ಮಂಗಳವಾರ, ಜೂನ್ 30, 2020

Bele paddu recipe in kannada | ಬೇಳೆ ಪಡ್ಡು ಮಾಡುವ ವಿಧಾನ

Bele paddu recipe in kannada | ಬೇಳೆ ಪಡ್ಡು ಮಾಡುವ ವಿಧಾನ


ಬೇಳೆ ದೋಸೆ ವಿಡಿಯೋ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ದೋಸೆ ಅಕ್ಕಿ
  2. 2 ಟೇಬಲ್ ಚಮಚ ಉದ್ದಿನ ಬೇಳೆ
  3. 2 ಟೇಬಲ್ ಚಮಚ ತೊಗರಿ ಬೇಳೆ 
  4. 2 ಟೇಬಲ್ ಚಮಚ ಹೆಸರು ಬೇಳೆ 
  5. 2 ಟೇಬಲ್ ಚಮಚ ಕಡ್ಲೇ ಬೇಳೆ 
  6. 2 ಟೇಬಲ್ ಚಮಚ ಮಸೂರ್ ಬೇಳೆ 
  7. 1/4 ಕಪ್ ಅವಲಕ್ಕಿ
  8. 2 - 4 ಒಣಮೆಣಸಿನಕಾಯಿ
  9. ಸಣ್ಣ ತುಂಡು ಶುಂಠಿ 
  10. 1/2 ಟೀಸ್ಪೂನ್ ಜೀರಿಗೆ 
  11. 1 ಟೀಸ್ಪೂನ್ ಕೊತ್ತಂಬರಿ ಬೀಜ
  12. 1 ಈರುಳ್ಳಿ
  13. ಸ್ವಲ್ಪ ಕರಿಬೇವಿನಸೊಪ್ಪು
  14. ಸ್ವಲ್ಪ ಕೊತ್ತಂಬರಿ ಸೊಪ್ಪು
  15. ಉಪ್ಪು ರುಚಿಗೆ ತಕ್ಕಷ್ಟು.

ಬೇಳೆ ಪಡ್ಡು ಮಾಡುವ ವಿಧಾನ:

  1. ಅಕ್ಕಿ ಮತ್ತು ಬೇಳೆಗಳನ್ನು ತೊಳೆದು ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಅವಲಕ್ಕಿಯನ್ನು ತೊಳೆದು 10 ನಿಮಿಷ ನೆನೆಯಲು ಬಿಡಿ.
  3. 4 - 5 ಗಂಟೆಗಳ ನಂತರ ನೀರು ಬಗ್ಗಿಸಿ ಅಕ್ಕಿ ಮತ್ತು ಬೇಳೆಗಳನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. ಒಣಮೆಣಸಿನಕಾಯಿ, ಶುಂಠಿ, ಜೀರಿಗೆ ಮತ್ತು ಕೊತ್ತಂಬರಿ ಸೇರಿಸಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ. 
  5. ನೆನೆಸಿದ ಅವಲಕ್ಕಿಯನ್ನು ಸೇರಿಸಿ ಅರೆಯಿರಿ. 
  6. ಅರೆದ ಹಿಟ್ಟನ್ನು ಪಾತ್ರೆಗೆ ಹಾಕಿ, 7 - 8 ಘಂಟೆಗಳ ಕಾಲ ಹಿಟ್ಟು ಹುದುಗಲು ಬಿಡಿ. 
  7. ನಂತರ ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  8. ಚೆನ್ನಾಗಿ ಕಲಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ, ಉದ್ದಿನ ದೋಸೆ ಹಿಟ್ಟಿನ  ದೋಸೆ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ. 
  9. ಗುಳಿಯಪ್ಪ ಅಥವಾ ಪಡ್ಡು ಪ್ಯಾನ್ ಬಿಸಿ ಮಾಡಿ. ಸ್ವಲ್ಪ ಎಣ್ಣೆ ಹಾಕಿ, ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ ಬೇಯಿಸಿ.
  10.  ಮೇಲಿನಿಂದ ಎಣ್ಣೆ ಹಾಕಿ. ತಿರುವಿ ಹಾಕಿ, ಇನ್ನೊಂದು ಬದಿಯೂ ಕಾಯಿಸಿ. 
  11. ಬಿಸಿ ಬಿಸಿ ಪಡ್ಡುವನ್ನು ಕಾಯಿ ಚಟ್ನಿಯೊಂದಿಗೆ ಬಡಿಸಿ.

ಬುಧವಾರ, ಜೂನ್ 24, 2020

Mavinakayi gulamba recipe in Kannada | ಮಾವಿನಕಾಯಿ ಗುಳಂಬಾ ಮಾಡುವ ವಿಧಾನ

Mavinakayi gulamba recipe in Kannada

Mavinakayi gulamba recipe in Kannada | ಮಾವಿನಕಾಯಿ ಗುಳಂಬಾ ಮಾಡುವ ವಿಧಾನ 

ಮಾವಿನಕಾಯಿ ಗುಳಂಬಾ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ದೊಡ್ಡ ಹುಳಿ ಇಲ್ಲದ ಮಾವಿನಕಾಯಿ
  2. 1 ಕಪ್ ಸಕ್ಕರೆ (ರುಚಿಗೆ ತಕ್ಕಂತೆ ಹೊಂದಿಸಿ)
  3. 1 ಟೀಸ್ಪೂನ್ ತುಪ್ಪ
  4. 2 - 3 ಏಲಕ್ಕಿ 
  5. 2 ಲವಂಗ (ಬೇಕಾದಲ್ಲಿ)
  6. ಚಿಟಿಕೆ ಕೇಸರಿ (ಬೇಕಾದಲ್ಲಿ)

ಮಾವಿನಕಾಯಿ ಗುಳಂಬಾ ಮಾಡುವ ವಿಧಾನ:

  1. ಮಾವಿನಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ. ಮಾವಿನಕಾಯಿ ತುರಿಯನ್ನು ಅಳತೆ ಮಾಡಿ. 
  2. ಏಲಕ್ಕಿ, ಲವಂಗ ಮತ್ತು ಕೇಸರಿಯನ್ನು ಜಜ್ಜಿಟ್ಟು ಕೊಳ್ಳಿ. 
  3. ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ಮಾವಿನಕಾಯಿ ಮೆತ್ತಗಾಗುವವರೆಗೆ ಹುರಿದು ಕೊಳ್ಳಿ. 
  4. ನಂತರ ಸಕ್ಕರೆ ಸೇರಿಸಿ. ಒಂದು ಕಪ್ ತುರಿಗೆ ಒಂದು ಕಪ್ ಸಕ್ಕರೆ ಬೇಕಾಗುವುದು. ನಾನು ಸ್ವಲ್ಪ ಕಡಿಮೆ ಸೇರಿಸಿದ್ದೇನೆ. 
  5. ಮಧ್ಯಮ ಉರಿಯಲ್ಲಿ ಮಗುಚಿ. ಮೊದಲಿಗೆ ಸಕ್ಕರೆ ಕರಗಿ ನೀರಾಗುವುದು. 
  6. ಆ ಸಮಯದಲ್ಲಿ ಜಜ್ಜಿದ ಏಲಕ್ಕಿ, ಲವಂಗ ಮತ್ತು ಕೇಸರಿಯನ್ನು ಸೇರಿಸಿ. 
  7. ಎರಡೆಳೆ ಪಾಕ ಬರುವವರೆಗೆ ಮಗುಚಿ. (ಪಾಕ ಬಂದ ಮೇಲೂ ನೀರು ನೀರಾಗಿರುವುದು) 
  8. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುವುದು.  
  9. ಮಾವಿನಕಾಯಿ ಗುಳಂಬಾ ಸವಿಯಲು ಸಿದ್ಧ. ಚಪಾತಿ, ದೋಸೆ, ರೊಟ್ಟಿ ಮತ್ತು ಬ್ರೆಡ್ ನೊಂದಿಗೆ ಬಡಿಸಿ. ಫ್ರಿಡ್ಜ್ ನಲ್ಲಿ ಸುಮಾರು  ದಿನ ಇಡಬಹುದು. 

ಶುಕ್ರವಾರ, ಜೂನ್ 19, 2020

Alugadde saaru recipe in Kannada | ಆಲೂಗಡ್ಡೆ ಸಾರು ಮಾಡುವ ವಿಧಾನ

Alugadde saaru recipe in Kannada

Alugadde saaru recipe in Kannada | ಆಲೂಗಡ್ಡೆ ಸಾರು ಮಾಡುವ ವಿಧಾನ

ಆಲೂಗಡ್ಡೆ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಆಲೂಗಡ್ಡೆ
  2. 1 ಚಮಚ ಹುಣಿಸೆರಸ
  3. 1/2 ಚಮಚ ಬೆಲ್ಲ
  4. 1- 2 ಹಸಿರು ಮೆಣಸಿನಕಾಯಿ
  5. ದೊಡ್ಡ ಚಿಟಿಕೆ ಇಂಗು
  6. ದೊಡ್ಡ ಚಿಟಿಕೆ ಅರಿಶಿನ
  7. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಟೀಸ್ಪೂನ್ ಸಾಸಿವೆ
  2. 1 ಒಣಮೆಣಸಿನಕಾಯಿ
  3. ದೊಡ್ಡ ಚಿಟಿಕೆ ಇಂಗು
  4. 4-5 ಕರಿಬೇವಿನ ಎಲೆ
  5. 2 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ

ಆಲೂಗಡ್ಡೆ ಸಾರು ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ಸಿಪ್ಪೆ ತೆಗೆದು, ತೊಳೆದು ಕತ್ತರಿಸಿ.
  2. ಕತ್ತರಿಸಿದ ಆಲೂಗಡ್ದೆಯನ್ನು ಸುಮಾರು ಒಂದು ಲೋಟದಷ್ಟು ನೀರು ಸೇರಿಸಿ, ಮೆತ್ತಗೆ ಬೇಯಿಸಿಕೊಳ್ಳಿ. 
  3. ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮಸಿದು ಕೊಳ್ಳಿ  (ಮ್ಯಾಶ್ ಮಾಡಿಕೊಳ್ಳಿ)
  4. ಆಮೇಲೆ ಅದಕ್ಕೆ ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  5. ಉಪ್ಪು, ಹುಣಿಸೆರಸ ಮತ್ತು ಬೆಲ್ಲವನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ. 
  6. ಇಂಗು ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಮಗುಚಿ, ಕುದಿಯಲು ಇಡಿ.
  7. ಒಂದು ಬಾಣಲೆಯನ್ನು ಬಿಸಿಮಾಡಿ, ಎಣ್ಣೆ, ಸಾಸಿವೆ, ಕರಿಬೇವು, ಇಂಗು ಮತ್ತು ಒಣಮೆಣಸಿನಕಾಯಿ ಸೇರಿಸಿ ಒಗ್ಗರಣೆ ಮಾಡಿ. 
  8. ಕುದಿಸಿದ ಸಾರಿಗೆ ಒಗ್ಗರಣೆ ಹಾಕಿ, ಬಿಸಿ ಅನ್ನದೊಂದಿಗೆ ಬಡಿಸಿ. 

Related Posts Plugin for WordPress, Blogger...