  13. ದೊಡ್ಡ ಚಿಟಿಕೆ ಅರಿಶಿನ ಪುಡಿ
  14. 2 ಟೇಬಲ್ ಸ್ಪೂನ್ ಬಿಸಿಬೇಳೆ ಬಾತ್ ಪುಡಿ
  15. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಕಡ್ಲೆ ಬೇಳೆ
  3. 2 ಟೀಸ್ಪೂನ್ ಉದ್ದಿನ ಬೇಳೆ
  4. 8-10 ಗೋಡಂಬಿ
  5. 7 - 8 ಕರಿಬೇವಿನ ಎಲೆ
  6. ದೊಡ್ಡ ಚಿಟಿಕೆ ಇಂಗು
  7. ದೊಡ್ಡ ಚಿಟಿಕೆ ಅರಿಶಿನ
  8. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ / ತುಪ್ಪ

ಗೋಧಿ ನುಚ್ಚು ಬಿಸಿ ಬೇಳೆ ಬಾತ್ ಮಾಡುವ ವಿಧಾನ:

  1. ಬೀನ್ಸ್, ಕ್ಯಾರಟ್ ಮತ್ತು ಆಲೂಗಡ್ಡೆಯನ್ನು ಕತ್ತರಿಸಿಟ್ಟುಕೊಳ್ಳಿ. 
  2. ಒಂದು ಪಾತ್ರೆಯಲ್ಲಿ ಹೆಸರುಬೇಳೆ, ತೊಗರಿಬೇಳೆ ಮತ್ತು ನೆಲಗಡಲೆಯನ್ನು ತೊಳೆದು ಬೇಯಿಸಿ.  
  3. ಅದೇ ಕುಕ್ಕರ್ ಗೆ ಕತ್ತರಿಸಿದ ತರಕಾರಿ, ಕತ್ತರಿಸಿದ ಟೊಮೇಟೊ, ಹಸಿ ಬಟಾಣಿ ಮತ್ತು ಗೋಧಿ ನುಚ್ಚು ಸೇರಿಸಿ. 2 ವಿಷಲ್ ಮಾಡಿ ಬೇಯಿಸಿ.
  4. ಒಂದು ಬಾಣಲೆ ತೆಗೆದುಕೊಂಡು ಎಣ್ಣೆ, ಶೇಂಗಾ, ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಬಳಸಿಕೊಂಡು ಒಗ್ಗರಣೆ ಮಾಡಿ. 
  5. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಕರಿಬೇವಿನ ಸೊಪ್ಪು ಸೇರಿಸಿ. ಇಂಗು ಮತ್ತು ಅರಿಶಿನ ಪುಡಿ ಸೇರಿಸಿ. 
  6. ಬೇಕಾದಲ್ಲಿ ಈರುಳ್ಳಿ ಮತ್ತು ಕಾಪ್ಸಿಕಮ್ ಹಾಕಿ ಹುರಿಯಬಹುದು. ನಾನು ಹಾಕಲಿಲ್ಲ.  
  7. ಕೂಡಲೇ ಬಿಸಿಬೇಳೆ ಬಾತ್ ಪುಡಿ, ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ. 
  8. ಸ್ಟೋವ್ ಆಫ್ ಮಾಡಿ. 
  9. ನಂತರ ಬೇಯಿಸಿದ ತರಕಾರಿ, ಗೋಧಿ ನುಚ್ಚು ಮತ್ತು ಬೇಳೆಯನ್ನು ಹಾಕಿ. ಬೇಕಾದಷ್ಟು ನೀರು ಸೇರಿಸಿ, ಚೆನ್ನಾಗಿ ಮಗುಚಿ, ಒಂದು ಕುದಿ ಬರಿಸಿ. ಸ್ಟವ್ ಆಫ್ ಮಾಡಿ. ಬಿಸಿ ಬಿಸಿಯಾಗಿ ಸವಿದು ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...