ಶುಕ್ರವಾರ, ಆಗಸ್ಟ್ 4, 2017

Menthe dose recipe in Kannada | ಮೆಂತೆ ದೋಸೆ ಮಾಡುವ ವಿಧಾನ

Menthe dose recipe in Kannada

Menthe dose recipe in Kannada | ಮೆಂತೆ ದೋಸೆ ಮಾಡುವ ವಿಧಾನ 

ಮೆಂತೆ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 2 ಕಪ್ ದೋಸೆ ಅಕ್ಕಿ
  2. 4 - 6 ಟೀಸ್ಪೂನ್ ಮೆಂತ್ಯ
  3. ಎಣ್ಣೆ ದೋಸೆ ಮಾಡಲು
  4. ಉಪ್ಪು ರುಚಿಗೆ ತಕ್ಕಷ್ಟು.

ಮೆಂತೆ ದೋಸೆ ಮಾಡುವ ವಿಧಾನ:

  1. ಅಕ್ಕಿ  ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ಅಕ್ಕಿ ಮತ್ತು ಮೆಂತೆಯನ್ನು ಬೇಕಾದಷ್ಟು ನೀರು ಸೇರಿಸಿ, ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  3. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ. ಗಮನಿಸಿ, ಉದ್ದಿನ ದೋಸೆಯಂತೆ ಹಿಟ್ಟು ಮೇಲೆ ಬರುವುದಿಲ್ಲ. ಹಿಟ್ಟು ಸರಿಯಾಗಿ ಹುದುಗದಿದ್ದರೆ ದೋಸೆ ಕಹಿಯಾಗುವುದು. 
  4. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆಗಿಂತ ಸ್ವಲ್ಪ ತೆಳುವಾಗಿರಲಿ.
  5. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ, ಮುಚ್ಚಳವನ್ನು ಮುಚ್ಚಿ .
  6. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ. ತುಪ್ಪ ಮತ್ತು ಸಕ್ಕರೆಯೊಂದಿಗೂ ಸವಿಯಬಹುದು.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಆಗಸ್ಟ್ 2, 2017

Hayagreeva recipe in Kannada | ಹಯಗ್ರೀವ ಅಥವಾ ಹೂರಣ ಮಾಡುವ ವಿಧಾನ

Hayagreeva recipe in Kannada

Hayagreeva recipe in Kannada | ಹಯಗ್ರೀವ ಅಥವಾ ಹೂರಣ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕಡ್ಲೆಬೇಳೆ
  2. 1/2 ಕಪ್ ಪುಡಿ ಮಾಡಿದ ಬೆಲ್ಲ (ರುಚಿಗೆ  ಬದಲಾಯಿಸಿ)
  3. 2 ಟೇಬಲ್ ಚಮಚ ತೆಂಗಿನ ತುರಿ (ಬೇಕಾದಲ್ಲಿ)
  4. 1 ಟೇಬಲ್ ಚಮಚ ಒಣ ದ್ರಾಕ್ಷಿ
  5. 1 ಟೇಬಲ್ ಚಮಚ ಗೋಡಂಬಿ
  6. 1 ಏಲಕ್ಕಿ

ಹಯಗ್ರೀವ ಅಥವಾ ಹೂರಣ ಮಾಡುವ ವಿಧಾನ:

  1. ಹೂರಣ ತಯಾರಿಸಲು ಬೇಳೆಯನ್ನು ತೊಳೆದು ಎರಡು ಪಟ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ, 3 - 4 ವಿಷಲ್ ಮಾಡಿದರೆ ಸಾಕು. 
  2. ಬೇಕಾದಲ್ಲಿ ಬೇಯಿಸಿದ ಬೇಳೆಯ ನೀರು ಬಸಿದು ತೆಗೆಯಿರಿ. ಈ ನೀರನ್ನು ಸಾರು ಮಾಡಲು ಉಪಯೋಗಿಸಬಹುದು. ನಾನು ನೀರು ತೆಗೆಯಲಿಲ್ಲ. 
  3. ಬೇಯಿಸಿದ ಬೇಳೆಗೆ, ತೆಂಗಿನ ತುರಿ, ಏಲಕ್ಕಿ ಮತ್ತು ಪುಡಿಮಾಡಿದ ಬೆಲ್ಲವನ್ನು ಹಾಕಿ ಮಧ್ಯಮ ಉರಿಯಲ್ಲಿ ಮಗುಚುತ್ತಾ ಇರಿ. 
  4. ಮೊದಲಿಗೆ ಸ್ವಲ್ಪ ನೀರಾಗಿ, ಆಮೇಲೆ ಗಟ್ಟಿಯಾಗುತ್ತದೆ. ಹೆಚ್ಚಿನ ನೀರಿನಂಶ ಹೋಗುವವರೆಗೆ ಮಗುಚಿ. ತುಂಬ ಗಟ್ಟಿ ಮಾಡುವುದು ಬೇಡ ಏಕೆಂದರೆ ತಣ್ಣಗಾದ ಮೇಲೆ ಗಟ್ಟಿಯಾಗುತ್ತದೆ. 
  5. ಕೊನೆಯಲ್ಲಿ ತುಪ್ಪ ಬಿಸಿ ಮಾಡಿ, ದ್ರಾಕ್ಷಿ, ಗೋಡಂಬಿ ಹುರಿದು ಸೇರಿಸಿ. ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ.  

ಮಂಗಳವಾರ, ಆಗಸ್ಟ್ 1, 2017

Gorikai palya recipe in Kannada | ಗೋರಿಕಾಯಿ ಪಲ್ಯ ಮಾಡುವ ವಿಧಾನ

Gorikai palya recipe in Kannada

Gorikai palya recipe in Kannada | ಗೋರಿಕಾಯಿ ಪಲ್ಯ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕೆಜಿ ಗೋರಿಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 4 - 6 ಟೀಸ್ಪೂನ್ ಅಡುಗೆ ಎಣ್ಣೆ
  6. 1 ಒಣ ಮೆಣಸಿನಕಾಯಿ (ಬೇಕಾದಲ್ಲಿ)
  7. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  8. 1 ದೊಡ್ಡ ಚಿಟಿಕೆ ಇಂಗು
  9. 4 - 5 ಕರಿಬೇವಿನ ಎಲೆ
  10. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
  11. ಸಣ್ಣ ಗೋಲಿಗಾತ್ರದ ಹುಣಿಸೇಹಣ್ಣು
  12. ಉಪ್ಪು ರುಚಿಗೆ ತಕ್ಕಷ್ಟು
  13. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  14. 1/4 ಕಪ್ ನೀರು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಒಣ ಮೆಣಸಿನ ಕಾಯಿ
  3. 1/2 ಟೀಸ್ಪೂನ್ ಸಾಸಿವೆ

ಗೋರಿಕಾಯಿ ಪಲ್ಯ ಮಾಡುವ ವಿಧಾನ:

  1. ಗೋರಿಕಾಯಿಯನ್ನು ತೊಳೆದು, ಕತ್ತರಿಸಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  3. ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು, ಒಣ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  4. ಅದಕ್ಕೆ ಕತ್ತರಿಸಿದ ಗೋರಿಕಾಯಿ ಹಾಕಿ. 
  5. ಉಪ್ಪು, ಹುಣಿಸೆರಸ ಮತ್ತು ಬೆಲ್ಲ ಹಾಕಿ ಮಗುಚಿ.
  6. 1/4 ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  7. ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, 1/4 ಚಮಚ ಸಾಸಿವೆ ಮತ್ತು ಒಣ ಮೆಣಸು ಹಾಕಿ, ನೀರು ಹಾಕದೆ ಪುಡಿ ಮಾಡಿ. 
  8. ಪುಡಿ ಮಾಡಿದ ಮಸಾಲೆ ಯನ್ನು ಬೇಯುತ್ತಿರುವ ಗೋರಿಕಾಯಿಗೆ ಹಾಕಿ. 
  9. ಚೆನ್ನಾಗಿ ಮಗುಚಿ ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...