ಸೋಮವಾರ, ಜುಲೈ 31, 2017

Eerulli gidada thambli in kannada | ಈರುಳ್ಳಿ ಗಿಡದ ತಂಬುಳಿ ಮಾಡುವ ವಿಧಾನ

Eerulli gidada thambli in kannada

Eerulli gidada thambli in kannada | ಈರುಳ್ಳಿ ಗಿಡದ ತಂಬುಳಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಸಣ್ಣ ಕಟ್ಟು ಈರುಳ್ಳಿ ಗಿಡ
  2. 1/2 ಟೀಸ್ಪೂನ್ ಜೀರಿಗೆ
  3. 1/2 ಟೀಸ್ಪೂನ್ ಕಾಳುಮೆಣಸು
  4. 1/2 ಕಪ್ ತೆಂಗಿನತುರಿ
  5. 1 ಕಪ್ ಮೊಸರು
  6. 1 ಒಣ ಮೆಣಸಿನಕಾಯಿ
  7. 2 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
  8. 1/4 ಟೀಸ್ಪೂನ್ ಸಾಸಿವೆ
  9. ಉಪ್ಪು ರುಚಿಗೆ ತಕ್ಕಷ್ಟು.

ಈರುಳ್ಳಿ ಗಿಡದ ತಂಬುಳಿ ಮಾಡುವ ವಿಧಾನ:

  1. ಈರುಳ್ಳಿ ಗಿಡವನ್ನು ಆಯ್ದು, ಕತ್ತರಿಸಿ.
  2. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿಯಿರಿ. 
  3. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಗಿಡವನ್ನು ಹಾಕಿ.
  4. ಬಾಡಿದ ಕೂಡಲೇ ಸ್ಟೋವ್ ಆಫ್ ಮಾಡಿ.
  5. ಹುರಿದ ಪದಾರ್ಥಗಳು ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ.  
  6. ಅಗತ್ಯವಿದ್ಧಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  7. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ. 
  8. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಗುರುವಾರ, ಜುಲೈ 27, 2017

Bili saaru recipe in Kannada | ಬಿಳಿ ಸಾರು ಮಾಡುವ ವಿಧಾನ

Bili saaru recipe in Kannada

Bili saaru recipe in Kannada | ಬಿಳಿ ಸಾರು ಮಾಡುವ ವಿಧಾನ 

ಬಿಳಿ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಹೆಸರುಬೇಳೆ
  2. 1.5 ಲೀ ನೀರು
  3. 2 ಚಮಚ ಲಿಂಬೆಹಣ್ಣಿನ ರಸ (ರುಚಿಗೆ ತಕ್ಕಂತೆ ಬದಲಾಯಿಸಿ)
  4. ಒಂದು ಚಿಟಿಕೆ ಅರಶಿನ ಪುಡಿ
  5. 1 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
  6. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನತುರಿ
  2. 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  3. 1/4 ಟೀಸ್ಪೂನ್ ಸಾಸಿವೆ
  4. 1/4 ಟೀಸ್ಪೂನ್ ಜೀರಿಗೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 1/4 ಟೀಸ್ಪೂನ್ ಜೀರಿಗೆ 
  4. ಒಂದು ದೊಡ್ಡ ಚಿಟಿಕೆ ಇಂಗು 
  5. 4 - 5 ಕರಿಬೇವಿನ ಎಲೆ
  6. 1 ಟೀಸ್ಪೂನ್ ಅಡುಗೆ ಎಣ್ಣೆ

ಬಿಳಿ ಸಾರು ಮಾಡುವ ವಿಧಾನ:

  1. ಹೆಸರುಬೇಳೆಯನ್ನು ತೊಳೆದು ಸ್ವಲ್ಪ ನೀರು, ಒಂದೆರಡು ಹನಿ ಎಣ್ಣೆ ಮತ್ತು ಅರಶಿನ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ಅದಕ್ಕೆ ಕತ್ತರಿಸಿದ ಟೊಮೇಟೊ ಮತ್ತು ಉಪ್ಪು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  3. ತೆಂಗಿನತುರಿ, ಜೀರಿಗೆ,  ಸಾಸಿವೆ ಮತ್ತು ಹಸಿರು ಮೆಣಸಿನ ಕಾಯಿಯನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. 
  4. ರುಬ್ಬಿದ ಮಿಶ್ರಣವನ್ನು ಬೇಯಿಸಿದ ಹೆಸರುಬೇಳೆ ಮತ್ತು ಟೊಮ್ಯಾಟೊಗೆ ಸೇರಿಸಿ. 
  5. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  6. ಸ್ಟವ್ ಆಫ್ ಮಾಡಿದ ಮೇಲೆ ಲಿಂಬೆ ಹಣ್ಣಿನ ರಸ ಸೇರಿಸಿ. 
  7. ಎಣ್ಣೆ, ಒಣಮೆಣಸು, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ. 

ಸೋಮವಾರ, ಜುಲೈ 24, 2017

Heerekayi sippe dose recipe in Kannada | ಹೀರೆಕಾಯಿ ಸಿಪ್ಪೆ ದೋಸೆ ಮಾಡುವ ವಿಧಾನ

Heerekayi sippe dose recipe in Kannada

Heerekayi sippe dose recipe in Kannada | ಹೀರೆಕಾಯಿ ಸಿಪ್ಪೆ ದೋಸೆ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1.5 ಕಪ್ ಕತ್ತರಿಸಿದ ಹೀರೆಕಾಯಿ ಸಿಪ್ಪೆ
  3. 1/4 ಕಪ್ ತೆಂಗಿನ ತುರಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ 
  5. 1/2 ಟೀಸ್ಪೂನ್ ಜೀರಿಗೆ 
  6. 2 ಕೆಂಪು ಮೆಣಸಿನಕಾಯಿ 
  7. ಸಣ್ಣ ಗೋಲಿ ಗಾತ್ರದ ಹುಣಸೆ ಹಣ್ಣು 
  8. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ) 
  9. ಉಪ್ಪು ರುಚಿಗೆ ತಕ್ಕಷ್ಟು

ಹೀರೆಕಾಯಿ ಸಿಪ್ಪೆ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
  2. ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸಿನಕಾಯಿ, ಬೆಲ್ಲ ಮತ್ತು ಹುಣಸೆ ಹಣ್ಣು ಹಾಕಿ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. 
  3. ನಂತರ ಅದಕ್ಕೆ ಹೀರೆಕಾಯಿ ಸಿಪ್ಪೆ ಹಾಕಿ ಸ್ವಲ್ಪ ತರಿತರಿಯಾಗಿ ಅರೆಯಿರಿ.  
  4. ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ಹಿಟ್ಟು ತೆಳುವಾದ ಮಿಲ್ಕ್ ಶೇಕ್ ನಂತಿರಲಿ. 
  5. ದೋಸೆ ಕಲ್ಲು ಅಥವಾ ಹಂಚನ್ನು ಬಿಸಿ ಮಾಡಿ. ಒಂದು ಸೌಟು ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು ದೋಸೆ ಮಾಡಿ. 
  6. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಬಿಸಿ ಬಿಸಿ ದೋಸೆಯನ್ನು ತುಪ್ಪ ಮತ್ತು ಚಟ್ನಿಯೊಂದಿಗೆ ಬಡಿಸಿ. 

Related Posts Plugin for WordPress, Blogger...