Bread halwa recipe in Kannada | ಬ್ರೆಡ್ ಹಲ್ವಾ ಮಾಡುವ ವಿಧಾನ
ಬ್ರೆಡ್ ಹಲ್ವಾ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 4 - 5 ಬ್ರೆಡ್ ಸ್ಲೈಸ್
- 1/4 ಕಪ್ ಸಕ್ಕರೆ
- 5 ಟೇಬಲ್ ಚಮಚ ತುಪ್ಪ
- 1/2 ಕಪ್ ಹಾಲು
- 1/4 ಕಪ್ನೀರು
- 2 ಟೇಬಲ್ ಚಮಚ ಗೋಡಂಬಿ
- 1 ಏಲಕ್ಕಿ
ಬ್ರೆಡ್ ಹಲ್ವಾ ಮಾಡುವ ವಿಧಾನ:
- ಬ್ರೆಡ್ ನ್ನು ದೊಡ್ಡದಾಗಿ ಕತ್ತರಿಸಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಒಂದು ಟೇಬಲ್ ಚಮಚ ತುಪ್ಪ ಬಿಸಿಮಾಡಿ, ಗೋಡಂಬಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ.
- ಆಮೇಲೆ ಅದೇ ಬಾಣಲೆಗೆ, ಬ್ರೆಡ್ ಚೂರುಗಳನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿಯಲು ಪ್ರಾರಂಭಿಸಿ.
- ಒಂದು ಟೇಬಲ್ ಚಮಚ ತುಪ್ಪ ಸೇರಿಸಿ ಕಂದು ಬಣ್ಣ ಬರುವವರೆಗೆ ಅಥವಾ ಗರಿಗರಿಯಾಗುವವರೆಗೆ ಹುರಿಯಿರಿ.
- ಆಮೇಲೆ ಹಾಲು ಹಾಕಿ ಸಣ್ಣ ಉರಿಯಲ್ಲಿ ಒಮ್ಮೆ ಮಗುಚಿ.
- ಕೂಡಲೇ ಸಕ್ಕರೆ ಮತ್ತು ನೀರು ಸೇರಿಸಿ.
- ಸಣ್ಣ ಉರಿಯಲ್ಲಿ, ಬ್ರೆಡ್ ಚೂರುಗಳನ್ನು ಪುಡಿ ಮಾಡುತ್ತ ಚೆನ್ನಾಗಿ ಮಗುಚಿ.
- ಒಂದು ಟೇಬಲ್ ಚಮಚ ತುಪ್ಪ ಹಾಕಿ ಮಗುಚುವುದನ್ನು ಮುಂದುವರೆಸಿ.
- ಒಂದೆರಡು ನಿಮಿಷದಲ್ಲಿ, ಹಲ್ವಾ ಮುದ್ದೆಯಂತಾಗುತ್ತದೆ.
- ಆಗ ಏಲಕ್ಕಿ ಪುಡಿ ಮತ್ತು ಎರಡು ಟೇಬಲ್ ಚಮಚ ತುಪ್ಪ ಸೇರಿಸಿ, ಸ್ವಲ್ಪ ಹೊತ್ತು ಮಗುಚಿ.
- ಕೊನೆಯಲ್ಲಿ ಹುರಿದ ಗೋಡಂಬಿ ಹಾಕಿ ಮಗುಚಿ. ಸ್ಟವ್ ಆಫ್ ಮಾಡಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ