ಸೋಮವಾರ, ಫೆಬ್ರವರಿ 6, 2017

Chitranna bajji recipe in Kannada | ಚಿತ್ರಾನ್ನ ಬಜ್ಜಿ ಅಥವಾ ಗೊಜ್ಜು ಮಾಡುವ ವಿಧಾನ

Chitranna bajji recipe in Kannada

Chitranna bajji recipe in Kannada | ಚಿತ್ರಾನ್ನ ಬಜ್ಜಿ ಅಥವಾ ಗೊಜ್ಜು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನ ತುರಿ
  2. 2 - 4 ಕೆಂಪು ಮೆಣಸಿನಕಾಯಿ
  3. 1/4 ಟೀಸ್ಪೂನ್ ಸಾಸಿವೆ
  4. 1 ಸಣ್ಣ ನಿಂಬೆ ಗಾತ್ರದ ಬೆಲ್ಲ
  5. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
  4. 1 ಟೀಸ್ಪೂನ್ ಉದ್ದಿನ ಬೇಳೆ
  5. 1 ಟೀಸ್ಪೂನ್ ಕಡಲೆಬೇಳೆ
  6. 4 - 6 ಕರಿಬೇವಿನ ಎಲೆ
  7. 1/4 ಟೀಸ್ಪೂನ್ ಅರಿಶಿನ ಪುಡಿ
  8. 4 ಟೇಬಲ್ ಚಮಚ ಅಡುಗೆ ಎಣ್ಣೆ (ತೆಂಗಿನೆಣ್ಣೆಗೆ ಆದ್ಯತೆ)

ಚಿತ್ರಾನ್ನ ಬಜ್ಜಿ ಅಥವಾ ಗೊಜ್ಜು ಮಾಡುವ ವಿಧಾನ:

  1. ಮಿಕ್ಸಿ ಜಾರಿಗೆ ತೆಂಗಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆಯನ್ನು ಹಾಕಿ.
  2. ಅಗತ್ಯವಿದ್ದಷ್ಟು ನೀರು ಬಳಸಿ ನುಣ್ಣನೆ ಅರೆದು ಪಕ್ಕಕ್ಕಿಡಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ , ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕಡಲೆಕಾಯಿ (ಶೇಂಗಾ) ಬಳಸಿಕೊಂಡು ಒಗ್ಗರಣೆ  ಮಾಡಿ. 
  4. ನಂತರ ಅರಿಶಿನ ಪುಡಿ , ಕರಿಬೇವು ಸೇರಿಸಿ ಸ್ಟವ್ ಆಫ್ ಮಾಡಿ.
  5. ಈಗ ಅರೆದ ಮಸಾಲಾ ಪೇಸ್ಟ್, ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
  6. ಚೆನ್ನಾಗಿ ಕಲಸಿ ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೆ ಕುದಿಸಿ. ಸ್ಟವ್ ಆಫ್ ಮಾಡಿ. 

Ottu shavige recipe in Kannada | ಒತ್ತು ಶಾವಿಗೆ ಮಾಡುವ ವಿಧಾನ

Ottu shavige recipe in Kannada

Ottu shavige recipe in Kannada | ಒತ್ತು ಶಾವಿಗೆ ಮಾಡುವ ವಿಧಾನ 

ಒತ್ತು ಶಾವಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1.5 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
  3. 1 ಟೀಸ್ಪೂನ್ ತುಪ್ಪ 
  4. ಉಪ್ಪು ರುಚಿಗೆ ತಕ್ಕಷ್ಟು

ಒತ್ತು ಶಾವಿಗೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ, ಸ್ಟವ್ ಆಫ್ ಮಾಡಿ. 
  3. ಒಮ್ಮೆ ಚೆನ್ನಾಗಿ ಮಗುಚಿ, ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. 
  4. ಅಕ್ಕಿ ಹಿಟ್ಟು ಸ್ವಲ್ಪ ಬಿಸಿ ಆರಿದ ಮೇಲೆ ಚೆನ್ನಾಗಿ ನಾದಿ. ಹಿಟ್ಟು ಮೃದುವಾಗಿರಬೇಕು. 
  5. ಉದ್ದುದ್ದ ಉಂಡೆಗಳನ್ನು ಮಾಡಿ, ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ. 
  6. ಸೆಕೆಯಲ್ಲಿ (ಆವಿಯಲ್ಲಿ) 10 - 12 ನಿಮಿಷ ಬೇಯಿಸಿ. ಚಟ್ನಿಯೊಂದಿಗೆ ಸವಿದು ಆನಂದಿಸಿ. 


ಶುಕ್ರವಾರ, ಫೆಬ್ರವರಿ 3, 2017

Baale hoo palya recipe in Kannada | ಬಾಳೆ ಹೂ ಅಥವಾ ಬಾಳೆ ಮೂತಿ ಪಲ್ಯ ಮಾಡುವ ವಿಧಾನ

Baale hoo palya recipe in Kannada

Baale hoo palya recipe in Kannada | ಬಾಳೆ ಹೂ ಅಥವಾ ಬಾಳೆ ಮೂತಿ ಪಲ್ಯ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಬಾಳೆ ಹೂ ಅಥವಾ ಬಾಳೆ ಮೂತಿ ಅಥವಾ ಪೂಂಬೆ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡ್ಲೆಬೇಳೆ
  5. 4 ಟೀಸ್ಪೂನ್ ಅಡುಗೆ ಎಣ್ಣೆ
  6. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  7. 1 ದೊಡ್ಡ ಚಿಟಿಕೆ ಇಂಗು
  8. 4 - 5 ಕರಿಬೇವಿನ ಎಲೆ
  9. ಒಂದು ಲಿಂಬೆ ಗಾತ್ರದ ಬೆಲ್ಲ
  10. ಒಂದು ಸಣ್ಣ ಲಿಂಬೆ ಗಾತ್ರದ ಹುಣಿಸೇಹಣ್ಣು
  11. ಉಪ್ಪು ರುಚಿಗೆ ತಕ್ಕಷ್ಟು
  12. 1 ಕಪ್ ನೀರು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಒಣ ಮೆಣಸಿನ ಕಾಯಿ
  3. 1/4 ಟೀಸ್ಪೂನ್ ಸಾಸಿವೆ
  4. 1/4 ಟೀಸ್ಪೂನ್ ಜೀರಿಗೆ
  5. 1/2 ಟೀಸ್ಪೂನ್ ಕೊತ್ತಂಬರಿ ಬೀಜ

ಬಾಳೆ ಹೂ ಅಥವಾ ಬಾಳೆ ಮೂತಿ ಪಲ್ಯ ಮಾಡುವ ವಿಧಾನ:

  1. ಬಾಳೆ ಹೂ ಅಥವಾ ಬಾಳೆ ಮೂತಿಯನ್ನು ತೊಳೆದು ಸಣ್ಣದಾಗಿ ಕೊಚ್ಚಿ.  ನೇಂದ್ರ ಅಥವಾ ಏಲಕ್ಕಿ ಬಾಳೆ ಹೂ ಆದಲ್ಲಿ ಉತ್ತಮ. ಬೇರೆ ಬಾಳೆ ಆದಲ್ಲಿ ಹೊರಗಿನ ಒಂದೆರಡು ಎಲೆಯನ್ನು ತೆಗೆದು ಹಾಕಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ.
  3. ಕತ್ತರಿಸಿದ ಬಾಳೆ ಹೂ ಅಥವಾ ಬಾಳೆ ಮೂತಿಯನ್ನು ಹಾಕಿ. ಒಂದು ನಿಮಿಷ ಮಗುಚಿ. 
  4. 1/2 ಕಪ್ ನೀರು ಸೇರಿಸ. ಉಪ್ಪು, ಹುಣಿಸೆಹಣ್ಣಿನ ರಸ ಮತ್ತು ಬೆಲ್ಲ ಹಾಕಿ. 
  5. ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ ನೀರಾರುವವರೆಗೆ ಬೇಯಿಸಿ. ಒಂದೆರಡು ಬಾರಿ ಮಗುಚಿ.
  6. ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಸಾಸಿವೆ ಮತ್ತು ಒಣ ಮೆಣಸು ಹಾಕಿ, ನೀರು ಹಾಕದೆ ಪುಡಿ ಮಾಡಿಟ್ಟು ಕೊಳ್ಳಿ.
  7. ಅರೆದ ಮಸಾಲೆಯನ್ನು ಸೇರಿಸಿ, 2 ನಿಮಿಷ ಮಗುಚಿ. ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...