ಶನಿವಾರ, ಆಗಸ್ಟ್ 10, 2024

Bale dindu mosaru sasive recipe in kannada | ಬಾಳೆದಿಂಡು ಮೊಸರು ಸಾಸಿವೆ ಮಾಡುವ ವಿಧಾನ

 

Bale dindu mosaru sasive recipe in kannada

Bale dindu mosaru sasive recipe in kannada | ಬಾಳೆದಿಂಡು ಮೊಸರು ಸಾಸಿವೆ ಮಾಡುವ ವಿಧಾನ

ಬಾಳೆದಿಂಡು ಮೊಸರು ಸಾಸಿವೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 7 - 8 cm ಉದ್ದದ ಬಾಳೆದಿಂಡು
  2. 1/2 ಕಪ್ ಮೊಸರು 
  3. 1 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಷ್ಟು 

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಹಸಿಮೆಣಸಿನಕಾಯಿ
  2. 1/2 ಕಪ್ ತೆಂಗಿನ ತುರಿ 
  3. 1/2 ಟೀಸ್ಪೂನ್ ಸಾಸಿವೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಒಣ ಮೆಣಸಿನಕಾಯಿ
  3. 4 -5 ಕರಿಬೇವು
  4. 1 ಟೇಬಲ್  ಸ್ಪೂನ್ ಅಡುಗೆ ಎಣ್ಣೆ

ಬಾಳೆದಿಂಡು ಮೊಸರು ಸಾಸಿವೆ ಮಾಡುವ ವಿಧಾನ:

  1. ಬಾಳೆದಿಂಡಿನ ಹೊರಗಿನ ಸಿಪ್ಪೆಗಳನ್ನು ತೆಗೆಯಿರಿ.
  2. ಚಕ್ರಗಳಾಗಿ ಕತ್ತರಿಸಿ ನಾರನ್ನು ತೆಗೆಯಿರಿ.
  3. ನಂತರ ಸಣ್ಣದಾಗಿ ಕತ್ತರಿಸಿ.
  4. ನಿಂಬೆಹಣ್ಣಿನ ರಸ ಹಾಕಿದ ನೀರಿನಲ್ಲಿ ಹತ್ತು ನಿಮಿಷ ಹಾಕಿಡಿ.  
  5. ಆಮೇಲೆ ನೀರು ಬಗ್ಗಿಸಿ ತೆಗೆಯಿರಿ.
  6. ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಬೇಯಲು ಇಡಿ. ಬೇಯಿಸದೆಯೂ ಮಾಡಬಹುದು. 
  7. ಹತ್ತು ನಿಮಿಷ ಬೇಯಿಸಿ ಸ್ಟವ್ ಆಫ್ ಮಾಡಿ. 
  8. ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ರುಬ್ಬಿ. 
  9. ಅದನ್ನು ಒಂದು ಪಾತ್ರೆಗೆ ಹಾಕಿ ಮೊಸರನ್ನು ಸೇರಿಸಿ.
  10. ಬೇಯಿಸಿದ ಬಾಳೆದಿಂಡನ್ನು ಬಿಸಿ ಕಡಿಮೆ ಆದಮೇಲೆ ನೀರು ಬಸಿದು ಸೇರಿಸಿ. 
  11. ರುಚಿಗೆ ತಕ್ಕಂತೆ ಉಪ್ಪು ಹಾಕಿ ಕಲಸಿ. 
  12. ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. 
  13. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಭಾನುವಾರ, ಆಗಸ್ಟ್ 4, 2024

Bendekai mirpudi recipe in Kannada | ಬೆಂಡೆಕಾಯಿ ಮಿರ್ಪುಡಿ ಮಾಡುವ ವಿಧಾನ

 

Bendekai mirpudi recipe in Kannada

Bendekai mirpudi recipe in Kannada | ಬೆಂಡೆಕಾಯಿ ಮಿರ್ಪುಡಿ ಮಾಡುವ ವಿಧಾನ

ಬೆಂಡೆಕಾಯಿ ಮಿರ್ಪುಡಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/4 kg ಬೆಂಡೆಕಾಯಿ
  2. 1 ಕಪ್ ಒಣಕೊಬ್ಬರಿ ತುರಿ 
  3. 1/2 ಕಪ್ ಹುರಿಗಡಲೆ
  4. 1 ಟೇಬಲ್ ಚಮಚ ಅಚ್ಚಖಾರದ ಪುಡಿ (ರುಚಿಗೆ ತಕ್ಕಂತೆ ಹೊಂದಿಸಿ)
  5. 2 ಟೀಸ್ಪೂನ್ ಉಪ್ಪು (ರುಚಿಗೆ ತಕ್ಕಂತೆ ಹೊಂದಿಸಿ)
  6. 2 ಟೀಸ್ಪೂನ್ ಬೆಲ್ಲ (ರುಚಿಗೆ ತಕ್ಕಂತೆ ಹೊಂದಿಸಿ)
  7. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  8. 1/2 ಟೀಸ್ಪೂನ್ ಜೀರಿಗೆ
  9. ಎಣ್ಣೆ ಬೆಂಡೆಕಾಯಿ ಕಾಯಿಸಲು

ಬೆಂಡೆಕಾಯಿ ಮಿರ್ಪುಡಿ ಮಾಡುವ ವಿಧಾನ:

  1. ಬೆಂಡೆಕಾಯಿಯನ್ನು ತೊಳೆದು ನೀರಾರಿಸಿ. 
  2. ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿಕೊಳ್ಳಿ. 
  3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. 
  4. ಕತ್ತರಿಸಿದ ಬೆಂಡೆಕಾಯಿಯನ್ನು ಬಿಸಿ ಎಣ್ಣೆಗೆ ಹಾಕಿ. 
  5. ಹೊಂಬಣ್ಣ ಬರುವವರೆಗೆ ಖಾಯಿಸಿ ತೆಗೆಯಿರಿ. 
  6. ನಂತರ ನಂತ್ರ ಒಂದು ಮಿಕ್ಸಿಜಾರಿನಲ್ಲಿ ಕೊಬ್ಬರಿ ತುರಿ ತೆಗೆದುಕೊಳ್ಳಿ. 
  7. ಅದಕ್ಕೆ ಹುರಿಗಡಲೆ, ಅಚ್ಚಖಾರದ ಪುಡಿ, ಉಪ್ಪು, ಬೆಲ್ಲ, ಹುಣಿಸೇಹಣ್ಣು ಮತ್ತು ಜೀರಿಗೆ ಸೇರಿಸಿ. 
  8. ನುಣ್ಣಗೆ ಪುಡಿ ಮಾಡಿ. 
  9. ಪುಡಿಯನ್ನು ಕರಿದು ತೆಗೆದ ಬೆಂಡೆಕಾಯಿಗೆ ಸೇರಿಸಿ, ಕಲಸಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 15 ದಿನಗಳ ಕಾಲ ಹಾಳಾಗುವುದಿಲ್ಲ. 
  10. ಬಿಸಿಯಾದ ಅನ್ನ ಮತ್ತು ತುಪ್ಪದೊಂದಿಗೆ ಬಡಿಸಿ. ಚಟ್ನಿ ಪುಡಿಯಂತೆ ಕಲಸಿ ತಿನ್ನಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಜುಲೈ 5, 2024

Instant rasam recipe in Kannada | ದಿಢೀರ್ ಸಾರು ಮಾಡುವ ವಿಧಾನ

 

ದಿಢೀರ್ ಸಾರು ಮಾಡುವ ವಿಧಾನ

Instant rasam recipe in Kannada | ದಿಢೀರ್ ಸಾರು ಮಾಡುವ ವಿಧಾನ

ದಿಢೀರ್ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/2 ಟೊಮೆಟೋ
  2. 1/2 ಟೀಸ್ಪೂನ್ ಸಾಸಿವೆ
  3. 7 - 8 ಕರಿಬೇವಿನ ಎಲೆ
  4. 1/4 ಟೀಸ್ಪೂನ್ ಅರಿಶಿನ ಪುಡಿ
  5. 1 ಟೇಬಲ್ ಸ್ಪೂನ್ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
  6. 1 ಟೇಬಲ್ ಸ್ಪೂನ್ ಎಣ್ಣೆ
  7. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 2 ಒಣ ಮೆಣಸಿನಕಾಯಿ
  2. 1 ಹಸಿಮೆಣಸಿನಕಾಯಿ
  3. 1 ಟೀಸ್ಪೂನ್ ಕಾಳುಮೆಣಸು
  4. 1 ಟೀಸ್ಪೂನ್ ಜೀರಿಗೆ
  5. 1/2 ಟೊಮೇಟೊ
  6. 7 - 8 ಎಸಳು ಬೆಳ್ಳುಳ್ಳಿ
  7. 1 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು
  8. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು

ದಿಢೀರ್ ಸಾರು ಮಾಡುವ ವಿಧಾನ:

  1. ಅರೆಯಲು ಪಟ್ಟಿಮಾಡಿದ ಪದಾರ್ಥಗಳನ್ನು (ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಕಾಳುಮೆಣಸು, ಜೀರಿಗೆ, ಟೊಮೇಟೊ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹುಣಿಸೇಹಣ್ಣು) ಮಿಕ್ಸಿಜಾರಿನಲ್ಲಿ ಸ್ವಲ್ಪ ನೀರು ಸೇರಿಸಿ ಅರೆದಿಟ್ಟುಕೊಳ್ಳಿ. 
  2. ನಂತರ ಎಣ್ಣೆ, ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.  
  3. ಅದಕ್ಕೆ ಟೊಮೇಟೊ ಹಾಕಿ ಹುರಿಯಿರಿ. 
  4. ಅರೆದ ಮಸಾಲೆ ಪೇಸ್ಟ್ ಮತ್ತು ಸ್ವಲ್ಪ ನೀರು ಸೇರಿಸಿ. 
  5. ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಮಗುಚಿ, ಕುದಿಸಿ. 
  6. ಸುಮಾರು ಅರ್ಧ ಲೀಟರ್ ನೀರು ಸೇರಿಸಿ ಕುದಿಸಿ. 
  7. ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  8. ಬಿಸಿಯಾದ ಅನ್ನದೊಂದಿಗೆ ಬಡಿಸಿ. ಅಥವಾ ಸೂಪ್ ತರಹ ಕುಡಿಯಲು ಕೊಡಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...