Bele tovve recipe in Kannada | ಬೇಳೆ ತೊವ್ವೆ ಮಾಡುವ ವಿಧಾನ
ಬೇಳೆ ತೊವ್ವೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ತೊಗರಿಬೇಳೆ
- 1 ಟೀಸ್ಪೂನ್ ಸಾಸಿವೆ
- ಒಂದು ಒಣಮೆಣಸಿನಕಾಯಿ
- 7 - 8 ಕರಿಬೇವಿನ ಎಲೆ
- 1 - 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
- 1 ಟೀಸ್ಪೂನ್ ಶುಂಠಿ
- 1 ಟೊಮೇಟೊ
- 1/4 ಟೀಸ್ಪೂನ್ ಅರಶಿನ ಪುಡಿ
- ದೊಡ್ಡ ಚಿಟಿಕೆ ಇಂಗು
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
- 1 ಟೇಬಲ್ ಚಮಚ ಅಡುಗೆ ಎಣ್ಣೆ
ಬೇಳೆ ತೊವ್ವೆ ಮಾಡುವ ವಿಧಾನ:
- ತೊಗರಿಬೇಳೆಯನ್ನು ತೊಳೆದು, ಚಿಟಿಕೆ ಅರಿಶಿನ ಮತ್ತು ನಾಲ್ಕೈದು ಹನಿ ಎಣ್ಣೆ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಒಣಮೆಣಸಿನಕಾಯಿ ಮತ್ತು ಸಾಸಿವೆ ಒಗ್ಗರಣೆ ಮಾಡಿ.
- ಕತ್ತರಿಸಿದ ಶುಂಠಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ.
- ಇಂಗು ಮತ್ತು ಅರಿಶಿನ ಸೇರಿಸಿ.
- ಟೊಮೇಟೊ ಸೇರಿಸಿ, ಮೆತ್ತಗಾಗುವವರೆಗೆ ಹುರಿಯಿರಿ.
- ಮಸಿದ ಬೇಳೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
- ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
- ಸ್ಟವ್ ಆಫ್ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ