Harive soppu chutney recipe in Kannada | ಹರಿವೆ ಸೊಪ್ಪು ಬಜ್ಜಿ ಮಾಡುವ ವಿಧಾನ
ಹರಿವೆ ಸೊಪ್ಪು ಬಜ್ಜಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಟ್ಟು ಹರಿವೆ ಸೊಪ್ಪು (ದಂಟಿನ ಸೊಪ್ಪು)
- 1/2 ಟೀಸ್ಪೂನ್ ಸಾಸಿವೆ
- 2 - 4 ಒಣಮೆಣಸಿನಕಾಯಿ
- 1/4 ಕಪ್ ತೆಂಗಿನತುರಿ
- 1 ಟೀಸ್ಪೂನ್ ಬೆಲ್ಲ (ಅಥವಾ ರುಚಿಗೆ ತಕ್ಕಷ್ಟು)
- ಸ್ವಲ್ಪ ಹುಣಿಸೇಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
- 1 ಟೇಬಲ್ ಚಮಚ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಸಾಸಿವೆ
- ದೊಡ್ಡ ಚಿಟಿಕೆ ಅರಿಶಿನ
- ದೊಡ್ಡ ಚಿಟಿಕೆಇಂಗು
- 1 ಟೇಬಲ್ ಚಮಚ ಅಡುಗೆ ಎಣ್ಣೆ (ಅಥವಾ ತುಪ್ಪ)
ಹರಿವೆ ಸೊಪ್ಪು ಬಜ್ಜಿ ಮಾಡುವ ವಿಧಾನ:
- ಹರಿವೆಸೊಪ್ಪನ್ನ ತೊಳೆದು ದೊಡ್ಡದಾಗಿ ಕತ್ತರಿಸಿಕೊಳ್ಳಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಒಣಮೆಣಸಿನಕಾಯಿ ಹುರಿಯಿರಿ.
- ಕತ್ತರಿಸಿದ ಸೊಪ್ಪು ಸೇರಿಸಿ ಹುರಿಯಿರಿ.
- ಹುರಿಯುವಾಗ ಉಪ್ಪು ಸೇರಿಸಿ ಹುರಿಯಿರಿ.
- ಬಿಸಿ ಆರಿದ ಮೇಲೆ ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ.
- ತೆಂಗಿನತುರಿ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆದು ಪಕ್ಕಕ್ಕಿಡಿ.
- ಒಂದು ಬಾಣಲೆಯಲ್ಲಿ ಎಣ್ಣೆ (ಅಥವಾ ತುಪ್ಪ) ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿ.
- ಅರಿಶಿನ ಮತ್ತು ಇಂಗು ಸೇರಿಸಿ.
- ಆಮೇಲೆ ಅರೆದ ಅಥವಾ ರುಬ್ಬಿದ ಸೊಪ್ಪಿನ ಪೇಸ್ಟ್ ಹಾಕಿ ಮಗುಚಿ.
- ಸ್ಟವ್ ಆಫ್ ಮಾಡಿ. ಬಿಸಿ ಅನ್ನ, ದೋಸೆ, ಇಡ್ಲಿ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ