ಮಂಗಳವಾರ, ಅಕ್ಟೋಬರ್ 22, 2019

Khara chapathi recipe in Kannada | ಖಾರ ಚಪಾತಿ ಮಾಡುವ ವಿಧಾನ

Khara chapathi recipe in Kannada

Khara chapathi recipe in Kannada | ಖಾರ ಚಪಾತಿ ಮಾಡುವ ವಿಧಾನ 

ಖಾರ ಚಪಾತಿ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು
  2. 1/2 ಟೀಸ್ಪೂನ್ ಗರಂ ಮಸಾಲಾ
  3. 1/2 ಟೀಸ್ಪೂನ್ ಅಚ್ಚಖಾರದ ಪುಡಿ
  4. ದೊಡ್ಡ ಚಿಟಿಕೆ ಅರಿಶಿನ
  5. 1/2 ಟೀಸ್ಪೂನ್ ಜೀರಿಗೆ ಪುಡಿ
  6. 1/4 ಟೀಸ್ಪೂನ್ ಓಮ
  7. 5 - 6 ಚಮಚ ತುಪ್ಪ ಅಥವಾ ಎಣ್ಣೆ
  8. 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಟೇಬಲ್ ಚಮಚ ಹುರಿದ ಶೇಂಗಾ ಅಥವಾ ಕಡ್ಲೆಕಾಯಿ
  2. 1/4 ಟೀಸ್ಪೂನ್ ಗರಂ ಮಸಾಲಾ
  3. 1/4 ಟೀಸ್ಪೂನ್ ಮಾವಿನಕಾಯಿ ಪುಡಿ
  4. 1/4 ಟೀಸ್ಪೂನ್ ಉಪ್ಪು

ಖಾರ ಚಪಾತಿ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟು ತೆಗೆದುಕೊಳ್ಳಿ. 
  2. ಅದಕ್ಕೆ ಜೀರಿಗೆ ಪುಡಿ, ಉಪ್ಪು, ಅರಿಶಿನ, ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಪುಡಿ ಹಾಕಿ. 
  3. ಒಂದು ಚಮಚ ತುಪ್ಪ ಮತ್ತು ಓಮ ಹಾಕಿ ಚೆನ್ನಾಗಿ ತಿಕ್ಕಿ ಕಲಸಿ. 
  4. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಮೆತ್ತಗಿನ ಚಪಾತಿ ಹಿಟ್ಟು ತಯಾರಿಸಿಕೊಳ್ಳಿ. 
  5. ಕೊನೆಯಲ್ಲಿ 1 ಚಮಚ ತುಪ್ಪ ಹಾಕಿ, ಪುನಃ ಒಮ್ಮೆ ಕಲಸಿ.
  6. ಮುಚ್ಚಳ ಮುಚ್ಚಿ 20 ನಿಮಿಷ ಪಕ್ಕಕ್ಕಿಡಿ. 
  7. ಆ ಸಮಯದಲ್ಲಿ ಒಂದು ಮಿಕ್ಸಿ ಜಾರಿನಲ್ಲಿ, ಹುರಿದ ಶೇಂಗಾ, ಗರಂ ಮಸಾಲಾ, ಉಪ್ಪು ಮತ್ತು ಮಾವಿನಕಾಯಿ ಪುಡಿ ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ. ಇದನ್ನು ನಾವು ಚಪಾತಿಯೊಳಗೆ ಹಾಕಲಿದ್ದೇವೆ. 
  8. ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಸಣ್ಣ ವೃತ್ತಾಕಾರವಾಗಿ ಲಟ್ಟಿಸಿ.
  9. ಮೇಲಿನಿಂದ ಸ್ವಲ್ಪ ತುಪ್ಪ ಮತ್ತು ಶೇಂಗಾ ಮಸಾಲೆ ಹರಡಿ. 
  10. ತ್ರಿಕೋನಾಕಾರವಾಗಿ ಮಡಿಸಿ, ಲಟ್ಟಿಸಿ. 
  11. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ. 
  12. ಬಿಸಿ ಬಿಸಿಯಾಗಿರುವಾಗಲೇ ತಿನ್ನಲು ಕೊಡಿ. ಬೇಕಾದಲ್ಲಿ ಉಪ್ಪಿನಕಾಯಿ ಮತ್ತು ಮೊಸರು ಜೊತೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...