Dideer bele saaru recipe in Kannada | ದಿಢೀರ್ ಬೇಳೆ ಸಾರು ಮಾಡುವ ವಿಧಾನ
Dideer bele saaru video
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 ಕಪ್ ತೊಗರಿಬೇಳೆ (ಅಥವಾ ಹೆಸರುಬೇಳೆ)
- 1 - 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
- 1 ಟೀಸ್ಪೂನ್ ಶುಂಠಿ
- 1 ಟೊಮೇಟೊ
- ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- 1/4 ಟೀಸ್ಪೂನ್ ಅರಶಿನ ಪುಡಿ
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಜೀರಿಗೆ
- ಒಂದು ಒಣಮೆಣಸಿನಕಾಯಿ
- 4 - 5 ಜಜ್ಜಿದ ಬೆಳ್ಳುಳ್ಳಿ
- 7 - 8 ಕರಿಬೇವಿನ ಎಲೆ
- 1 ಟೇಬಲ್ ಚಮಚ ತುಪ್ಪ ಅಥವಾ ಅಡುಗೆ ಎಣ್ಣೆ
ದಿಢೀರ್ ಬೇಳೆ ಸಾರು ಮಾಡುವ ವಿಧಾನ:
- ತೊಗರಿಬೇಳೆಯನ್ನು ತೊಳೆದು ಮೂವತ್ತು ನಿಮಿಷ ನೆನೆಸಿ.
- ನಂತರ ಕತ್ತರಿಸಿದ ಹಸಿಮೆಣಸಿನಕಾಯಿ, ಶುಂಠಿ ಮತ್ತು ಟೊಮೇಟೊ ಸೇರಿಸಿ.
- ಅರಶಿನ, ಹುಣಿಸೆರಸ, ಉಪ್ಪು ಮತ್ತು ಅರ್ಧ ಕಪ್ ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
- ಬೇಯಿಸಿದ ಬೇಳೆಯನ್ನು ಸೌಟಿನ ಹಿಂಭಾಗದಿಂದ ಚೆನ್ನಾಗಿ ಮಸಿದುಕೊಳ್ಳಿ.
- ಒಂದು ಬಾಣಲೆಯಲ್ಲಿ ತುಪ್ಪ, ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ.
- ಒಣ ಮೆಣಸಿನಕಾಯಿ, ಕರಿಬೇವು ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ.
- ಮಸಿದ ಬೇಳೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಹಾಕಿ ಕುದಿಸಿ.
- ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
- ಚೆನ್ನಾಗಿ ಕುದಿಸಿ ಸ್ಟವ್ ಆಫ್ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ