ಗುರುವಾರ, ಜೂನ್ 24, 2021

Avalakki rotti recipe Kannada | ಅವಲಕ್ಕಿ ರೊಟ್ಟಿ ಮಾಡುವ ವಿಧಾನ

 

Avalakki rotti recipe Kannada.

Avalakki rotti recipe Kannada | ಅವಲಕ್ಕಿ ರೊಟ್ಟಿ ಮಾಡುವ ವಿಧಾನ

ಅಕ್ಕಿರೊಟ್ಟಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿಹಿಟ್ಟು
  2. 1/2 ಕಪ್ ತೆಳು ಅವಲಕ್ಕಿ
  3. 2 - 3  ಟೇಬಲ್ ಚಮಚ ಬಿಸಿ ನೀರು (ಬೇಕಾದಲ್ಲಿ)
  4. 1/2 ಟೀಸ್ಪೂನ್ ಜೀರಿಗೆ
  5. 2 ಟೇಬಲ್ ಸ್ಪೂನ್ ತೆಂಗಿನತುರಿ
  6. 1 - 2 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
  7. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  8. 1 ಟೇಬಲ್ ಸ್ಪೂನ್ ಹೆಚ್ಚಿದ ಕರಿಬೇವಿನ ಎಲೆ
  9. 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. ಉಪ್ಪು ರುಚಿಗೆ ತಕ್ಕಷ್ಟು
  11. ರೊಟ್ಟಿ ಮಾಡಲು ಎಣ್ಣೆ
  12. 15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ

ಅವಲಕ್ಕಿ ರೊಟ್ಟಿ ಮಾಡುವ ವಿಧಾನ:

  1. ಅವಲಕ್ಕಿಯನ್ನು ತೊಳೆದು, ನೀರು ಬಸಿದು, ಚೆನ್ನಾಗಿ ಹಿಸುಕಿ.
  2. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಹಿಸುಕಿದ ಅವಲಕ್ಕಿ ತೆಗೆದುಕೊಳ್ಳಿ. 
  3. ಅದಕ್ಕೆ ಕತ್ತರಿಸಿದ ಈರುಳ್ಳಿ , ತೆಂಗಿನತುರಿ ಮತ್ತು ಜೀರಿಗೆ ಸೇರಿಸಿ. 
  4. ನಂತ್ರ ಕತ್ತರಿಸಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಸೇರಿಸಿ. 
  5. ಋಷಿಗೆ ತಕ್ಕಂತೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  6. ಬೇಕಾದಲ್ಲಿ ಸ್ವಲ್ಪ ಬಿಸಿ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  7. ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟು ಇರಿಸಿ.
  8. ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ತಟ್ಟುತ್ತಾ ವೃತ್ತಾಕಾರದ ಅಕ್ಕಿ ರೊಟ್ಟಿಯನ್ನುಮಾಡಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
  9. ಅಕ್ಕಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ ಮೇಲೆ ಹಾಕಿ.
  10. ಮೇಲಿನಿಂದ ಎಣ್ಣೆ ಹಾಕಿ ಕಾಯಿಸಿ. ರೊಟ್ಟಿಯನ್ನು ತಿರುವಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ. 
  11. ಚಟ್ನಿ ಅಥವಾ ಯಾವುದೇ ಗೊಜ್ಜಿನೊಂದಿಗೆ ಬಡಿಸಿ.

ಮಂಗಳವಾರ, ಜೂನ್ 22, 2021

Red chutney recipe for masale dose in Kannada | ಕೆಂಪು ಚಟ್ನಿ ಮಾಡುವ ವಿಧಾನ

 

Red chutney recipe for masale dose in Kannada

Red chutney recipe for masale dose in Kannada | ಕೆಂಪು ಚಟ್ನಿ ಮಾಡುವ ವಿಧಾನ

ಮಸಾಲೆ ದೋಸೆ ಕೆಂಪು ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 10 ಬ್ಯಾಡ್ಗಿ ಮೆಣಸಿನಕಾಯಿ
  2. 1 ಸಣ್ಣ ಗಡ್ಡೆ ಬೆಳ್ಳುಳ್ಳಿ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 2 ಟೀಸ್ಪೂನ್ ಜೀರಿಗೆ
  5. ಸ್ವಲ್ಪ ಕರಿಬೇವು
  6. ಉಪ್ಪು ರುಚಿಗೆ ತಕ್ಕಷ್ಟು

ಕೆಂಪು ಚಟ್ನಿ ಮಾಡುವ ವಿಧಾನ:

  1. ಒಣಮೆಣಸಿನಕಾಯಿಯನ್ನು 30ನಿಮಿಷ ಬಿಸಿ ನೀರಿನಲ್ಲಿ ನೆನೆಸಿಡಿ. 
  2. ನೆನೆಸಿದ ಒಣಮೆಣಸಿನಕಾಯಿಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಳ್ಳಿ.
  3. ಸಿಪ್ಪೆ ತೆಗೆದ ಬೆಳ್ಳುಳ್ಳಿ ಸೇರಿಸಿ. 
  4. ಕೊತ್ತಂಬರಿ ಬೀಜ, ಜೀರಿಗೆ, ಕರಿಬೇವು ಮತ್ತು ಉಪ್ಪು ಸೇರಿಸಿ.  
  5. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. ಮೆಣಸಿನಕಾಯಿ ನೀರು ಸೇರಿಸಬಹುದು. 
  6. ಒಂದು ಪಾತ್ರೆಗೆ ತೆಗೆದು, ಮಸಾಲೆ ದೋಸೆಗೆ ಹಚ್ಚಿ, ಕಾಯಿಸಿ, ರುಚಿಕರ ಗರಿಗರಿ ದೋಸೆ ಮಾಡಿ.  

ಗುರುವಾರ, ಜೂನ್ 17, 2021

Kanchipuram idli recipe in Kannada | ಮಸಾಲೆ ಇಡ್ಲಿ ಮಾಡುವ ವಿಧಾನ

 

Kanchipuram idli recipe in Kannada

Kanchipuram idli recipe in Kannada | ಮಸಾಲೆ ಇಡ್ಲಿ ಮಾಡುವ ವಿಧಾನ

ಮಸಾಲೆ ಇಡ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಇಡ್ಲಿ ರವೆ
  2. 1/2 ಕಪ್ ಉದ್ದಿನಬೇಳೆ
  3. 1 ಟೀಸ್ಪೂನ್ ಮೆಂತೆ 
  4. ಎಣ್ಣೆ ಅಥವಾ ತುಪ್ಪ (ಇಡ್ಲಿ ತಟ್ಟೆಗೆ ಹಚ್ಚಲು)
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ
  3. 1 ಟೀಸ್ಪೂನ್ ಉದ್ದಿನಬೇಳೆ
  4. 1 ಟೀಸ್ಪೂನ್ ಕಡ್ಲೆಬೇಳೆ
  5. 1/2 - 1 ಟೀಸ್ಪೂನ್ ಜಜ್ಜಿದ ಕಾಳುಮೆಣಸು
  6. 1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು 
  7. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. 1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  9. 1 ಹೆಚ್ಚಿದ ಹಸಿರು ಮೆಣಸಿನಕಾಯಿ
  10. ದೊಡ್ಡ ಚಿಟಿಕೆ ಇಂಗು
  11. 2 ಟೀಸ್ಪೂನ್ ಅಡುಗೆ ಎಣ್ಣೆ

ಮಸಾಲೆ ಇಡ್ಲಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಉದ್ದಿನಬೇಳೆ ಮತ್ತು ಮೆಂತೆ ತೆಗೆದುಕೊಳ್ಳಿ. 
  2. ಚೆನ್ನಾಗಿ ತೊಳೆದು, 4 - 5 ಘಂಟೆ ನೆನೆಸಿಡಿ. 
  3. ನೆನೆಸಿದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  5. ಇಡ್ಲಿರವೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ತೊಳೆದು, ನೀರು ಸಂಪೂರ್ಣ ಬಗ್ಗಿಸಿ. 
  6. ಅದಕ್ಕೆ ಅರೆದ ಉದ್ದಿನಹಿಟ್ಟು ಹಾಕಿ. 
  7. ಚೆನ್ನಾಗಿ ಕಲಸಿ. 
  8. ಮುಚ್ಚಳ ಮುಚ್ಚಿ 7 - 10 ಘಂಟೆ ಹಿಟ್ಟು ಹುದುಗಲು ಬಿಡಿ. 
  9. ಹಿಟ್ಟು ಹುದುಗಿದ ಮೇಲೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಕಲಸಿ. 
  10. ಒಂದು ಬಾಣಲೆ ಬಿಸಿ ಮಾಡಿ. ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆಯ ಒಗ್ಗರಣೆ ಮಾಡಿ.
  11. ಸಾಸಿವೆ ಸಿಡಿದ ಕೂಡಲೇ ಜಜ್ಜಿದ ಕಾಳುಮೆಣಸು, ಹೆಚ್ಚಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಹಸಿರುಮೆಣಸಿನಕಾಯಿ ಸೇರಿಸಿ ಹುರಿಯಿರಿ. 
  12. ನಂತರ ಇಂಗು ಸೇರಿಸಿ ಸ್ಟವ್ ಆಫ್ ಮಾಡಿ.   
  13. ಇಡ್ಲಿ ಮಾಡಲು ತುಪ್ಪ ಅಥವಾ ಎಣ್ಣೆ ಸವರಿದ ಇಡ್ಲಿ ತಟ್ಟೆಗೆ ಹಿಟ್ಟನ್ನು ಹಾಕಿ 10 - 12 ನಿಮಿಷ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ. 
  14. ನಾನು ಲೋಟದಲ್ಲಿ ಹಾಕಿ 20 ನಿಮಿಷ ಬೇಯಿಸಿದೆ. 
  15. ತೆಂಗಿನ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

Related Posts Plugin for WordPress, Blogger...